ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾರದ್ದೋ ಮನೆ ಮಾರಾಟಕ್ಕಿಟ್ಟರು!

Last Updated 18 ಜನವರಿ 2020, 6:10 IST
ಅಕ್ಷರ ಗಾತ್ರ

ಬೆಂಗಳೂರು: ಯಾರದ್ದೋ ಮನೆ ಫೋಟೊ ತೆಗೆದು ಅದು ಮಾರಾಟಕ್ಕಿದೆ ಎಂದು ಫೇಸ್‌ಬುಕ್‌ನಲ್ಲಿ ಜಾಹೀರಾತು ನೀಡಿದ್ದ ಆರೋಪದಡಿ ‘ಗ್ರೀನ್ ಸಿಟಿ ಬಿಡಿಎ ರಿಯಲ್ ಎಸ್ಟೇಟ್ – ಬೆಂಗಳೂರು ಗ್ರೂಪ್’ ವಿರುದ್ಧ ಕೋಣನಕುಂಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಕೊತ್ತನೂರು ಬಳಿ ಜಂಬೂಸವಾರಿ ದಿಣ್ಣೆ ನಿವಾಸಿ ಎಂ.ಮುನಿ ವೆಂಕಟಪ್ಪ ದೂರು ನೀಡಿದ್ದರು. ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.‘ಗ್ರೀನ್ ಸಿಟಿ ಬಿಡಿಎ ರಿಯಲ್ ಎಸ್ಟೇಟ್ – ಬೆಂಗಳೂರು ಗ್ರೂಪ್’ ಮಾಲೀಕರು ಯಾರೆಂಬುದನ್ನು ಪತ್ತೆ ಮಾಡಿ ನೋಟಿಸ್‌ ನೀಡಬೇಕಿದೆ’ ಎಂದು ಪೊಲೀಸರು ಹೇಳಿದರು.

‘ಮುನಿವೆಂಕಟಪ್ಪ ಮನೆ ಫೋಟೊವನ್ನು 2018ರ ಸೆ.23ರಂದೇ ಫೇಸ್‌ಬುಕ್‌ನಲ್ಲಿ ಅಪ್‌ಲೋಡ್ ಮಾಡಿದ್ದು, ₹ 20 ಲಕ್ಷಕ್ಕೆ ಮಾರಾಟಕ್ಕಿದೆ’ ಎಂದು ಹೇಳಲಾಗಿದೆ. ‘ಜಾಹೀರಾತು ನೋಡಿದ್ದ ಸಂಬಂಧಿಕರೊಬ್ಬರು ಮುನಿವೆಂಕಟಪ್ಪ ಅವರಿಗೆ ಮಾಹಿತಿ ನೀಡಿದ್ದರು’ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT