ಗುರುವಾರ , ಮೇ 26, 2022
23 °C
ಆರೋಪಿ ಯುವಕನನ್ನು ಬಂಧಿಸಿದ ನಂದಿನಿ ಲೇಔಟ್ ಠಾಣೆ ಪೊಲೀಸರು

ಪ್ರೀತಿ ಒಪ್ಪದಿದ್ದಕ್ಕೆ ಯುವತಿ ಮೇಲೆ ಹಲ್ಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪ್ರೀತಿ ಮಾಡಲು ಒಪ್ಪಲಿಲ್ಲವೆಂಬ ಕಾರಣಕ್ಕೆ ಯುವತಿ ಯೊಬ್ಬರ ಮೇಲೆ ಹಲ್ಲೆ ಮಾಡಲಾಗಿದ್ದು, ಈ ಸಂಬಂಧ ದೀಪಕ್ (32) ಎಂಬಾತ ನನ್ನು ನಂದಿನಿ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಸ್ಥಳೀಯ ನಿವಾಸಿಯಾಗಿರುವ ಆರೋಪಿ, ಲಗ್ಗೆರೆ ನಿವಾಸಿಯಾದ 21 ವರ್ಷದ ಯುವತಿ ಮೇಲೆ ಹಲ್ಲೆ ಮಾಡಿದ್ದಾನೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆ ಯುತ್ತಿರುವ ಯುವತಿಯ ಪೋಷಕರು ಠಾಣೆಗೆ ದೂರು ನೀಡಿದ್ದರು’ ಎಂದು ಪೊಲೀಸ್ ಮೂಲಗಳು ಹೇಳಿವೆ.

‘ಸಂತ್ರಸ್ತ ಯುವತಿ, ಖಾಸಗಿ ಕಾಲೇಜಿ ನಲ್ಲಿ ಬಿ.ಕಾಂ ವ್ಯಾಸಂಗ ಮಾಡುತ್ತಿದ್ದರು. ಅವರನ್ನು ಹಿಂಬಾಲಿಸುತ್ತಿದ್ದ ಆರೋಪಿ, ಪ್ರೀತಿ ಮಾಡುವಂತೆ ಒತ್ತಾಯಿಸುತ್ತಿದ್ದ. ಆತನ ಕಿರುಕುಳದಿಂದ ಬೇಸತ್ತ ಯುವತಿ ಪೋಷಕರಿಗೆ ವಿಷಯ ತಿಳಿಸಿದ್ದರು.’

‘ಆರೋಪಿ ದೀಪಕ್‌ಗೆ ಬುದ್ದಿವಾದ ಹೇಳಿದ್ದ ಪೋಷಕರು, ಯುವತಿ ತಂಟೆಗೆ ಹೋಗದಂತೆ ತಾಕೀತು ಮಾಡಿದ್ದರು.ಅಷ್ಟಕ್ಕೆ ಸುಮ್ಮನಾಗದ ಆರೋಪಿ, ಪುನಃ ಯುವತಿಯನ್ನು ಪೀಡಿಸಲಾರಂಭಿಸಿದ್ದ. ಬೇಸತ್ತ ಯುವತಿ ಹಾಗೂ ಪೋಷಕರು, ತಮ್ಮ ಮನೆಯಲ್ಲೇ ಖಾಲಿ ಮಾಡಿ ಬೇರೆಡೆ ಸ್ಥಳಾಂತರಗೊಂಡಿದ್ದರು.’

‘ಪರಿಚಯಸ್ಥರ ಮೂಲಕ ಯುವತಿ ನಂಬರ್ ಪಡೆದಿದ್ದ ಆರೋಪಿ, ಕರೆ ಮಾಡಲಾರಂಭಿಸಿದ್ದ. ಪುನಃ, ಪ್ರೀತಿ ಮಾಡುವಂತೆ ಪೀಡಿಸಲಾರಂಭಿ ಸಿದ್ದ. ಅದಕ್ಕೆ ಯುವತಿ ಒಪ್ಪಿರಲಿಲ್ಲ. ಜನವರಿ 25ರಂದು ಸ್ನೇಹಿತರ ಜತೆ ಯುವತಿ ಟ್ಯೂಶನ್‌ಗೆ ಹೊರಟಿದ್ದಾಗ ಅಡ್ಡಗಟ್ಟಿದ್ದ ಆರೋಪಿ, ಚೂರಿಯಿಂದ ಕತ್ತು, ಬೆನ್ನು ಹಾಗೂ ಕೈ ಭಾಗಕ್ಕೆ ಇರಿದಿದ್ದ. ರಕ್ತಸ್ರಾವದಿಂದ ಬಳಲುತ್ತಿದ್ದ ಯುವತಿ ಯನ್ನು ಸ್ನೇಹಿತರು ಹಾಗೂ ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು’ ಎಂದೂ ಪೊಲೀಸ್ ಮೂಲಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.