ಬುಧವಾರ, ಜುಲೈ 6, 2022
22 °C

'ರಸ್ತೆ ಸಾರಿಗೆ ನಿಗಮ ನಷ್ಟ: ಲಾಭಕ್ಕೆ ತರಲು ತಜ್ಞರನ್ನೊಳಗೊಂಡ ಕಾರ್ಯಪಡೆ ರಚನೆ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯ ರಸ್ತೆ ಸಾರಿಗೆಯ ಎಲ್ಲ ನಿಗಮಗಳು ನಷ್ಟದಲ್ಲಿ ಇರುವುದರಿಂದ ಲಾಭಕ್ಕೆ ತರಲು ತಜ್ಞರನ್ನು ಒಳಗೊಂಡ ಕಾರ್ಯಪಡೆ ರಚಿಸಲಾಗುವುದು ಎಂದು ಸಾರಿಗೆ ಸಚಿವ ಬಿ.ಶ್ರೀ ರಾಮುಲು ತಿಳಿಸಿದರು.

ಇಲಾಖೆಯ ಪ್ರಗತಿ ಪರಿಶೀಲನೆ ಸಭೆಯ ಬಳಿಕ ಮಾತನಾಡಿದ ಅವರು, ಆರು ತಿಂಗಳಲ್ಲಿ ನಷ್ಟವು ಇಲ್ಲದ - ಲಾಭವೂ ಇಲ್ಲದ ಹಂತಕ್ಕೆ ತರಲಾಗುವುದು ಎಂದರು.

ಕೆಎಸ್‌ಆರ್‌ಟಿಸಿ ₹427 ಕೋಟಿ, ಬಿಎಂಟಿಸಿ ₹548, ಎನ್‌ಡಬ್ಲ್ಯುಕೆಆರ್‌ಟಿಸಿ ₹389 ಕೋಟಿ, ಕಲ್ಯಾಣ ಕರ್ನಾಟಕ ಸಾರಿಗೆ ನಿಗಮ ₹191 ಕೋಟಿ, ಒಟ್ಟು ₹1171 ಕೋಟಿ ನಷ್ಟ ಆಗಿದೆ ಎಂದು ವಿವರ ನೀಡಿದರು.

ಸಾರಿಗೆ ನಿಗಮಗಳ ನೌಕರರಿಗೆ ಸರ್ಕಾರದ ಬೊಕ್ಕಸದಿಂದ ಸಂಬಳ ನೀಡಲಾಗಿದೆ. ಒಟ್ಟು ₹1953 ಕೋಟಿ ಸಂಬಳಕ್ಕಾಗಿ ಸರ್ಕಾರ ನೀಡಿದೆ ಎಂದು ರಾಮುಲು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು