ಬೆಂಗಳೂರು: ಪಕ್ಕದ ಮನೆಯ ನಾಯಿ ತನ್ನ ಪತ್ನಿಯನ್ನು ನೋಡಿ ಬೊಗಳಿದೆ ಎಂಬ ಕಾರಣಕ್ಕೆ ಆಕ್ರೋಶಗೊಂಡ ಪತಿ, ನಾಯಿಗೆ ದೊಣ್ಣೆಯಿಂದ ಹೊಡೆದು ಸಾಯಿಸಲು ಯತ್ನಿಸಿದ ಘಟನೆ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಅಂಜನಪ್ಪ ಎಂಬುವರು ನೀಡಿದ ದೂರಿನ ಮೇಲೆ ಗೋಪಿ ಎಂಬುವರ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಂಜನಪ್ಪ ಅವರು ಸ್ಕೂಬಿ ಹೆಸರಿನ ನಾಯಿ ಸಾಕಿದ್ದಾರೆ. ಏಪ್ರಿಲ್ 9ರ ರಾತ್ರಿ ಪಕ್ಕದ ಮನೆಯ ಮಹಿಳೆಯನ್ನು ನೋಡಿ ಬೊಗಳಿದೆ. ಅದರಿಂದ ಕೋಪಗೊಂಡ ಮಹಿಳೆಯ ಪತಿ ಗೋಪಿ, ಅವರ ಮನೆಗೆ ತೆರಳಿ ಗೇಟಿನಲ್ಲಿ ಕಟ್ಟಿದ್ದ ನಾಯಿಗೆ ದೊಣ್ಣೆಯಿಂದ ಹೊಡೆದಿದ್ದಾರೆ. ನಾಯಿಗೆ ಬಾಯಿ ಮತ್ತು ಮೂಗಿನಲ್ಲಿ ರಕ್ತ ಬಂದಿದ್ದು, ಅದು ಪ್ರಜ್ಞೆ ತಪ್ಪಿತ್ತು.

ಕೂಡಲೇ ಮಾಲೀಕರು ಅದನ್ನು ಪೆಟ್ ಕ್ಲಿನಿಕ್ಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದು, ಚೇತರಿಸಿಕೊಳ್ಳುತ್ತಿದೆ. ನಾಯಿಗೆ ಹೊಡೆದಿರುವ ದೃಶ್ಯ ಸಿ.ಸಿ.ಟಿ.ವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಜಾಲತಾಣದಲ್ಲಿ ಹರಿದಾಡುತ್ತಿದೆ.

ನಾಯಿ ಮಾಲೀಕ ಈ ಸಂಬಂಧ ನೀಡಿದ ದೂರಿನ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.