ಬೆಂಗಳೂರು: ‘ಸಂಘಟಿತ ಪ್ರಯತ್ನ, ಪೂರ್ವಭಾವಿ ಪರೀಕ್ಷೆಯ ಗಂಭೀರ ಪರಿಗಣನೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಯ ಮಾದರಿಯಲ್ಲೇ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಿದ್ದರಿಂದ ಈ ಬಾರಿಯ ದ್ವಿತೀಯ ಪಿಯು ಪರೀಕ್ಷೆಯಲ್ಲಿ ದಾಖಲೆ ಫಲಿತಾಂಶ ಬಂದಿದೆ’ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅಭಿಪ್ರಾಯಪಟ್ಟರು.

ಪಿಯು ಫಲಿತಾಂಶದ ಕುರಿತು ‘ಪ್ರಜಾವಾಣಿ’ ಜತೆ ಅವರು ಸುದೀರ್ಘವಾಗಿ ಮಾತನಾಡಿದರು. ಅದರ ಸಂಕ್ಷಿಪ್ತ ರೂಪ ಇಲ್ಲಿದೆ.

‘ಪಿಯು ಪರೀಕ್ಷೆ– 1ರಲ್ಲಿ ಶೇ 86.48ರಷ್ಟು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದು, ಪಿಯು ಪರೀಕ್ಷೆ– 2ರ ಬಳಿಕ ಉತ್ತೀರ್ಣ ಪ್ರಮಾಣ ಶೇ 95ರಷ್ಟು ಆಗಲಿದೆ. ಮುಂದಿನ ದಿನಗಳಲ್ಲಿ ಶೇ 100ರಷ್ಟು ಫಲಿತಾಂಶ ಬರಬೇಕು ಎಂಬುದು ನನ್ನ ಆಶಯ. ಉತ್ತಮ ಶಿಕ್ಷಣ ನೀಡದೆ, ಒಳ್ಳೆಯ ವ್ಯಕ್ತಿಗಳನ್ನು ರೂಪಿಸಲು ಸಾಧ್ಯವಿಲ್ಲ. ಇದನ್ನು ಅರ್ಥ ಮಾಡಿಕೊಂಡು ಮಕ್ಕಳಿಗೆ ಶಿಕ್ಷಣ ನೀಡಲು ಬದ್ಧರಾಗಿದ್ದೇವೆ’ ಎಂದು ತಿಳಿಸಿದರು.

‘ಇದುವರೆಗೆ ಪೂರ್ವಭಾವಿ ಪರೀಕ್ಷೆಯನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ವಿದ್ಯಾರ್ಥಿಗಳ ಕಲಿಕಾ ಮಟ್ಟಕ್ಕೆ ಅನುಗುಣವಾಗಿ ಸ್ಥಳೀಯವಾಗಿ ಪ್ರಶ್ನೆಪತ್ರಿಕೆ ಸಿದ್ಧಪಡಿಸಿ ನೀಡಲಾಗುತ್ತಿತ್ತು. ಇದರಿಂದಾಗಿ ಅವರಿಗೆ ಅಂತಿಮ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಲು ಸಾಧ್ಯವಾಗುತ್ತಿರಲಿಲ್ಲ. ಈ ಬಾರಿ ಪೂರ್ವಭಾವಿ ಪರೀಕ್ಷೆಗೂ ರಾಜ್ಯಮಟ್ಟದಿಂದಲೇ ಪ್ರಶ್ನೆಪತ್ರಿಕೆಗಳನ್ನು ಸಿದ್ಧಪಡಿಸಿ ಎಲ್ಲ ಕಾಲೇಜುಗಳಿಗೆ ಕಳುಹಿಸಲಾಯಿತು. ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳು ಕೂಡ ಅದಕ್ಕೆ ಅನುಗುಣವಾಗಿ ಸಿದ್ಧತೆ ನಡೆಸಿದರು. ಇದರಿಂದಾಗಿ ಅವರ ಕಲಿಕಾ ಮಟ್ಟ ಸುಧಾರಣೆಯಾಯಿತು. ಹೀಗಾಗಿ ವಾರ್ಷಿಕ ಪರೀಕ್ಷೆಯ ಶೇಕಡವಾರು ಫಲಿತಾಂಶ ಹೆಚ್ಚಾಗಿದೆ’ ಎಂದು ಅವರು ವಿಶ್ಲೇಷಿಸಿದರು.

