ಸಂಗೀತ ಸಮ್ಮೇಳನ: ಎಂ.ಸೂರ್ಯ ಪ್ರಸಾದ್ ಅಧ್ಯಕ್ಷ

ಬೆಂಗಳೂರು: ಬೆಂಗಳೂರು ಗಾಯನ ಸಮಾಜದ 51ನೇ ರಾಷ್ಟ್ರೀಯ ಸಂಗೀತ ಸಮ್ಮೇಳನದ ಅಧ್ಯಕ್ಷರಾಗಿ ಸಂಗೀತ ತಜ್ಞ ಎಂ.ಸೂರ್ಯ ಪ್ರಸಾದ್ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.
ಡಿಸೆಂಬರ್ 5ರಿಂದ 12ರವರೆಗೆ ಸಮ್ಮೇಳನ ನಡೆಯಲಿದ್ದು, ಪ್ರಸಿದ್ಧ ವಿದ್ವಾಂಸರಿಂದ ಸೋದಾಹರಣ ಭಾಷಣಗಳು, ಪ್ರಾತ್ಯಕ್ಷಿಕೆಗಳು, ವಿಚಾರಗೋಷ್ಠಿಗಳು ನಡೆಯಲಿವೆ. ಡಿ.12ರಂದು ಸಮಾರೋಪದಲ್ಲಿ ಎಂ.ಸೂರ್ಯ ಪ್ರಸಾದ್ ಅವರಿಗೆ ₹50 ಸಾವಿರ ನಗದು ಒಳಗೊಂಡ ‘ಸಂಗೀತ ಕಲಾರತ್ನ’ ಬಿರುದು ನೀಡಿ, ಸನ್ಮಾನಿಸಲಾಗುತ್ತದೆ.
‘ಅತಿಥಿಗಳಾಗಿ ಸಚಿವರಾದ ಆರ್.ಅಶೋಕ, ವಿ.ಸುನೀಲ್ ಕುಮಾರ್, ಸಂಸ್ಕಾರ ಭಾರತಿ ಸಂಘಟನಾ ಕಾರ್ಯದರ್ಶಿ ಪ.ರಾ.ಕೃಷ್ಣಮೂರ್ತಿ, ದಿ ಪ್ರಿಂಟರ್ಸ್ ಮೈಸೂರು ಪ್ರೈವೇಟ್ ಲಿಮಿಟೆಡ್‌ನ ನಿರ್ದೇಶಕ ಕೆ.ಎನ್.ಶಾಂತಕುಮಾರ್, ಯದುಗಿರಿ ಯತಿರಾಜ ರಾಮಾನುಜ ಜೀಯರ್ ಸ್ವಾಮೀಜಿ ಹಾಗೂ ವೀರೇಶಾನಂದ ಸ್ವಾಮೀಜಿ ಭಾಗವಹಿಸಲಿದ್ದಾರೆ’ ಎಂದು ಬೆಂಗಳೂರು ಗಾಯನ ಸಮಾಜದ ಅಧ್ಯಕ್ಷ ಎಂ.ಆರ್.ವಿ.ಪ್ರಸಾದ್ ತಿಳಿಸಿದ್ದಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.