ಪ್ರೀತ್ಸೆ ಅಂತ ಪೀಡಿಸುತ್ತಿದ್ದವ ಸೆರೆ

7

ಪ್ರೀತ್ಸೆ ಅಂತ ಪೀಡಿಸುತ್ತಿದ್ದವ ಸೆರೆ

Published:
Updated:

ಬೆಂಗಳೂರು: ತನ್ನನ್ನು ಪ್ರೀತಿಸುವಂತೆ ಒತ್ತಾಯಿಸಿ ಯುವತಿಗೆ ಕಿರುಕುಳ ನೀಡುತ್ತಿದ್ದ ಆರೋಪದಡಿ ಆನಂದ್‌ (30) ಎಂಬಾತನನ್ನು ಮಹಾಲಕ್ಷ್ಮಿ ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕಮಲಾನಗರ ನಿವಾಸಿಯಾದ ಆನಂದ್‌, ಎಂಜಿನಿಯರಿಂಗ್ ಪದವೀಧರ ಎಂದು ಹೇಳಿಕೊಂಡಿದ್ದ. 26 ವರ್ಷದ ಯುವತಿ ನೀಡಿದ್ದ ದೂರಿನಡಿ ಎಫ್‌ಐಆರ್‌ ದಾಖಲಾಗಿತ್ತು.

‘ಯುವತಿಯು ನಿತ್ಯವೂ ಕೆಲಸಕ್ಕೆ ಹೋಗುತ್ತಿದ್ದರು. ಒಂದು ವರ್ಷದಿಂದ ಆರೋಪಿ ಅವರನ್ನು ಹಿಂಬಾಲಿಸುತ್ತಿದ್ದ. ಕೆಲವು ಬಾರಿ ರಸ್ತೆ ಮಧ್ಯೆಯೇ ಅಡ್ಡಗಟ್ಟಿ ಕಿರುಕುಳ ನೀಡುತ್ತಿದ್ದ. ತನ್ನನ್ನು ಪ್ರೀತಿಸಿ ಮದುವೆಯಾಗುವಂತೆ ಪೀಡಿಸುತ್ತಿದ್ದ. ಈ ಬಗ್ಗೆ ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದರು’ ಎಂದು ಪೊಲೀಸರು ಹೇಳಿದರು.

‘ಸಂತ್ರಸ್ತೆಯು ತಮ್ಮ ಸಹೋದರಿ ಜೊತೆ ಆಗಸ್ಟ್‌ 6ರಂದು ಸಂಜೆ ಮನೆಗೆ ಹೊರಟಿದ್ದಾಗ, ಆರೋಪಿ ಅಡ್ಡಗಟ್ಟಿದ್ದ. ಅಲ್ಲದೆ ಎಳೆದಾಡಿ ದುರ್ವರ್ತನೆ ತೋರಿದ್ದ. ‘ನನ್ನನ್ನು ಮದುವೆಯಾಗು. ಇಲ್ಲದಿದ್ದರೆ, ನಿನ್ನನ್ನು ಜೀವಸಹಿತ ಬಿಡುವುದಿಲ್ಲ’ ಎಂದು ಬೆದರಿಕೆ ಹಾಕಿದ್ದ’ ಎಂದು ತಿಳಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !