ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಿ’ ಖಾತಾ ಕಟ್ಟಡಗಳ ವಿಚಾರಣೆ

ಡಿ. 31ರೊಳಗೆ ವರದಿಗೆ ಲೋಕಾಯುಕ್ತರ ಆದೇಶ
Last Updated 5 ನವೆಂಬರ್ 2019, 7:45 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ 110 ಗ್ರಾಮಗಳಲ್ಲಿನ ‘ಬಿ’ ಖಾತಾ ನಿವೇಶನಗಳಲ್ಲಿ ಕಟ್ಟಲಾಗಿರುವ ಕಟ್ಟಡಗಳ ಬಗ್ಗೆ ಎಂಜಿನಿಯರ್‌ಗಳು, ಕಂದಾಯ ಅಧಿಕಾರಿಗಳಿಂದ ವಿಚಾರಣೆ ನಡೆಸುವಂತೆ ಲೋಕಾಯುಕ್ತ ನ್ಯಾಯಮೂರ್ತಿ ಪಿ. ವಿಶ್ವನಾಥ ಶೆಟ್ಟಿ ಆದೇಶಿಸಿದ್ದಾರೆ.

ಬಿ ಖಾತಾ ರಿಜಿಸ್ಟರ್‌ಗಳಲ್ಲಿ ಹೆಸರು ನೋಂದಾಯಿಸಿರುವ ವ್ಯಕ್ತಿಗಳ ಹೆಸರು ಹಾಗೂ ವಿಳಾಸದ ಜೊತೆಗೆ ಪ್ರತಿ ವರ್ಷ ಸಂಗ್ರಹಿಸಿರುವ ತೆರಿಗೆ ಕುರಿತಂತೆ ವರದಿ ಸಲ್ಲಿಸುವಂತೆಯೂ ಲೋಕಾಯುಕ್ತರು ಆದೇಶದಲ್ಲಿ ತಿಳಿಸಿದ್ದಾರೆ.

ಈ ಸಮಸ್ಯೆ ಪರಿಹಾರಕ್ಕೆ ಕೈಗೊಂಡಿರುವ ಕ್ರಮಗಳನ್ನು ಕುರಿತು ವಿವರಿಸುವಂತೆ ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ನೋಟಿಸ್‌ ಜಾರಿಗೊಳಿಸಬೇಕು. ತಮ್ಮ ಆದೇಶದ ಪ್ರತಿಯನ್ನು ಮುಖ್ಯ ಕಾರ್ಯದರ್ಶಿ ಅವರಿಗೂ ಕಳುಹಿಸಬೇಕು ಎಂದು ವಿಶ್ವನಾಥಶೆಟ್ಟಿ ಸೂಚಿಸಿದ್ದಾರೆ.

ಪ್ರಗತಿ ವರದಿಯನ್ನು ಬಿಬಿಎಂಪಿ ಕಮಿಷನರ್‌ ಡಿಸೆಂಬರ್‌ 31ರೊಳಗೆ ಸಲ್ಲಿಸಬೇಕು. ಬಿ ಖಾತಾ ನಿವೇಶಗಳಲ್ಲಿ ಕಟ್ಟಡ ನಿರ್ಮಿಸಿರುವ ಮಾಲೀಕರ ಸಮಸ್ಯೆಗಳನ್ನು ಆದ್ಯತೆ ಮೇಲೆ ತ್ವರಿತವಾಗಿಪರಿಹರಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.

ದಶಕಗಳಿಂದ ಪರಿಹಾರವಾಗದ ಸಮಸ್ಯೆಗೆ ಪರಿಹಾರ ಹುಡುಕುವ ಪಯತ್ನಗಳು ನಡೆಯುತ್ತಿರುವುದರಿಂದ ಪಾಲಿಕೆ ದುರಾಡಳಿತ ನಡೆಸುತ್ತಿದೆ ಎಂದು ಹೇಳುವುದು ಈ ಹಂತದಲ್ಲಿ ಸರಿಯಲ್ಲ. ಸಮಸ್ಯೆ ಪರಿಹಾರಕ್ಕೆ ಕೈಗೊಂಡಿರುವ ಕ್ರಮಗಳಿಗೆ ಸಂಬಂಧಿಸಿದ ಪ್ರಗತಿ ವರದಿಯನ್ನು ಸಲ್ಲಿಸಲು ಪ್ರತಿವಾದಿಗಳಿಗೆ ಎಂಟು ವಾರಗಳ ಕಾಲಾವಕಾಶ ನೀಡಿರುವುದು ನ್ಯಾಯ ಪರಿವಾಲನೆ ದೃಷ್ಟಿಯಿಂದ ಸಂಯೋಚಿತ ಕ್ರಮ. ನಿಗದಿತ ಅವಧಿಯೊಳಗೆ ಸಮಸ್ಯೆ ಪರಿಹರಿಸಲು ಪಾಲಿಕೆ ವಿಫಲವಾದರೆ ಅದನ್ನು ಅಸಮರ್ಪಕ ಕ್ರಮ ಎಂದು ಪರಿಗಣಿಸಬಹುದು ಎಂದೂಲೋಕಾಯುಕ್ತರು ಅಭಿಪ್ರಾಯಪಟ್ಟಿದ್ದಾರೆ.

ಬಿಬಿಎಂಪಿ ಕಂದಾಯ ವಿಭಾಗದ ಜಂಟಿ ಕಮಿಷನರ್‌ ಎಂ. ವೆಂಕಟಾಚಲಪತಿ ಅವರು ಬಿ ಖಾತಾನಿವೇಶನಗಳಲ್ಲಿ ಆಸ್ತಿ ಹೊಂದಿರುವ ಮಾಲೀಕರ ಸಮಸ್ಯೆಗಳ ಪರಿಹಾರಕ್ಕೆ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಲಾಗಿದೆ. ಬಿ ಖಾತಾಗಳಲ್ಲಿ ಕಟ್ಟಡ ಹೊಂದಿರುವವರು ಮಾಲೀಕತ್ವ ಸಾಬೀತುಪಡಿಸಲು ಪರದಾಡುತ್ತಿದ್ದಾರೆ. ಅವರಿಗೆ ಬ್ಯಾಂಕ್‌ ಸಾಲ ದೊರೆಯುವುದಿಲ್ಲ. ಅಲ್ಲದೆ, ನಾಗರಿಕ ಸೌಲಭ್ಯಗಳೂ ಸಿಗುತ್ತಿಲ್ಲ. ಇಂಥ 4.10 ಲಕ್ಷ ಮಾಲೀಕರಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT