ಮನೆಯ ಹಿಂಭಾಗದಲ್ಲಿ ಹಸುಗಳನ್ನು ಕಟ್ಟಿದ್ದೆ. ಅವುಗಳನ್ನು ಕೊಟ್ಟಿಗೆಗೆ ಕಟ್ಟಲು ಹಿಡಿದುಕೊಂಡು ಬರುತ್ತಿದೆ. ಅವುಗಳ ಜೊತೆಯಲ್ಲಿದ್ದ ಒಂದು ಮಣಕ ಹಿಂದೆ ಉಳಿದಿತ್ತು. ಎಷ್ಟು ಹೊತ್ತಾದರೂ ಬರಲಿಲ್ಲ. ಕರೆದುಕೊಂಡು ಬರಲು ಹೋದಾಗ ಅದು ಸತ್ತು ಬಿದ್ದಿತ್ತು ಎಂದು ರೈತ ಆನಂದ್ ವಿವರಿಸಿದರು. ‘ಮಣಕಕ್ಕೆ ಎರಡು ವರ್ಷ ಆಗಿತ್ತು. ಗರ್ಭ ಧರಿಸುವ ಹಂತಕ್ಕೆ ಬಂದಿತ್ತು ಎಂದು ಅವರು ನೊಂದುಕೊಂಡರು. ಕಳೆದ ಮೇ ತಿಂಗಳಲ್ಲಿ ಇದೇ ಆನಂದ್ ಅವರ ತೋಟದಲ್ಲಿ ಬೆಳಿಗ್ಗೆ ವೇಳೆಯಲ್ಲೇ ಚಿರತೆ ಕಾಣಿಸಿಕೊಂಡಿತ್ತು. ಚಿರತೆಯನ್ನು ಹಿಡಿಯಲು ಪ್ರಯತ್ನಿಸಲಾಗುವುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು.