ಬೆಂಗಳೂರು: ಎಲ್ಪಿಜಿ ಸಿಲಿಂಡರ್ ಪೂರೈಕೆಯಲ್ಲಿನ ವ್ಯತ್ಯಯದಿಂದಾಗಿ ಸಮಸ್ಯೆ ಬಿಗಡಾಯಿಸಿದ್ದು, ಮತ್ತಷ್ಟು ಹೋಟೆಲ್, ರೆಸ್ಟೋರೆಂಟ್ಗಳು ಬಂದ್ ಆಗಿವೆ.

ದರ್ಶಿನಿ, ಹೋಟೆಲ್, ರೆಸ್ಟೋರೆಂಟ್ಗಳ ತಿಂಡಿ, ಊಟವನ್ನೇ ಅವಲಂಬಿಸಿದ್ದ ಕಾರ್ಮಿಕರು, ಆಟೊ, ಕ್ಯಾಬ್, ಬಸ್, ಲಾರಿ ಚಾಲಕರು ಪರದಾಡುತ್ತಿದ್ದಾರೆ. ಈ ನಡುವೆ ಆಟೊ ಎಲ್ಪಿಜಿ ಬಂಕ್ಗಳಿಗೂ ಅನಿಲ ಕೊರತೆ ಎದುರಾಗಿದ್ದು, ನಗರದ ಹಲವು ಆಟೊ ಎಲ್ಪಿಜಿ ಬಂಕ್ಗಳು ಬಂದ್ ಆಗಿವೆ.

ವಾಣಿಜ್ಯ ಬಳಕೆ ಅನಿಲ ಪೂರೈಕೆ ಅಸ್ತವ್ಯಸ್ತವಾಗಿದ್ದು,ಹೋಟೆಲ್ ಉದ್ಯಮದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಹೋಟೆಲ್ ನಿರ್ವಹಣೆ, ಕೆಲಸಗಾರರ ಸಂಬಳದ ಖರ್ಚು ಹೊರೆಯಾಗುತ್ತಿದೆ. ಹಲವು ಹೋಟೆಲ್ ತೆರೆದಿದ್ದರೂ ಕಾಫಿ, ಟೀ, ಇಡ್ಲಿ, ಅನ್ನ ಸಾಂಬರ್ ಮಾತ್ರ ನೀಡಲಾಗುತ್ತಿದೆ. ಹೋಟೆಲ್, ರೆಸ್ಟೋರೆಂಟ್ಗಳಿಗೆ ಪೂರೈಕೆ ಮಾಡುವ ಪ್ರತಿ ಸಿಲಿಂಡರ್ಗೆ ₹3,500 ವರೆಗೆ ದರ ವಸೂಲು ಮಾಡಲಾಗುತ್ತಿದೆ.

ಪರ್ಯಾಯ ಮಾರ್ಗಗಳತ್ತ ಚಿಂತಿಸುತ್ತಿರುವ ಮಾಲೀಕರು, ಎಲೆಕ್ಟ್ರಿಕ್ ಸ್ಟೌ ಖರೀದಿ ಹಾಗೂ ಸೌದೆ ಒಲೆ ಹುಡುಕಾಟ ಆರಂಭಿಸಿದ್ದಾರೆ. ಕೆಲವೆಡೆ ಬೇರೆ ಕಡೆ ಅಡುಗೆ ಮಾಡಿಕೊಂಡು, ಹೋಟೆಲ್ಗೆ ತಂದು ಮಾರಾಟ ಮಾಡಲಾಗುತ್ತಿದೆ. ಗಾಂಧಿ ನಗರದಲ್ಲಿ ಐಡಿಸಿ ಹೋಟೆಲ್, ಆನಂತಂ ಕೆಫೆ, ದೊಣ್ಣೆ ಬಿರಿಯಾನಿ, ಜನತಾ ಹೋಟೆಲ್ ಬಂದ್ ಆಗಿವೆ. ವಿವಿ ಪುರಂ ಫುಡ್ ಸ್ಟ್ರೀಟ್ನಲ್ಲಿ ನಿತ್ಯ ಬಗೆ ಬಗೆಯ ತಿಂಡಿಗಳು ಸಿಗುತ್ತಿದ್ದವು. ಆದರೆ, ಶುಕ್ರವಾರ ಬಹುತೇಕ ಆಹಾರ ಮಳಿಗೆಗಳನ್ನು ಬಂದ್ ಮಾಡಲಾಗಿತ್ತು.

ಕಲಾಸಿಪಾಳ್ಯದಲ್ಲಿರುವ ಸೌದೆ ಡಿಪೊದಲ್ಲಿ ಸೌದೆಗೆ ಹೆಚ್ಚು ಬೇಡಿಕೆ ಬರುತ್ತಿದೆ. ನಗರದ ಪಬ್ಗಳು ಮತ್ತು ಬಾರ್ಗಳು ಮೆನುಗಳಲ್ಲಿ ಕಡಿತ ಮಾಡಿವೆ.

‘ಸೌದೆ ಒಲೆಯಲ್ಲಿ ಆಹಾರ ತಯಾರಿಸುತ್ತಿದ್ದೇವೆ. ನಿತ್ಯ ಕನಿಷ್ಠ ಐದು ಸಿಲಿಂಡರ್ಗಳು ಬೇಕು. ಆದರೆ, ಈಗ ಎರಡು ಸಿಲಿಂಡರ್ಗಳು ಮಾತ್ರ ಸಿಗುತ್ತಿವೆ. ಅದಕ್ಕೂ ₹3,000 ಪಾವತಿಸಲಾಗಿದೆ. ಅನ್ನ, ಸಾಂಬರ್ ಕಡೆ ಗಮನ ಹರಿಸಲಾಗುತ್ತಿದೆ’ ಎಂದು ಬಸವನಗುಡಿಯಲ್ಲಿರುವ ಹೋಟೆಲ್ ಮಾಲೀಕ ಭರತ್ ಕುಮಾರ್ ತಿಳಿಸಿದರು.

ಗೃಹ ಬಳಕೆ ಅನಿಲ (ಎಲ್.ಪಿ.ಜಿ) ಪೂರೈಕೆಯಲ್ಲೂ ವ್ಯತ್ಯಯ ಕಂಡು ಬಂದಿದೆ. ಸಿಲಿಂಡರ್ ಬುಕಿಂಗ್ ಸಂಖ್ಯೆಗೆ ಕರೆ ಮಾಡಿದರೆ, 1 ಸಿಲಿಂಡರ್ ಬುಕ್ ಮಾಡಿದ 24 ದಿನಗಳವರೆಗೆ ಇನ್ನೊಂದು ಬುಕಿಂಗ್ ಮಾಡಲು ಸಾಧ್ಯವಿಲ್ಲ ಎಂಬ ಸಂದೇಶ ಬರುತ್ತಿರುವ ಕಾರಣ ಸಾರ್ವಜನಿಕರೂ ಆತಂಕಗೊಂಡಿದ್ದಾರೆ. ಗ್ಯಾಸ್ ಏಜೆನ್ಸಿ ಮುಂದೆ ಗ್ರಾಹಕರು ಸಾಲುಗಟ್ಟಿ ನಿಂತಿರುವ ದೃಶ್ಯ ಕಂಡು ಬಂತು.

ನಗರದ ವ್ಯಾಪ್ತಿಯಲ್ಲಿ 140 ರಿಂದ 150 ಆಟೊ ಎಲ್ಪಿಜಿ ಬಂಕ್ಗಳಿದ್ದು ಬಹುತೇಕ ಬಂಕ್ಗಳಲ್ಲಿ ‘ನೋ ಸ್ಟಾಕ್’ ಫಲಕಗಳನ್ನು ಹಾಕಲಾಗಿದೆ. ಆಟೊ ಎಲ್ಪಿಜಿ ದರದಲ್ಲೂ ಏರಿಕೆ ಕಂಡಿದ್ದು, ಪ್ರತಿ ಕೆ.ಜಿ ಗೆ ₹10 ರಿಂದ ₹20 ದರ ಏರಿಕೆಯಾಗಿದೆ. ಪ್ರತಿ ಕೆ.ಜಿ. ಗೆ ₹ 58ರಂತೆ ಆಟೊ ಎಲ್ಪಿಜಿ ಮಾರಾಟವಾಗುತ್ತಿತ್ತು. ಇದೀಗ ಬಂಕ್ಗಳಲ್ಲಿ ₹69.74ಕ್ಕೆ ಮಾರಾಟ ಮಾಡಲಾಗುತ್ತಿದೆ.

ಶಿವಾಜಿ ನಗರದಲ್ಲಿ ಗೃಹ ಬಳಕೆಯ ಸಿಲಿಂಡರ್ಗಳಿಗಾಗಿ ವಿತರಕರು ಮತ್ತು ಗ್ರಾಹಕರ ಮಧ್ಯೆ ಜಗಳ ನಡೆಯಿತು. ಖಾಲಿ ಸಿಲಿಂಡರ್ ಹಿಡಿದು ಬಂದು ಗ್ಯಾಸ್ ಏಜೆನ್ಸಿ ಸಿಬ್ಬಂದಿಯನ್ನು ಸುತ್ತುವರೆದ ಸಾರ್ವಜನಿಕರು, ಪರಸ್ಪರ ಜಗಳವಾಡಿದ್ದಾರೆ.

‘ಯುದ್ಧದ ಪರಿಣಾಮ ನಗರದಲ್ಲಿ ಟ್ಯಾಕ್ಸಿ ಉದ್ಯಮಕ್ಕೂ ಪೆಟ್ಟು ಬಿದ್ದಿದೆ. ಸುಮಾರು 1 ಲಕ್ಷದ 30 ಸಾವಿರ ಪ್ರಯಾಣಿಕರು ನಿತ್ಯ ಪ್ರಯಾಣಿಸುವ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸದ್ಯ ವಿಮಾನ ಸಂಚಾರ ಇಳಿಮುಖವಾಗಿದೆ. ಮೂರರಿಂದ ನಾಲ್ಕು ಟ್ರಿಪ್ ಮಾಡುತ್ತಿದ್ದ ಟ್ಯಾಕ್ಸಿಗಳು ಈಗ ಒಂದು ಟ್ರಿಪ್ ಮಾಡುತ್ತಿವೆ’ ಎಂದು ಚಾಲಕರು ಮತ್ತು ಆಪರೇಟರ್ ಸಂಘದ ಅಧ್ಯಕ್ಷ ಹಮೀದ್ ಅಕ್ಬರ್ ಅಲಿ ತಿಳಿಸಿದರು.

ಕಾಳಸಂತೆಯಲ್ಲಿ ಎಲ್ಪಿಜಿ ಸಿಲಿಂಡರ್ ಮಾರಾಟ ಮಾಡುತ್ತಿರುವವರ ಮೇಲೆ ಕಾನೂನು ಕ್ರಮ ಜರುಗಿಸಲಾಗುವುದು. ಇದಕ್ಕಾಗಿ ನಗರ ಪೊಲೀಸ್ ಕಮಿಷನರ್ ತಂಡ ರಚಿಸಿದ್ದಾರೆ.
ಜಿ.ಪರಮೇಶ್ವರ ಗೃಹ ಸಚಿವ

ಎಲ್ಪಿಜಿ ಸಿಲಿಂಡರ್ಗಳ ಕಳ್ಳತನ

ಶ್ರೀರಾಂಪುರದಲ್ಲಿ ಗ್ರಾಹಕರಿಗೆ ತಲುಪಿಸಲು ತಂದಿದ್ದ ಸಿಲಿಂಡರ್ಗಳನ್ನು ಶುಕ್ರವಾರ ಕಳ್ಳತನ ಮಾಡಲಾಗಿದೆ. ರಾಜಾಜಿನಗರದ ರಾಮ್ ಏಜೆನ್ಸಿಸ್ ಸಿಬ್ಬಂದಿ ಶ್ರೀರಾಂಪುರದ ಬಳಿ ಆಟೊ ನಿಲ್ಲಿಸಿ ಗ್ರಾಹಕರ ಮನೆಗೆ ಸಿಲಿಂಡರ್ ತಲುಪಿಸಲು ಒಳಗೆ ಹೋಗಿದ್ದ ವೇಳೆ ಮೂರು ಸಿಲಿಂಡರ್ಗಳನ್ನು ಕಳವು ಮಾಡಲಾಗಿದೆ. ಘಟನೆ ನಡೆದ ಸ್ಥಳದ ಸುತ್ತಮುತ್ತಲಿನ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ‘ನಮ್ಮ ಸಿಬ್ಬಂದಿ ಮನೆಗೆ ಸಿಲಿಂಡರ್ ಕೊಡಲು ಹೋಗಿದ್ದ ಸಂದರ್ಭದಲ್ಲಿ ಕಳ್ಳರು ಆಟೊದಲ್ಲಿದ್ದ ಮೂರು ಸಿಲಿಂಡರ್ ಹೊತ್ತು ಪರಾರಿಯಾಗಿದ್ದಾರೆ’ ಎಂದು ಏಜೆನ್ಸಿಯ ರಾಜು ತಿಳಿಸಿದ್ದಾರೆ.

ಕೇಂದ್ರದ ಭರವಸೆ: ಆತಂಕ ಬೇಡ

ಕೇಂದ್ರ ಸರ್ಕಾರ ಎಲ್ಪಿಜಿ ಸಿಲಿಂಡರ್ ಪೂರೈಸುವ ಭರವಸೆ ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಹಾಗಾಗಿ ಆತಂಕ ಪಡುವ ಅವಶ್ಯಕತೆ ಇಲ್ಲ. ಇದೇ ರೀತಿ ಪರಿಸ್ಥಿತಿ ಮುಂದುವರಿದರೆ ಸಂಕಷ್ಟ ತಪ್ಪಿದಲ್ಲ. ಅಂದಾಜು 35 ಸಾವಿರ ಹೋಟೆಲ್ಗಳಿದ್ದು ಕೆಲವು ಹೋಟೆಲ್ಗಳು ಬಂದ್ ಆಗಿವೆ. ಕೆಲವು ಹೋಟೆಲ್ಗಳ ಮಾಲೀಕರು ಪರ್ಯಾಯ ಮಾರ್ಗ ಹುಡುಕಿಕೊಂಡಿದ್ದಾರೆ. ಹೆದ್ದಾರಿ ಬದಿ ಬಹುತೇಕ ಹೋಟೆಲ್ಗಳು ಸೌದೆ ಒಲೆ ಮತ್ತು ಎಲೆಕ್ಟ್ರಿಕ್ ಸ್ಟೌ ಬಳಸುತ್ತಿದ್ದಾರೆ ಎಂದು ಬೃಹತ್ ಬೆಂಗಳೂರು ಹೋಟೆಲ್ಗಳ ಮಾಲೀಕರ ಸಂಘದ ಗೌರವ ಅಧ್ಯಕ್ಷ ಪಿ.ಸಿ. ರಾವ್ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.