ಬೆಂಗಳೂರು: ಎಲ್ಪಿಜಿ ಸಿಲಿಂಡರ್ಗಳ ಸರಬರಾಜು ಸ್ಥಗಿತವಾಗಿರುವ ಕಾರಣ ಬೆಂಗಳೂರು ನಗರದ ಹೋಟೆಲ್, ಪೇಯಿಂಗ್ ಗೆಸ್ಟ್ಗಳು (ಪಿ.ಜಿ) ಸರ್ಕಾರಿ ಶಾಲೆಗಳು, ವಸತಿನಿಲಯಗಳು, ಕಲ್ಯಾಣಮಂಟಪಗಳಿಗೂ ಬಿಸಿ ತಟ್ಟಿದೆ.

ಬೆಂಗಳೂರು ನಗರದ ಕೆಲ ಹೋಟೆಲ್ಗಳ ಮಾಲೀಕರು ಉದ್ದಿನ ವಡೆ, ಮಸಾಲೆ ದೋಸೆ, ಬಜ್ಜಿ, ಪಕೋಡ, ಪೂರಿ ಮತ್ತು ಗೋಬಿ ಮಂಚೂರಿ ಸೇರಿದಂತೆ ಅನಿಲ ಹೆಚ್ಚು ಬಳಕೆಯಾಗುವ ಆಹಾರ ಪದಾರ್ಥಗಳನ್ನು ತಯಾರಿಸದಿರಲು ನಿರ್ಧರಿಸಿದ್ದು, ಹೋಟೆಲ್ ಮೆನುಗಳಲ್ಲಿ ಬದಲಾವಣೆಗಳನ್ನು ಮಾಡಿಕೊಂಡಿದ್ದಾರೆ. ಈ ಬಗ್ಗೆ ಹೋಟೆಲ್ಗಳಲ್ಲಿ ಫಲಕಗಳನ್ನು ಅಳವಡಿಸಿದ್ದಾರೆ.

ಕಡಿಮೆ ಅನಿಲ ಬಳಸಿ ಮಾಡುವ ಅಕ್ಕಿಯ ಪದಾರ್ಥಗಳಾದ ಚಿತ್ರಾನ್ನ, ಪುಲಾವ್, ಬಿಸಿಬೇಳೆ ಭಾತ್ ತಯಾರಿಸಲು ಹೋಟೆಲ್ಗಳಲ್ಲಿ ಆದ್ಯತೆ ನೀಡಲಾಗುತ್ತಿದೆ. ‘ಎಣ್ಣೆಯಲ್ಲಿ ಕರಿದ ತಿಂಡಿಗಳನ್ನು ಕೇಳಬೇಡಿ’ ಎನ್ನುವ ಫಲಕಗಳನ್ನು ಹೋಟೆಲ್ಗಳಲ್ಲಿ ರಾರಾಜಿಸುತ್ತಿವೆ.

‘ವಾಣಿಜ್ಯ ಸಿಲಿಂಡರ್ಗಳ ದಾಸ್ತಾನು ಇಲ್ಲದಿರುವ ಕಾರಣ, ಇರುವ ಅಲ್ಪ ಪ್ರಮಾಣದ ಸಿಲಿಂಡರ್ ಬಳಸಿ ದಿನದ ವ್ಯಾಪಾರ–ವಹಿವಾಟು ಮಾಡುತ್ತಿದ್ದೇವೆ. ಎಣ್ಣೆಯಲ್ಲಿ ಕರೆಯುವ ತಿಂಡಿಗಳಿಗೆ ನಿರಂತರವಾಗಿ ಹೆಚ್ಚಿನ ಅನಿಲ ಬೇಕಾಗುತ್ತದೆ. ಆದ್ದರಿಂದ ಇವುಗಳನ್ನು ತಾತ್ಕಾಲಿಕವಾಗಿ ತಯಾರಿಸದಿರಲು ನಿರ್ಧಾರ ಕೈಗೊಳ್ಳಲಾಗಿದೆ. ಇದರಿಂದ ಹೋಟೆಲ್ಗಳಿಗೆ ಶೇ 20ರಿಂದ 30ರಷ್ಟು ಆದಾಯ ಕುಸಿಯುವ ಸಾಧ್ಯತೆ ಇದೆ’ ಎಂದು ಹೋಟೆಲ್ ಮಾಲೀಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಬೆಂಗಳೂರು ನಗರದಲ್ಲಿ 15 ಸಾವಿರಕ್ಕೂ ಹೆಚ್ಚು ಪಿ.ಜಿಗಳಿದ್ದು, 8 ಲಕ್ಷದಿಂದ 10 ಲಕ್ಷ ಮಂದಿ ಪಿ.ಜಿಗಳಲ್ಲಿ ವಾಸಿಸುತ್ತಿದ್ದಾರೆ. ವಾಣಿಜ್ಯ ಸಿಲಿಂಡರ್ಗಳ ಕೊರತೆ ಆಗಿರುವ ಕಾರಣ ನಮ್ಮ ಗ್ರಾಹಕರಿಗೆ ಸೋಮವಾರದಿಂದ ಶುಕ್ರವಾರದವರೆಗೆ ದಿನಕ್ಕೆ ಎರಡು ಬಾರಿ ಹಾಗೂ ಶನಿವಾರ ಹಾಗೂ ಭಾನುವಾರ ಮೂರು ಹೊತ್ತು ಊಟ ನೀಡುವಂತೆ ನಗರದ ಎಲ್ಲ ಪಿ.ಜಿಗಳಿಗೆ ಸೂಚನೆ ನೀಡಲಾಗಿದೆ’ ಎಂದು ಪಿ.ಜಿ ಮಾಲೀಕರ ಕಲ್ಯಾಣ ಸಂಘದ ಅಧ್ಯಕ್ಷ ಡಿ.ಟಿ. ಅರುಣ್ಕುಮಾರ್ ತಿಳಿಸಿದರು.

‘ಪಿ.ಜಿಗಳಲ್ಲಿ ಹೆಚ್ಚು ಅನಿಲ ಬಳಕೆಯಾಗುವ ಆಹಾರ ಪದಾರ್ಥಗಳನ್ನು ತಯಾರಿಸದಿರಲು ನಿರ್ಧರಿಸಲಾಗಿದೆ. ಅಗತ್ಯ ಸಮಯದಲ್ಲಿ ಇಂಡಕ್ಷನ್ ಸ್ಟೌ ಬಳಕೆ ಮಾಡಬೇಕು. ಎಲೆಕ್ಟ್ರಿಕ್ ರೈಸ್ ಕುಕ್ಕರ್ಗಳನ್ನು ಬಳಸಬೇಕು. ಒಂದೇ ಪಿ.ಜಿಗಳಲ್ಲಿ ಆಹಾರ ತಯಾರಿಸಿ ಇತರೆ ಪಿ.ಜಿಗಳಿಗೆ ವಿತರಿಸುವಂತೆ ಎಲ್ಲ ಪಿ.ಜಿಗಳಿಗೆ ಸೂಚನೆ ನೀಡಲಾಗಿದೆ’ ಎಂದು ವಿವರಿಸಿದರು.

ಎಲೆಕ್ಟ್ರಿಕ್ ಸ್ಟೌ ಮೊರೆ

‘ಇಂಡಕ್ಷನ್ ಸ್ಟೌ ಬಳಸಿಕೊಂಡು ಕಾಫಿ–ಟೀ ತಯಾರಿಸಲಾಗುತ್ತಿದೆ. ಇದರಿಂದ ಕನಿಷ್ಠ 10 ಕೆ.ಜಿ ಎಲ್ಪಿಜಿ ಅನಿಲ ಉಳಿಸಬಹುದು. ₹2 ಲಕ್ಷ ಬೆಲೆಯ ಎಲೆಕ್ಟ್ರಿಕ್ ದೋಸೆ ಒಲೆ ಖರೀದಿಸುವ ಕುರಿತು ಚಿಂತನೆ ಮಾಡುತ್ತಿದ್ದೇವೆ. ಎಲೆಕ್ಟ್ರಿಕ್ ಒಲೆಗೆ ಬೇಕಾಗುವ ಪಾತ್ರೆಗಳನ್ನು ಖರೀದಿಸಬೇಕು. ನಮ್ಮ ಉದ್ಯಮ ಉಳಿಸಿಕೊಳ್ಳಬೇಕು ಹಾಗೂ ಗ್ರಾಹಕರಿಗೆ ಸಮಸ್ಯೆ ಆಗದಂತೆ ನೋಡಿಕೊಳ್ಳುತ್ತಿದ್ದೇವೆ’ ನಿಸರ್ಗ ಗ್ರ್ಯಾಂಡ್ನ ಮಾಲೀಕ ಎಸ್.ಪಿ. ಕೃಷ್ಣರಾಜು ‘ಪ್ರಜಾವಾಣಿ’ಗೆ ತಿಳಿಸಿದರು. ‘ಈಗ ನಮ್ಮ ಹೋಟೆಲ್ನಲ್ಲಿ ಎಲ್ಪಿಜಿ ಸಿಲಿಂಡರ್ ಹೆಚ್ಚು ಬಳಕೆಯಾಗುವ ರಾಗಿ ಅಕ್ಕಿ ರೊಟ್ಟಿ ಮಾಡುವುದನ್ನು ಸ್ಥಗಿತಗೊಳಿಸಲಾಗಿದೆ. ದೋಸೆ ಸೇರಿದಂತೆ ಎಣ್ಣೆಯಲ್ಲಿ ಕರಿಯುವ ಪದಾರ್ಥಗಳನ್ನು ಗ್ರಾಹಕರಿಗೆ ಪೂರೈಸಲು ಸಮಯ ನಿಗದಿಪಡಿಸಲಾಗಿದೆ’ ಎಂದು ವಿವರಿಸಿದರು.

‘ಎಲ್ಪಿಜಿ: ಅಕ್ರಮ ದಾಸ್ತಾನಿಗೆ ಕಡಿವಾಣ ಹಾಕಿ’

‘ಕಾಳಸಂತೆಯಲ್ಲಿ ಎಲ್ಪಿಜಿ ಸಿಲಿಂಡರ್ಗಳ ಮಾರಾಟ ಮತ್ತು ಅಕ್ರಮ ದಾಸ್ತಾನು ಆಗದಂತೆ ಪೊಲೀಸ್ ಸಾರಿಗೆ ಹಾಗೂ ಆಹಾರ ಇಲಾಖೆಯ ಅಧಿಕಾರಿಗಳು ಕಟ್ಟುನಿಟ್ಟಿನ ನಿಗಾ ವಹಿಸಬೇಕು’ ಎಂದು ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಸೂಚನೆ ನೀಡಿದ್ದಾರೆ. ಪೊಲೀಸ್ ಇಲಾಖೆ ಸಾರಿಗೆ ಆಹಾರ ಇಲಾಖೆ ಅಧಿಕಾರಿಗಳು ಹಾಗೂ ಹೋಟೆಲ್ ಮಾಲೀಕರ ಸಂಘದ ಜೊತೆಗೆ ಬುಧವಾರ ನಡೆದ ಸಭೆಯಲ್ಲಿ ಅವರು ಮಾತನಾಡಿದರು. ಲಭ್ಯ ಇರುವ ಸಿಲಿಂಡರ್ಗಳಲ್ಲಿ ಶೇ 50ರಷ್ಟನ್ನು ಹೋಟೆಲ್ಗಳಿಗೆ ಪೂರೈಸುವಂತೆ ಹೋಟೆಲ್ ಮಾಲೀಕರ ಸಂಘವು ಸಭೆಯಲ್ಲಿ ಮನವಿ ಮಾಡಿತು. ‘ನಿಮಗೆ ಹೆಚ್ಚು ಸಿಲಿಂಡರ್ಗಳನ್ನು ಪೂರೈಸಲು ಸಾಧ್ಯವಾಗುವುದಿಲ್ಲ. ಈ ಹಂತದಲ್ಲಿ ನೀವು ಸಹಕಾರ ನೀಡಬೇಕು. ನೀವು ಅಂಕಿ-ಅಂಶಗಳ ಸಹಿತ ಮತ್ತೊಮ್ಮೆ ಮನವಿ ನೀಡಿದರೆ ಎಷ್ಟು ಪ್ರಮಾಣದಲ್ಲಿ ಒದಗಿಸಬಹುದು ಎಂಬುದನ್ನು ಪರಿಶೀಲಿಸಲಾಗುವುದು’ ಎಂದು ಶಾಲಿನಿ ರಜನೀಶ್ ಭರವಸೆ ನೀಡಿದ್ದಾರೆ.

‘ಎಲ್ಪಿಜಿಗೆ ಸಂಬಂಧಿಸಿದ ಸಾರ್ವಜನಿಕರ ಅಹವಾಲು ಹಾಗೂ ದೂರು ಆಲಿಸಲು ಆಹಾರ ಇಲಾಖೆಯಿಂದ ಕೂಡಲೇ ಸಹಾಯವಾಣಿ ಆರಂಭಿಸುವಂತೆ ಶಾಲಿನಿ ರಜನೀಶ್ ಅವರು ಅಧಿಕಾರಿಗಳಿಗೆ ಸೂಚಿಸಿದರು’ ಎಂದು ಬೆಂಗಳೂರು ಹೋಟೆಲ್ಗಳ ಮಾಲೀಕರ ಸಂಘದ ಗೌರವ ಅಧ್ಯಕ್ಷ ಪಿ.ಸಿ ರಾವ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.