ಶನಿವಾರ, ಮಾರ್ಚ್ 28, 2020
19 °C

‘ಮಲೆಗಳಲ್ಲಿ ಮದುಮಗಳು’ ನಾಟಕ ಪ್ರದರ್ಶನ ವಿಸ್ತರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದರಿಂದ ರಾಷ್ಟ್ರೀಯ ನಾಟಕ ಶಾಲೆಯು (ಎನ್‌ಎಸ್‌ಡಿ) ‘ಮಲೆಗಳಲ್ಲಿ ಮದುಮಗಳು’ ರಂಗ ಪ್ರಯೋಗದ ಪ್ರದರ್ಶನವನ್ನು ವಿಸ್ತರಿಸಿದೆ. 

ಕುವೆಂಪು ಅವರ ಕಾದಂಬರಿ ಆಧಾರಿತ ಈ ನಾಟಕವು ಈವರೆಗೆ 108 ಪ್ರದರ್ಶನ ಕಂಡಿದೆ. ಈ ಆವೃತ್ತಿಯಲ್ಲಿ 24 ಪ್ರದರ್ಶನವನ್ನು ಹಮ್ಮಿಕೊಂಡಿದ್ದ ಎನ್‌ಎಸ್‌ಡಿ, ಫೆ.29ಕ್ಕೆ 109ನೇ ಪ್ರದರ್ಶನ ನೀಡುವ ಮೂಲಕ ಈ ರಂಗ ಪ್ರಯೋಗಕ್ಕೆ ತೆರೆ ಎಳೆಯುವುದಾಗಿ ಘೋಷಿಸಿತ್ತು. ಶುಕ್ರವಾರ ಮತ್ತು ಶನಿವಾರದ ಕಡೆಯ ಎರಡು ಪ್ರದರ್ಶನಗಳ ಟಿಕೆಟ್‌ಗಳು ಮುಂಚಿತವಾಗಿಯೇ ಮಾರಾಟವಾಗಿವೆ. ಹೀಗಾಗಿ, ಮಾರ್ಚ್‌ 6 ಮತ್ತು ಮಾರ್ಚ್‌ 7ಕ್ಕೆ ಹೆಚ್ಚುವರಿಯಾಗಿ ಪ್ರದರ್ಶನಗಳನ್ನು ಹಮ್ಮಿಕೊಳ್ಳಲಾಗಿದೆ.  

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)