ಪ್ರಜಾವಾಣಿ ವಾರ್ತೆ
ಬೆಂಗಳೂರು: ಲುಲು ಸಮೂಹವು ಕನಕಪುರ ರಸ್ತೆಯ ಪ್ರೆಸ್ಟೀಜ್ ಫಾಲ್ಕನ್ ಸಿಟಿಯ ನ್ಯೂ ಫೋರಂ ಮಾಲ್‌ನಲ್ಲಿ ‘ಲುಲು ಡೈಲಿ’ ಮಳಿಗೆಯನ್ನು ತೆರೆದಿದೆ. ಬೆಂಗಳೂರಿನಲ್ಲಿ ಸಮೂಹದ ಎರಡನೇ ಮಳಿಗೆ ಇದಾಗಿದೆ. ಪ್ರೆಸ್ಟೀಜ್ ಸಮೂಹದ ಎಂ.ಡಿ. ರಿಜ್ವಾನ್ ರಜಾಕ್ ಅವರು ಈ ಮಳಿಗೆಯನ್ನು ಉದ್ಘಾಟಿಸಿದರು.
ಹಣ್ಣು, ತರಕಾರಿಗಳು, ಡೈರಿ ಉತ್ಪನ್ನಗಳು, ಮಾಂಸ, ಮೀನು, ಸಿದ್ಧ ಆಹಾರ, ಶಾಕಾಹಾರ ಮತ್ತು ಮಾಂಸಾಹಾರಕ್ಕೆ ಪ್ರತ್ಯೇಕ ಕೌಂಟರ್‌ಗಳೊಂದಿಗೆ ಲೈವ್ ಕಿಚನ್ ಅನ್ನು ಈ ಮಳಿಗೆ ಒಳಗೊಂಡಿದೆ ಎಂದು ಪ್ರಕಟಣೆ ತಿಳಿಸಿದೆ.
ಲುಲು ಸಮೂಹದ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎ.ವಿ. ಅನಂತರಾಂ, ಲುಲು ಸಮೂಹದ ಭಾರತ ಮತ್ತು ಒಮಾನ್ ನಿರ್ದೇಶಕ ಎಂ.ಎ. ನಿಷಾದ್, ಲುಲು ಗ್ರೂಪ್ ಇಂಡಿಯಾದ ಸಿಇಒ ರೆಜಿತ್ ರಾಧಾಕೃಷ್ಣನ್ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.