ಸಂಪನ್ಮೂಲ ವ್ಯಕ್ತಿಗಳಿಂದ ಉಪನ್ಯಾಸಕರಿಗೆ ತರಬೇತಿ ಕೊಡಿಸಲಾಯಿತು. ‘ಪ್ರಶ್ನೆಗಳ ಬ್ಯಾಂಕ್’ ತಯಾರಿಸಿ ಅದಕ್ಕೆ ತಕ್ಕಂತೆ ಪೂರ್ವಭಾವಿ ಪರೀಕ್ಷೆ ನಡೆಸಲಾಯಿತು. 2025ರ ಮೇ 14ರಂದು ‘ಮಕ್ಕಳ ದಿನಾಚರಣೆ’ಯ ದಿನ ಎಲ್ಲ ಶಾಲೆಗಳಲ್ಲಿ ಪೋಷಕರ ಸಭೆ ನಡೆಸಿ, ಮಕ್ಕಳ ಕಲಿಕೆಯಲ್ಲಿ ಪೋಷಕರ ಪಾತ್ರ ಎಷ್ಟು ಮಹತ್ವದ್ದು ಎಂದು ಮನವರಿಕೆ ಮಾಡಿಕೊಡಲಾಯಿತು. ಇದಾದ ನಂತರ ಮಕ್ಕಳ ಮೇಲೆ ವಿಶೇಷ ಗಮನಹರಿಸಲು ಪೋಷಕರು ಮುತುವರ್ಜಿ ವಹಿಸಿದರು ಎಂದು ತಿಳಿಸಿದರು.

‘ಮೊದಲು ಸಾಮೂಹಿಕವಾಗಿ ನಕಲು ಮಾಡಿಸುವ ವ್ಯವಸ್ಥೆ ಇತ್ತು. ನಾವು ಬಂದ ನಂತರ ವೆಬ್ ಕಾಸ್ಟಿಂಗ್ ವ್ಯವಸ್ಥೆ ಜಾರಿ ಮಾಡುವ ಮೂಲಕ ಇದಕ್ಕೆ ಕಡಿವಾಣ ಹಾಕಲಾಯಿತು. ಇದರಿಂದಾಗಿ ಫಲಿತಾಂಶ ಕುಸಿಯಿತು. ಸಮುದ್ರದಲ್ಲಿ ಮುಳುಗುವ ಸ್ಥಿತಿಯಲ್ಲಿ ಇದ್ದೆವು. ಅಂತಿಮ ಒಂದು ವರ್ಷಕ್ಕೆ ಸೀಮಿತವಾಗಿ ಶೇ 20ರಷ್ಟು ಕೃಪಾಂಕ ನೀಡುವ ತೀರ್ಮಾನ ತೆಗೆದುಕೊಳ್ಳಲಾಯಿತು. ಇದಕ್ಕೆ ಟೀಕೆ–ಟಿಪ್ಪಣಿಗಳು ಬಂದವು. ಆದರೆ, ಇದಕ್ಕೆಲ್ಲ ತಲೆ ಕೆಡಿಸಿಕೊಳ್ಳದೆ ಕೆಲಸ ಮಾಡಿದ್ದರಿಂದ ಈಗ ಅದರ ಪ್ರತಿಫಲ ಕಾಣುತ್ತಿದ್ದೇವೆ’ ಎಂದರು.

‘1 ಕೋಟಿ 16 ಲಕ್ಷ ಮಕ್ಕಳ ಭವಿಷ್ಯ ರೂಪಿಸುವ ಜವಾಬ್ದಾರಿ ನಮ್ಮ ಮೇಲಿದೆ. ಶಾಲೆಗಳಿಗೆ ಉಚಿತವಾಗಿ ನೀರು, ವಿದ್ಯುತ್ ನೀಡುವ ಮೂಲಕ ಸಾಯಂಕಾಲ ವಿಶೇಷ ತರಗತಿಗಳನ್ನು ನಡೆಸಲಾಯಿತು. ತಮ್ಮ ಜವಾಬ್ದಾರಿ ಏನು ಎಂದು ಪೋಷಕರಿಗೂ ಮನವರಿಕೆ ಮಾಡಿಕೊಡಲಾಯಿತು. ಇದರ ಪರಿಣಾಮವಾಗಿ ಕಳೆದ ವರ್ಷ 1.64 ಲಕ್ಷ ಇದ್ದ ಅನುತ್ತೀರ್ಣವಾದ ಮಕ್ಕಳ ಸಂಖ್ಯೆ ಈ ವರ್ಷ 84 ಸಾವಿರಕ್ಕೆ ಇಳಿದಿದೆ. ಕಳೆದ ಬಾರಿ ಎಲ್ಲ ವಿಷಯಗಳಲ್ಲಿ ಅನುತ್ತೀರ್ಣರಾದವರ ಸಂಖ್ಯೆ 30 ಸಾವಿರ ಇತ್ತು. ಈ ಬಾರಿ 1,700 ಇದೆ’ ಎಂದು ವಿವರಿಸಿದರು.

