ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾವೀರ ಜಯಂತಿ

Last Updated 25 ಏಪ್ರಿಲ್ 2021, 22:08 IST
ಅಕ್ಷರ ಗಾತ್ರ

ಬೆಂಗಳೂರು: ಭಗವಾನ್ಮಹಾವೀರ ಜಯಂತಿ ಅಂಗವಾಗಿ ಅವರ ಜನ್ಮ ಕಲ್ಯಾಣ ಮಹೋತ್ಸವವನ್ನು ಜೈನಯುವಸಂಘಟನೆಯು ಕೊರೊನಾ ಕಾರಣದಿಂದ ಡಿಜಿಟಲ್‌ ವೇದಿಕೆಯ ಮೂಲಕ ಭಾನುವಾರ ಹಮ್ಮಿಕೊಂಡಿತ್ತು.

ಜೈನಯುವಸಂಘಟನೆಅಧ್ಯಕ್ಷರೂಪಚಂದ್ಕುಮಾಟ್, ‘ಈ ಬಾರಿ ಕೊರೊನಾ ಪರಿಸ್ಥಿತಿ ಎದುರಾಗಿರುವುದರಿಂದ ಮಹಾವೀರ ಜಯಂತಿಯನ್ನು ಸಾರ್ವಜನಿಕವಾಗಿ ಆಚರಿಸಲಿಲ್ಲ. ಸಮುದಾಯದ ಜೈನ ವಾಹಿನಿಯ ಮೂಲಕಮಹಾವೀರ ಜಯಂತಿಯ ನೇರಪ್ರಸಾರ ವ್ಯವಸ್ಥೆ ಮಾಡಿದ್ದೆವು. ಭಕ್ತರು ಮನೆಗಳಲ್ಲೇ ಕೂತು ಜಯಂತಿ ಆಚರಿಸಿದರು’ ಎಂದರು.

‘ಜಯಂತಿ ಅಂಗವಾಗಿ ನಗರದಲ್ಲಿರುವ ಜೈನ ಮಂದಿರಗಳಲ್ಲಿ ಸರಳವಾಗಿ ಪೂಜಾ ವಿಧಿ ವಿಧಾನಗಳು ನೆರವೇರಿದವು. ಸಂಘಟನೆಯ ಕಾರ್ಯಕರ್ತರು ಇದಕ್ಕೆ ಕೈಜೋಡಿಸಿದ್ದರು. ಸಮುದಾಯದ ಪ್ರಮುಖರು ಮಹಾವೀರರ ಸಂದೇಶಗಳನ್ನು ವಿಡಿಯೊ ಮೂಲಕ ಸಾರಿದರು’ ಎಂದು ಹೇಳಿದರು.

ಸಂಘಟನೆ ಕಾರ್ಯದರ್ಶಿಮುಖೇಶ್ಬಾಬೆಲ್,‘ಜೈನ ಸಮುದಾಯದ ನಾಲ್ಕು ಪಂಗಡಗಳು ಒಗ್ಗೂಡಿ, ಪ್ರತಿ ವರ್ಷ ಆಚರಣೆಯನ್ನು ವಿಜೃಂಭಣೆಯಿಂದ ನಡೆಸುತ್ತಿದ್ದೆವು. ಮೆರವಣಿಗೆ, ಸಮಾವೇಶಗಳೊಂದಿಗೆ ಮಹಾವೀರರನ್ನು ಆರಾಧಿಸುತ್ತಿದ್ದೆವು. ಈ ಬಾರಿ ಜಪ, ಗುರುಗಳ ಸ್ತವನ ಹಾಗೂ ವಿವಿಧ ಕೈಂಕರ್ಯಗಳನ್ನುಮನೆಗಳಲ್ಲೇ ಸರಳವಾಗಿ ಆಚರಿಸಲಾಯಿತು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT