ಬೆಂಗಳೂರು: ‘ಆದಿತೀರ್ಥಂಕರರು ತನ್ನ ಪುತ್ರರಿಗೆ ರಾಜ್ಯವನ್ನು ನೀಡಿದರೂ ಲಿಪಿಯನ್ನು, ಅಂಕ ಗಣಿತವನ್ನು ಪುತ್ರಿಯರಿಗೆ ಕಲಿಸಿಕೊಟ್ಟರು. ಹಾಗಾಗಿ ನಮ್ಮ ದೇಶದ ಮೊದಲ ಲಿಪಿ ಬ್ರಾಹ್ಮಿಲಿಪಿ ಹೆಣ್ಣು ಮಕ್ಕಳಿಂದ ಪ್ರಸಾರವಾಯಿತು’ ಎಂದು ಸಾಹಿತಿ ಹಂಪ ನಾಗರಾಜಯ್ಯ ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸೋಮವಾರ ಹಮ್ಮಿಕೊಂಡಿದ್ದ ಮಹಾವೀರ ಜಯಂತಿ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.

‘ಈ ದೇಶಕ್ಕೆ ಭಾರತ ಎಂಬ ಹೆಸರು ಕೂಡ ಭರತ ಚಕ್ರವರ್ತಿಯಿಂದಲೇ ಬಂದಿದೆ. ಆದಿತೀರ್ಥಂಕರರ ಮಗನೇ ಈ ಭರತ’ ಎಂದು ತಿಳಿಸಿದರು.

‘ಮಹಾವೀರರನ್ನು ಜೈನಧರ್ಮದ ಸ್ಥಾಪಕರು ಎಂದು ಹಲವರು ತಿಳಿದಿದ್ದಾರೆ. ಇದು ತಪ್ಪು. ಜೈನ ಧರ್ಮದ 24ನೇ ತೀರ್ಥಂಕರ ಮಹಾವೀರರು. ಅದಕ್ಕಿಂತ ಮೊದಲು 23 ತೀರ್ಥಂಕರರು ಆಗಿ ಹೋಗಿದ್ದರು. ಸತ್ಯ, ಅಹಿಂಸೆ, ಆಸ್ತೇಯ ಅಪರಿಗ್ರಹ ತತ್ವಗಳನ್ನು ಹಿಂದಿನ ತೀರ್ಥಂಕರರು ಬೋಧಿಸಿದ್ದರು. ಅದಕ್ಕೆ ಬ್ರಹ್ಮಚರ್ಯ ತತ್ವವನ್ನು ಮಹಾವೀರರು ಸೇರಿಸಿದ್ದರು. ಬ್ರಹ್ಮಚರ್ಯ ಅಂದರೆ ಅಖಂಡ ಬ್ರಹ್ಮಚರ್ಯ ಅಲ್ಲ. ತನ್ನ ಕುಟುಂಬಕ್ಕೆ ಸೀಮಿತವಾಗಿ ನೆಮ್ಮದಿಯ ಜೀವನ ನಡೆಸುತ್ತಾ ಹೇಗೆ ಬ್ರಹ್ಮಚರ್ಯ ಪಾಲನೆ ಮಾಡಬೇಕು ಎಂಬುದು ತತ್ವವಾಗಿದೆ’ ಎಂದು ವಿವರಿಸಿದರು.

‘ಕ್ರಿಸ್ತಪೂರ್ವ 599ನೇ ಇಸವಿಯಲ್ಲಿ ಜನಿಸಿದ್ದ ಮಹಾವೀರ 30ನೇ ವರ್ಷದಲ್ಲಿ ದೀಕ್ಷೆ ಪಡೆದು 12 ವರ್ಷ ತಪಸ್ಸು ಮಾಡಿದರು. ಬಳಿಕ ದೇಶದಾದ್ಯಂತ ಸುತ್ತಿ ಬಿಡುಗಡೆಯ ದಾರಿಯನ್ನು ತೋರಿಸಿದರು. 72 ವರ್ಷ ಅವರು ಬದುಕಿದ್ದರು. ದಾರ್ಶನಿಕರು ಎಲ್ಲೇ ಹುಟ್ಟಿರಬಹುದು. ಅವರು ಆಚಾರ್ಯರಾಗಿದ್ದು ದಕ್ಷಿಣ ಭಾರತದಿಂದಲೇ ಆಗಿದೆ. ಅವರ ತತ್ವಗಳನ್ನು ಸಾರಿದ ಶಿಷ್ಯರು ದಕ್ಷಿಣದವರೇ. ಅದೇ ರೀತಿ ಜೈನಧರ್ಮ ದಕ್ಷಿಣದ ಕರ್ನಾಟಕದಲ್ಲಿ ಹೆಚ್ಚು ಪ್ರಚಾರವಾಯಿತು’ ಎಂದು ಮಾಹಿತಿ ನೀಡಿದರು.

‘ಜೈನರು ಅಲ್ಪಸಂಖ್ಯಾತರಾಗಿರಬಹುದು. ಆದರೆ, ಸಮಾಜಕ್ಕೆ ಬಹಳ ದೊಡ್ಡ ಕೊಡುಗೆಯನ್ನು ಈ ಸಮುದಾಯ ನೀಡಿದೆ. ಸರ್ಕಾರ ಅದಕ್ಕೆ ಸರಿಯಾಗಿ ಗುರುತಿಸುವ ಕೆಲಸ ಆಗಬೇಕು’ ಎಂದು ಹೇಳಿದರು.

ಚಾಮರಾಜನಗರದ ಕನಕಗಿರಿಯ ಭುವನ ಕೀರ್ತಿ ಭಟ್ಟಾರಕ ಸ್ವಾಮೀಜಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಮಂಜುನಾಥ ಸ್ವಾಮಿ, ಜೈನ ಯುವ ಸಂಘಟನೆಯ ಅಧ್ಯಕ್ಷ ಮುಖೇಶ್ ಸುರಾನಾ, ಜೈನ್ ಅಸೋಸಿಯೇಷನ್ ಕಾರ್ಯದರ್ಶಿ ಆಶಾ ಪ್ರಭು, ಪತ್ರಕರ್ತ ಪದ್ಮರಾಜ ದಂಡಾವತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ಕಾರ್ಯದರ್ಶಿ ಬಲವಂತರಾವ್ ಪಾಟೀಲ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.