‘ಶೋಭಾ ಕರಂದ್ಲಾಜೆ ಮೋದಿ ಸರ್ಟಿಫಿಕೇಟ್ ಕೇಳಲಿ’

‘ಪ್ರಧಾನಿ ನರೇಂದ್ರ ಮೋದಿ ಹೆಸರಿನಲ್ಲಿ ಕನ್ನಡಿಗರ ಓಟು ತೆಗೆದುಕೊಳ್ಳುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ನನ್ನ ಸರ್ಟಿಫಿಕೇಟ್ ಕೇಳುವ ಹಕ್ಕಿಲ್ಲ. ಮೊದಲು ಮೋದಿ ಅವರ ಸರ್ಟಿಫಿಕೇಟ್ ಕೇಳಲಿ’ ಎಂದು ಮಧು ಬಂಗಾರಪ್ಪ ಸವಾಲು ಹಾಕಿದರು. ‘ಬೆಂಗಳೂರಿನ ಜನರು ಅತಿ ಹೆಚ್ಚು ತೆರಿಗೆ ಕಟ್ಟುತ್ತಿದ್ದಾರೆ. ನಮ್ಮ ಮತದಾರರ ಪಾಲಿನ ತೆರಿಗೆ ಹಣ ವಾಪಸ್ ಕೊಡಿ ಎಂದು ಮೋದಿ ಅವರನ್ನು ಕೇಳದ ಅವರಿಗೆ ಕೇಂದ್ರ ಸಚಿವರಾಗುವ ಯೋಗ್ಯತೆ ಇಲ್ಲ’ ಎಂದು ಟೀಕಿಸಿದರು. ‘ನಾವು ತೃತೀಯ ಭಾಷೆಯನ್ನು ಕೈಬಿಟ್ಟಿಲ್ಲ. ಹಿಂದಿ ಶಿಕ್ಷಕರು ಮೊದಲಿನ ಹಾಗೆ ಮಕ್ಕಳಿಗೆ ಹಿಂದಿ ಕಲಿಸುತ್ತಾರೆ. ಶೋಭಾ ಸಿ.ಟಿ.ರವಿ ಅವರು ಮಾತನಾಡುವ ಹಿಂದಿ ಕೇಳಿದವರು ಅವರ ನಿಘಂಟಿನಿಂದ ಹಿಂದಿಯನ್ನೇ ತೆಗೆಯುತ್ತಾರೆ’ ಎಂದು ವ್ಯಂಗ್ಯವಾಡಿದರು. ನಾವು ಭಾಷೆಯ ಹೆಸರಿನಲ್ಲಿ ರಾಜಕಾರಣ ಮಾಡುವುದಿಲ್ಲ. ಎಲ್ಲ ಭಾಷೆ ಕಲಿಸುತ್ತಿದ್ದೇವೆ. ಇಷ್ಟು ದಿನ ಧರ್ಮ ಜಾತಿ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದ್ದ ಬಿಜೆಪಿಯವರು ಈಗ ಭಾಷೆ ರಾಜಕಾರಣ ಮಾಡಲು ಮುಂದಾಗಿದ್ದಾರೆ’ ಎಂದು ದೂರಿದರು.

ಅತಿಥಿ ಶಿಕ್ಷಕರ ಗೌರವಧನ ಹೆಚ್ಚಳಕ್ಕೆ ಕ್ರಮ

ಅತಿಥಿ ಶಿಕ್ಷಕರಿಗೆ ತಿಂಗಳಿಗೆ ₹12 ಸಾವಿರ ನೀಡಿದ್ದು ಅದನ್ನು ಹೆಚ್ಚಿಸಲು ಕ್ರಮಕೈಗೊಳ್ಳಲಾಗುವುದು ಎಂದು ಮಧು ಬಂಗಾರಪ್ಪ ತಿಳಿಸಿದರು. ಸೋಶಿಯಲ್ ಮೀಡಿಯಾ ಈ ದೇಶದ ದೊಡ್ಡ ವಿಲನ್. 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣಗಳನ್ನು ನಿರ್ಬಂಧಿಸಲು ಕಾಯ್ದೆ ಜಾರಿಗೊಳಿಸಲಾಗುವುದು ಎಂದರು. ‘ಈಗ ಕರ್ನಾಟಕ ಪಬ್ಲಿಕ್ ಶಾಲೆಗಳನ್ನು ಆರಂಭಿಸುವ ಮೂಲಕ ಒಂದೇ ಕಡೆ ಪಿಯುಸಿವರೆಗೆ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದೇವೆ. ಸರ್ಕಾರಿ ಶಾಲಾ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಬೇಕು ಎಂಬ ಉದ್ದೇಶದಿಂದ ಶೈಕ್ಷಣಿಕ ವರ್ಷದ ಆರಂಭದಲ್ಲೇ 51 ಸಾವಿರ ಅತಿಥಿ ಶಿಕ್ಷಕರನ್ನು ನೇಮಕ ಮಾಡಲಾಯಿತು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.