ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳದಲ್ಲಿ ಕಾರು ಚಾಲಕ ಸಂತೋಷ್ ಎಂಬಾತನ ತುಟಿ ಕಚ್ಚಿ ಗಾಯಗೊಳಿಸಿದ್ದ ಉದ್ಯಮಿಯೊಬ್ಬರ ಮನೆ ಕೆಲಸದ ವ್ಯಕ್ತಿಯನ್ನು ಸಂಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ರಾಜೇಶ್ ಶ್ಯಾಂ (30) ಬಂಧಿತ. ಪಿಒಪಿ ಕೆಲಸಗಾರನಾಗಿದ್ದ ಆರೋಪಿಯು ಸಂತೋಷ್ ಹಾಗೂ ಭದ್ರತಾ ಸಿಬ್ಬಂದಿ ಈಶ್ವರಪ್ಪ ಎಂಬುವರ ಜೊತೆ ನಿರ್ಮಾಣ ಹಂತದ ಕಟ್ಟಡದಲ್ಲಿ ವಾಸವಿದ್ದ. ಇದೇ 22ರ ರಾತ್ರಿ 9.30ರ ಸುಮಾರಿಗೆ ಮೂವರೂ ಕೊಠಡಿಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಈ ವೇಳೆ ರಾಜೇಶ್, ಈಶ್ವರಪ್ಪ ಅವರ ಮೇಲೆ ನೀರು ಸುರಿದಿದ್ದ. ಇದನ್ನು ಸಂತೋಷ್ ಪ್ರಶ್ನಿಸಿದ್ದ. ಆಗ ಇಬ್ಬರ ನಡುವೆ ಜಗಳವಾಗಿತ್ತು. ಆರೋಪಿಯು ಸಿಟ್ಟಿನಿಂದ ಸಂತೋಷ್ ತುಟಿಯನ್ನು ಕಚ್ಚಿದ್ದ. ಹೀಗಾಗಿ ಮೇಲು ತುಟಿಯ ಚರ್ಮ ಹರಿದಿತ್ತು’ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.