ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮ್ಯಾಂಡಸ್‌ ಚಂಡಮಾರುತ: ಮುನ್ನೆಚ್ಚರಿಕೆಗೆ ಆರೋಗ್ಯ ಇಲಾಖೆ ಸೂಚನೆ

Last Updated 13 ಡಿಸೆಂಬರ್ 2022, 4:08 IST
ಅಕ್ಷರ ಗಾತ್ರ

ಬೆಂಗಳೂರು: ಮ್ಯಾಂಡಸ್‌ ಚಂಡಮಾರುತದಿಂದಾಗಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆ, ಶೀತಗಾಳಿ ಹಾಗೂ ಅತಿ ಕಡಿಮೆ ತಾಪಮಾನ ವರದಿಯಾಗಿದೆ. ಈ ಪರಿಸ್ಥಿತಿ ಇನ್ನೂ ಹಲವು ದಿನಗಳ ಕಾಲ ಮುಂದುವರಿಯುವ ಸಾಧ್ಯತೆ ಇರುವುದರಿಂದ ಆರೋಗ್ಯ ಇಲಾಖೆ ಹಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸಲಹೆ ನೀಡಿದೆ.

ಮುಂದಿನ ವಾರದಲ್ಲಿ ಇನ್ನೊಂದು ಚಂಡಮಾರುತವು ಬಂಗಾಳ ಕೊಲ್ಲಿಗೆ ಅಪ್ಪಳಿಸುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಹೀಗಾಗಿ, ಚಳಿಗಾಲದ ದಿನಗಳಲ್ಲಿ ನಾಗರಿಕರು, ಮಕ್ಕಳು, ಗರ್ಭಿಣಿಯರು, ವೃದ್ಧರು ಮತ್ತು ವಿವಿಧ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವವರು ಆರೋಗ್ಯ ಕಾಪಾಡಿಕೊಳ್ಳಲು ಎಚ್ಚರವಹಿಸಬೇಕು ಎಂದು ಆಯುಕ್ತ ರಂದೀಪ್‌ ಡಿ. ಸಲಹೆ ನೀಡಿದ್ದಾರೆ.

ಮಾಡಬೇಕಾದ ಕಾರ್ಯಗಳು

* ಯಾವಾಗಲೂ ಬಿಸಿ ನೀರು ಅಥವಾ ಸೂಪ್‌ಗಳನ್ನು ಕುಡಿಯಬೇಕು.

* ಸುಲಭವಾಗಿ ಜೀರ್ಣವಾಗುವ ಹಾಗೂ ತಾಜಾ ಆಹಾರ ಪದಾರ್ಥಗಳನ್ನು ಸೇವಿಸುವುದು

* ಯಾವಾಗಲೂ ಸ್ವೆಟರ್‌, ಸಾಕ್ಸ್‌, ಕೈಗವಸುಗಳನ್ನು ಧರಿಸುವುದು

* ಅನಗತ್ಯವಾಗಿ ಹೊರ ಸಂಚಾರ ತಪ್ಪಿಸಬೇಕು

* ಕಿವಿಗಳನ್ನು ಹತ್ತಿಯಿಂದ ಮುಚ್ಚಿಕೊಳ್ಳಬೇಕು ಅಥವಾ ಸ್ಕಾರ್ಫ್‌ ಕಟ್ಟಿಕೊಳ್ಳಬೇಕು.

* ನೆಗಡಿ, ಕೆಮ್ಮು ಹಾಗೂ ಜ್ವರದ ಲಕ್ಷಣಗಳಿರುವವರಿಂದ ದೂರ ಇರಬೇಕು

* ಕೆಮ್ಮುವಾಗ ಮತ್ತು ಸೀನುವಾಗ ಕರವಸ್ತ್ರ ಅಥವಾ ಟಿಶ್ಯೂ ಪೇಪರ್ ಬಳಸಬೇಕು.

* ಜ್ವರ ಅಥವಾ ಫ್ಲೂ ಲಕ್ಷಣಗಳು ಅಥವಾ ಇತರ ಯಾವುದಾದರೂ ಕಾಯಿಲೆಯ ಲಕ್ಷಣಗಳಿದ್ದಲ್ಲಿ ತಕ್ಷಣವೇ ವೈದ್ಯರ ಸಲಹೆ ಪಡೆಯಬೇಕು.

ಇವುಗಳನ್ನು ಮಾಡಬಾರದು

* ತಣ್ಣನೆಯ ಪಾನೀಯಗಳು, ಐಸ್‌ಕ್ರೀಂ ಸೇವಿಸಬಾರದು

* ತಣ್ಣಗಿನ ನೀರು ಕುಡಿಯಬಾರದು

* ಮಳೆಯಲ್ಲಿ ನೆನೆಯುವುದನ್ನು ತಪ್ಪಿಸಬೇಕು

* ಹೊರಾಂಗಣ ಪ್ರವಾಸಗಳನ್ನು ಸಾಧ್ಯವಾದಷ್ಟು ತಪ್ಪಿಸಬೇಕು.

* ಮಸಾಲಯುಕ್ತ ಪದಾರ್ಥಗಳು ಅಥವಾ ಜಂಕ್‌ ಫುಡ್‌ಗಳನ್ನು ತ್ಯಜಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT