ಬೆಂಗಳೂರು: ವಾಣಿಜ್ಯ ಬಳಕೆಯ ಎಲ್ಪಿಜಿ ಸಿಲಿಂಡರ್ಗಳ ಪೂರೈಕೆಯಲ್ಲಿನ ವ್ಯತ್ಯಯದಿಂದ ಉಂಟಾಗಿರುವ ಬಿಕ್ಕಟ್ಟು ತುಸು ಹೆಚ್ಚಾಗಿದ್ದು, ಶನಿವಾರ ಇನ್ನಷ್ಟು ಹೋಟೆಲ್ಗಳು ಮತ್ತು ಆಟೊ ಎಲ್ಪಿಜಿ ಬಂಕ್ಗಳು ಬಂದ್ ಆಗಿದ್ದವು. ಈ ಬಿಕ್ಕಟಿನ ಸ್ಥಿತಿಗೆ ಜನರು ಅನಿವಾರ್ಯವಾಗಿ ಒಂದಷ್ಟು ಹೊಂದಾಣಿಕೆ ಮಾಡಿಕೊಳ್ಳುವಂತಾಗಿದೆ.

ನಗರದ ವಿವಿಧ ಭಾಗಗಳಲ್ಲಿ ಇರುವ ಹೋಟೆಲ್ಗಳ ಮೆನು ಫಲಕಗಳ ಮೇಲೆ, ‘ಎಲ್ಪಿಜಿ ಪೂರೈಕೆಯಲ್ಲಿ ವ್ಯತ್ಯಯ ಆಗಿರುವುದರಿಂದ ಕೆಲವು ತಿನಿಸುಗಳನ್ನು ಕಡಿತ ಮಾಡಲಾಗಿದೆ’, ‘ಎಲ್ಪಿಜಿಗೆ ಹೆಚ್ಚಿನ ದರ ನೀಡಬೇಕಾಗಿರುವುದಿಂದ ಎಲ್ಲ ತಿನಿಸುಗಳ ಮೇಲೆ ಹೆಚ್ಚುವರಿಯಾಗಿ ₹5–₹10 ವಿಧಿಸಲಾಗುತ್ತದೆ’ ಎಂಬ ಭಿತ್ತಿಪತ್ರಗಳನ್ನು ಅಂಟಿಸಲಾಗಿದೆ.

‘ನಾನು ಬುಧವಾರವೇ ಈ ಭಿತ್ತಿಪತ್ರ ಹಾಕಿದ್ದೆ. ಮೊದಲ ದಿನ ಕೆಲವರು, ‘ಹೆಚ್ಚು ಹಣ ಏಕೆ ನೀಡಬೇಕು’ ಎಂದು ತಕರಾರು ಮಾಡುತ್ತಿದ್ದರು. ಇಂದು ತಕರಾರು ಮಾಡದೇ ತಿನಿಸು ಖರೀದಿಸುತ್ತಿದ್ದಾರೆ. ಜನಕ್ಕೂ ನಮ್ಮ ಸಮಸ್ಯೆ ಅರ್ಥವಾದಂತಿದೆ’ ಎನ್ನುತ್ತಾರೆ ವಿಜಯನಗರದ ಮಾರೇನಹಳ್ಳಿ ಮುಖ್ಯರಸ್ತೆಯಲ್ಲಿ ರೆಸ್ಟೋರೆಂಟ್ ನಡೆಸುತ್ತಿರುವ ಮಂಜುನಾಥ್.

ವಿಜಯನಗರದ ವಾಟರ್ಟ್ಯಾಂಕ್ ಬಳಿ ಹೋಟೆಲ್ ನಡೆಸುತ್ತಿರುವ ಭೇಲ್ಪುರಿ ಶಂಕರಣ್ಣ, ‘32 ವರ್ಷಗಳಿಂದ ಹೋಟೆಲ್ ನಡೆಸುತ್ತಿದ್ದೇನೆ. ಕೋವಿಡ್ ಅವಧಿಯಲ್ಲೂ ಸಮಸ್ಯೆ ಆಗಿರಲಿಲ್ಲ. ಈಗ ಸಿಲಿಂಡರ್ ಕೊರತೆಯಿಂದ ಹಲವು ತಿಂಡಿಗಳನ್ನು ನಿಲ್ಲಿಸಿದ್ದೇನೆ. ಎಲ್ಪಿಜಿ ಒಲೆಗಳ ಬಳಕೆ ಕಡಿಮೆ ಮಾಡಿದ್ದೇವೆ. ರೊಟ್ಟಿ ಮತ್ತಿತರ ತಿನಿಸುಗಳಿಗೆ ಸೌದೆ ಒಲೆ ಬಳಸುತ್ತಿದ್ದೇವೆ. ರೊಟ್ಟಿ–ದೋಸೆ ಸಿದ್ಧವಾಗುವುದು ತುಸು ನಿಧಾನವಾದರೂ, ಜನರು ಕಾಯುತ್ತಾರೆ’ ಎಂದರು.

ವಿಜಯನಗರದ ತಿಂಡಿ ಬೀದಿ, ಶೇಷಾದ್ರಿಪುರದ ನಟರಾಜ ಚಿತ್ರಮಂದಿರ ಬಳಿ ಕಿರು ಹೋಟೆಲ್ ನಡೆಸುವವರದ್ದೂ ಇದೇ ಅಭಿಪ್ರಾಯ. ಈ ಮಧ್ಯೆ ನಗರದ ಹಲವೆಡೆ ಶನಿವಾರ ಇನ್ನಷ್ಟು ಹೋಟೆಲ್ಗಳು ಸ್ಥಗಿತವಾಗಿವೆ. ಮಹಾತ್ಮ ಗಾಂಧಿ ರಸ್ತೆ, ಚರ್ಚ್ ರಸ್ತೆಯ ಹಲವು ಕಿರು ಹೋಟೆಲ್ಗಳಲ್ಲಿ ತಿನಿಸುಗಳ ಬೆಲೆಯನ್ನು ಹೆಚ್ಚಿಸಲಾಗಿದೆ. ದೊಡ್ಡ ಹೋಟೆಲ್ಗಳಲ್ಲಿ ತಿನಿಸು ಮತ್ತು ಆಹಾರ ಪದಾರ್ಥಗಳ ಸಂಖ್ಯೆಯಲ್ಲಿ ಕಡಿಮೆ ಮಾಡಲಾಗಿದೆ.

ಮದುವೆ–ಸಮಾರಂಭಗಳಿಗೆ ತಿನಿಸಿನ ಕಡಿತ: ನಗರದಲ್ಲಿ ಮದುವೆ ಮತ್ತಿತರ ಸಮಾರಂಭಗಳಿಗೆ ಸಾಮಾನ್ಯವಾಗಿ 30–40 ಮತ್ತು 45 ತಿನಿಸುಗಳ ಪ್ಯಾಕೇಜ್ ನೀಡಲಾಗುತ್ತಿತ್ತು. ಈಗ ಎಲ್ಪಿಜಿ ಸಿಲಿಂಡರ್ಗಳ ಪೂರೈಕೆ ವ್ಯತ್ಯಯ ಆಗಿರುವ ಕಾರಣ, ತಿನಿಸುಗಳ ಸಂಖ್ಯೆಯನ್ನು ಕಡಿಮೆ ಮಾಡಲಾಗಿದೆ.

ನಾಗರಬಾವಿಯಲ್ಲಿ ಕೇಟರಿಂಗ್ ವಹಿವಾಟು ನಡೆಸುವ ಪಾರ್ವತಿ ಟೆಂಟ್ಹೌಸ್ನ ಮಾಲೀಕ ಲಿಂಗಣ್ಣ, ‘ಈಗಾಗಲೇ ಬುಕ್ಕಿಂಗ್ ಆಗಿರುವ ಸಮಾರಂಭಗಳಿಗೆ ಸೌದೆ ಒಲೆ ಬಳಸಿ, ಎಲ್ಲ ತಿನಿಸಿಗಳನ್ನೂ ಸಿದ್ಧಪಡಿಸಿಕೊಡಲಾಗುತ್ತಿದೆ. ಹೊಸದಾಗಿ ಬುಕ್ಕಿಂಗ್ ಮಾಡುವವರಿಗೆ 15–20 ತಿನಿಸುಗಳ ಪ್ಯಾಕೇಜ್ ನೀಡಲಾಗುತ್ತಿದೆ. ಗ್ರಾಹಕರೂ, ಊಟದ ವ್ಯವಸ್ಥೆ ಆದರೆ ಸಾಕು ಎಂಬ ಸ್ಥಿತಿಗೆ ಬಂದಿದ್ದಾರೆ. ಆದರೆ ಇದೇ ಸ್ಥಿತಿ ಮುಂದುವರೆದರೆ, ವಹಿವಾಟು ನಡೆಸುವುದು ಕಷ್ಟವಾಗುತ್ತದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ನಿಮಗೆ ಸಿಲಿಂಡರ್ ಸಿಕ್ಕಿತಾ’: ‘ನಿಮಗೆ ಸಿಲಿಂಡರ್ ಸಿಕ್ಕಿತಾ’... ನಗರದಲ್ಲಿ ಪರಿಚಯಸ್ಥರು ಎದುರಾದಾಗ ಉಭಯಕುಶಲೋಪರಿ ವಿಚಾರಿಸುವ ಹೊಸ ಬಗೆ ಇದು.

ತರಕಾರಿ–ದಿನಸಿ ಅಂಗಡಿ, ಉದ್ಯಾನ ಮತ್ತು ದೇವಾಲಯಗಳ ಬಳಿ ಪರಿಚಯಸ್ಥರು ಎದುರಾದಾಗ, ‘ನೀವು ಸಿಲಿಂಡರ್ ಬುಕ್ ಮಾಡಿದಿರಾ’, ‘ನಾವು ಬುಕ್ ಮಾಡಿ ಮೂರು ದಿನ ಆಗಿದೆ. ನಾಳೆ ಕೊಡುತ್ತೇವೆ ಎಂದಿದ್ದಾರೆ’, ‘ನಮ್ಮ ಮನೆಯಲ್ಲಿ ಇನ್ನೂ ಒಂದೂವರೆ ತಿಂಗಳಿಗೆ ಆಗುತ್ತದೆ’, ‘ನಮಗೂ ಎರಡು ತಿಂಗಳಿಗೆ ಸಾಲುತ್ತದೆ. ತೊಂದರೆ ಏಕೆ ಎಂದು ಈಗಲೇ ಬುಕ್ ಮಾಡಿದ್ದೇನೆ’ ಎಂಬ ಮಾತುಗಳು ವಿನಿಮಯವಾಗುವುದು ಈಗ ಸಾಮಾನ್ಯವಾಗಿದೆ.

‘ಮನೆಯಿಂದಲೇ ಊಟ ತನ್ನಿ’

ನಗರದ ಕೆಲವು ಪ್ರತಿಷ್ಠಿತ ಐ.ಟಿ ಕಂಪನಿಗಳು‘ಮನೆಯಿಂದಲೇ ಊಟ ತನ್ನಿ’ ಎಂದು ತಮ್ಮ ಉದ್ಯೋಗಿಗಳಿಗೆ ಸೂಚಿಸಿವೆ. ‘ಎಲ್ಪಿಜಿ ಪೂರೈಕೆಯಲ್ಲಿ ವ್ಯತ್ಯಯವಾಗಿರುವ ಕಾರಣ ಸಂಸ್ಥೆಯ ಕ್ಯಾಂಟೀನ್ ಮೇಲಿನ ಒತ್ತಡವನ್ನು ತುಸು ಕಡಿಮೆ ಮಾಡೋಣ. ಇಲ್ಲಿ ಏನನ್ನೂ ಪೂರೈಸುವುದಿಲ್ಲ ಎಂದಲ್ಲ. ಸಾಧ್ಯವಾದಷ್ಟೂ ಮನೆಯಿಂದಲೇ ಊಟ ತನ್ನಿ ಸಹಕರಿಸಿ’ ಎಂದು ಕಂಪನಿಯೊಂದು ತನ್ನ ಉದ್ಯೋಗಿಗಳಿಗೆ ಇ–ಮೇಲ್ ಮಾಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಆಟೊಗಳಿಗೆ ಎಲ್ಪಿಜಿ ಸಿಗುತ್ತಿಲ್ಲ...

ದೇಶದಲ್ಲಿಯೇ ಅತಿಹೆಚ್ಚು ಎಲ್ಪಿಜಿ ಚಾಲಿ ಆಟೊಗಳು ಇರುವುದು ಬೆಂಗಳೂರಿನಲ್ಲಿ. ನಗರದಲ್ಲಿ ಅಂದಾಜು 1.50 ಲಕ್ಷ ಎಲ್ಪಿಜಿ ಆಟೊಗಳು ಮತ್ತು 30000ದಷ್ಟು ಎಲ್ಪಿಜಿ ಚಾಲಿತ ಕಾರುಗಳು ಇವೆ. ಶನಿವಾರದ ಹೊತ್ತಿಗೆ ನಗರದ ವಿವಿಧ ಭಾಗಗಳಲ್ಲಿ ಇರುವ ಆಟೊ ಎಲ್ಪಿಜಿ ಬಂಕ್ಗಳು ಬಂದ್ ಆಗಿದ್ದು ಆಟೊ ಸೇವೆಗೆ ತೊಡಕಾಗಿದೆ. ‘ಎಲ್ಪಿಜಿ ಲಭ್ಯವಿಲ್ಲದೆ ಆಟೊಗಳು ರಸ್ತೆಗೆ ಇಳಿಯಲು ಸಾಧ್ಯವಾಗದಿರುವುದು ಒಂದು ಸಮಸ್ಯೆಯಾದರೆ ಆಟೊ ಎಲ್ಪಿಜಿ ದರ ಏರಿಕೆಯಾಗಿರುವುದು ಇನ್ನೊಂದು ಸಮಸ್ಯೆ. ಹತ್ತು ದಿನದ ಹಿಂದೆ ಒಂದು ಕೆ.ಜಿ ಆಟೊ ಎಲ್ಪಿಜಿ ದರ ₹55ರಷ್ಟಿತ್ತು. ಈಗ ₹80ರಿಂದ ₹90ರಷ್ಟಾಗಿದೆ. ಅಷ್ಟೊಂದು ಹಣ ನೀಡಿ ಆಟೊ ಓಡಿಸುವುದು ಹೇಗೆ’ ಎಂಬ ಪ್ರಶ್ನೆ ರಾಜಾಜಿನಗರ 6ನೇ ಬ್ಲಾಕ್ನ ಆಟೊ ಚಾಲಕ ಪರಶುರಾಮ ಅವರದ್ದು.

ವಿಜಯನಗರ ರಾಜಾಜಿನಗರ ಮಾಗಡಿ ರಸ್ತೆ ಗಾಂಧಿನಗರ ಜಯನಗರ ಬಸವನಗುಡಿ ಗಿರಿನಗರ ನಾಯಂಡಹಳ್ಳಿ ಬನಶಂಕರಿ ಜೆ.ಪಿ.ನಗರ ಸೇರಿ ಬೆಂಗಳೂರು ದಕ್ಷಿಣ ಭಾಗದ ಹಲವೆಡೆ ಆಟೊ ಎಲ್ಪಿಜಿ ಬಂಕ್ಗಳು ಶನಿವಾರ ಬಂದ್ ಮಾಡಿದ್ದವು. ಶಾಲಾ ಮಕ್ಕಳನ್ನು ಶಾಲೆಗೆ ಕರೆದೊಯ್ದು ವಾಪಸ್ ಕರೆತರುವ ಸೇವೆ ನೀಡುವ ಸಾವಿರಾರು ಮಾರುತಿ ಓಮ್ನಿಗಳು ನಗರದಲ್ಲಿ ಕಾರ್ಯನಿರ್ವಹಿಸುತ್ತಿವೆ. ‘ಆಟೊ ಎಲ್ಪಿಜಿ ದೊರೆಯದೇ ಇರುವುದರಿಂದ ಈ ಓಮ್ನಿಗಳಲ್ಲಿ ಅನಿವಾರ್ಯವಾಗಿ ಪೆಟ್ರೋಲ್ ಬಳಸುವಂತಾಗಿದೆ. ₹55 ಖರ್ಚು ಮಾಡುತ್ತಿದ್ದಲ್ಲಿ ₹105 ತೆರಬೇಕಾಗಿದೆ. ನಾವು ತಿಂಗಳ ಲೆಕ್ಕಾಚಾರದಲ್ಲಿ ಹಣ ಪಡೆಯುವುದರಿಂದ ಪೋಷಕರಿಂದ ಹೆಚ್ಚಿನ ಹಣ ಪಡೆಯಲು ಸಾಧ್ಯವಿಲ್ಲ’ ಎಂಬುದು ಕಾಮಾಕ್ಷಿಪಾಳ್ಯದ ನಿವಾಸಿ–ಶಾಲಾ ಓಮ್ನಿ ಚಾಲಕ ಶ್ರೀನಿವಾಸ್ ಅವರ ಕಳವಳ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.