ಮಂಗಳವಾರ, 6 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲ್ಲಸಂದ್ರ: ಬಿಜೆಪಿಗೆ ನೂರಕ್ಕೂ ಹೆಚ್ಚು ಜನರು ಸೇರ್ಪಡೆ

ಕಮಲ ಪಾಳಯಕ್ಕೆ ಸೇರಿದ ಜೆಡಿಎಸ್ ವಾರ್ಡ್‌ನ ಮಾಜಿ ಅಧ್ಯಕ್ಷ ಆನಂದ್ ಮತ್ತು ಸಂಗಡಿಗರು
Last Updated 25 ಮಾರ್ಚ್ 2023, 19:55 IST
ಅಕ್ಷರ ಗಾತ್ರ

ಪೀಣ್ಯ ದಾಸರಹಳ್ಳಿ: ಮಲ್ಲಸಂದ್ರದ ಯದುನಂದನ ಬಯಲು ರಂಗಮಂದಿರದಲ್ಲಿ ಜೆಡಿಎಸ್ ವಾರ್ಡ್‌ನ ಮಾಜಿ ಅಧ್ಯಕ್ಷ ಆನಂದ್ ಮತ್ತು ಸಂಗಡಿಗರು ಬೃಹತ್ ಬಿಜೆಪಿ ಸೇರ್ಪಡೆ ಕಾರ್ಯಕ್ರಮ ಆಯೋಜಿಸಿದ್ದರು.

ಈ ಸಂದರ್ಭದಲ್ಲಿ ಜೆಡಿಎಸ್‌ನ ಆನಂದ್ ಸೆರಿದಂತೆ ನೂರಕ್ಕೂ ಹೆಚ್ಚು ಜನರು ಬಿಜೆಪಿಗೆ ಸೇರ್ಪಡೆಯಾದರು.

‘ಅಭಿವೃದ್ಧಿ ಹೆಸರಲ್ಲಿ ಲೂಟಿ ಮಾಡುತ್ತಿರುವ ಜೆಡಿಎಸ್ ಶಾಸಕನನ್ನು ಜನತೆ ಮನೆ ಕಡೆ ಮಂಜಣ್ಣ ಮಾಡಲಿದ್ದಾರೆ. ಕ್ಷೇತ್ರದ ಬೇಸತ್ತ ಜೆಡಿಎಸ್ ಕಾರ್ಯಕರ್ತರು ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ’ ಎಂದು ಮಾಜಿ ಶಾಸಕ ಎಸ್. ಮುನಿರಾಜು ತಿಳಿಸಿದರು.

ಕ್ಷೇತ್ರಕ್ಕೆ ಕಾವೇರಿ ನೀರು ಹಾಗೂ ಒಳಚರಂಡಿ ವ್ಯವಸ್ಥೆ ಕಲ್ಪಿಸುವುದೂ ಸೇರಿದಂತೆ ಹಲವು ಕೆಲಸಗಳನ್ನು ತಾವು ಮಾಡಿರುವುದಾಗಿ ಹೇಳಿಕೊಂಡರು.

ಬಿಬಿಎಂಪಿ ಮಾಜಿ ಸದಸ್ಯೆ ಶಶಿ ಶಿವಕುಮಾರ್, ಟಿಎಸ್ ಗಂಗರಾಜು, ದಾಸರಹಳ್ಳಿ ಮಂಡಲ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ಟಿ. ಶಿವಕುಮಾರ್, ಡಿ.ಕೆ ಮಹೇಶ್, ವಿನೋದ್ ಗೌಡ, ಎಂ.ಆರ್. ಶ್ರೀನಿವಾಸ್, ಮಲ್ಲಸಂದ್ರ ವಾರ್ಡ್ ಬಿಜೆಪಿ ಅಧ್ಯಕ್ಷರಾದ ಗಂಗರಾಜು, ನಾಗಭೂಷಣ್, ರಘು, ಮಾರುತಿ, ಲಕ್ಕಪ್ಪ, ನಾಗರಾಜ್, ಅಶೋಕ್, ನವೀನ್, ಮಹೇಶ್, ಗಿರೀಶ್, ಮಾರಣ್ಣ ಅವರೂ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT