ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವೀರಯ್ಯ ಖರೀದಿಸಿದ್ದ ಪೀಠೋಪಕರಣ ವಾಪಸ್‌ಗೆ ದಾವೆ

Published : 8 ಆಗಸ್ಟ್ 2024, 16:29 IST
Last Updated : 8 ಆಗಸ್ಟ್ 2024, 16:29 IST
ಫಾಲೋ ಮಾಡಿ
Comments

ಬೆಂಗಳೂರು: ಡಿ.ದೇವರಾಜ ಅರಸು ಟ್ರಕ್‌ ಟರ್ಮಿನಲ್‌ ನಿಯಮಿತ (ಡಿಡಿಯುಟಿಟಿಎಲ್‌) ಅಧ್ಯಕ್ಷರಾಗಿದ್ದ ವೇಳೆ ಬಿಜೆಪಿ ಮುಖಂಡ ಡಿ.ಎಸ್.ವೀರಯ್ಯ ಅವರು ಗೃಹ ಬಳಕೆಯ ವಸ್ತುಗಳನ್ನು ಖರೀದಿಸಲು ವೆಚ್ಚ ಮಾಡಿರುವ ₹12.09 ಲಕ್ಷವನ್ನು ಬಡ್ಡಿ ಸಮೇತ ವಸೂಲಿಗೆ ಡಿಡಿಯುಟಿಟಿಎಲ್ ಮರು ಪ್ರಾಪ್ತಿ ದಾವೆ ಹೂಡಿದೆ.

ವೀರಯ್ಯ ಅವರಿಗೆ ರಾಜ್ಯ ಸಚಿವ ಸ್ಥಾನಮಾನ ನೀಡಿ, ಸಂಪುಟ ದರ್ಜೆ ಸೌಲಭ್ಯ ಕಲ್ಪಿಸಲಾಗಿತ್ತು. ವಿವಿಧ ಏಜೆನ್ಸಿ ಮತ್ತು ಡೀಲರ್‌ಗಳಿಂದ ವೀರಯ್ಯ ಅವರು ತಮ್ಮ ನಿವಾಸಕ್ಕೆ ಹವಾ ನಿಯಂತ್ರಕಗಳು, ವಾಷಿಂಗ್ ಮಷಿನ್, ಟಿ.ವಿ, ಫ್ರಿಡ್ಜ್, ಫ್ಯಾನ್, ಸೋಫಾ, ಕಾರ್ಪೆಟ್‌, ಕುರ್ಚಿಗಳು, ಡೈನಿಂಗ್ ಟೆಬಲ್ ಹಾಗೂ ಇತರೆ ವಸ್ತುಗಳನ್ನು ಖರೀದಿಸಿದ್ದರು.

ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಆ ವಸ್ತುಗಳನ್ನು ಹಿಂತಿರುಗಿಸುವಂತೆ 8–10 ಬಾರಿ ಪತ್ರ ಬರೆದರೂ ಅವರು ಸ್ಪಂದಿಸಿಲ್ಲ. ಹಾಗಾಗಿ ಬಡ್ಡಿ ಸಮೇತ ₹ 12.09 ಲಕ್ಷ ಮೌಲ್ಯದ ವಸ್ತುಗಳನ್ನು ಹಿಂತಿರುಗಿಸುವಂತೆ ಸಿಟಿ ಸಿವಿಲ್ ನ್ಯಾಯಾಲಯದಲ್ಲಿ ಡಿಡಿಯುಟಿಟಿಎಲ್‌ ದಾವೆ ಹೂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT