ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾವು ಖರೀದಿಗೆ ಬಿಎಎಫ್‍ನಿಂದ ಆನ್‍ಲೈನ್ ಸೇವೆ

ತೋಟದಿಂದ ಅಪಾರ್ಟ್‌ಮೆಂಟ್‌ ಸಮುಚ್ಚಯಕ್ಕೆ ನೇರವಾಗಿ ತಲುಪಲಿದೆ ಮಾವು
Last Updated 23 ಮೇ 2020, 19:05 IST
ಅಕ್ಷರ ಗಾತ್ರ

ಬೆಂಗಳೂರು: ಮಾವು ನೇರ ಖರೀದಿಗೆ ನೆರವಾಗಲು ಬೆಂಗಳೂರು ಅಪಾರ್ಟ್‍ಮೆಂಟ್ಸ್ ಸಮುಚ್ಚಯಗಳ ಒಕ್ಕೂಟವು (ಬಿಎಎಫ್) ಆನ್‍ಲೈನ್ ಸೇವೆ ಆರಂಭಿಸಿದೆ.

ಇದು ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ಸಹಭಾಗಿತ್ವದಲ್ಲಿ ಕಾರ್ಯನಿರ್ವಹಿಸಲಿದೆ. ಕೋಲಾರ, ರಾಮನಗರ, ಚಿಕ್ಕಬಳ್ಳಾಪುರ ಭಾಗಗಳಿಂದ ಕೊಯಿಲಿಗೆ ಬಂದಿರುವ ಮಾವಿಗೆ ಮಾರುಕಟ್ಟೆ ವಿಸ್ತರಿಸುವ ಉದ್ದೇಶದಿಂದ ಈ ವ್ಯವಸ್ಥೆ ಮಾಡಲಾಗಿದೆ.s

'ಬಿಎಎಫ್‍ನೊಂದಿಗೆ ನಿಗಮ ಲಿಂಕೇಜ್ ಮಾಡಿಕೊಂಡಿದೆ. ಅಪಾರ್ಟ್‍ಮೆಂಟ್ ಸಮುಚ್ಚಯಗಳ ನಿವಾಸಿಗಳು ನೇರವಾಗಿ ಆನ್‍ಲೈನ್ ಮೂಲಕ ತಮ್ಮಿಷ್ಟದ ಮಾವುಗಳು ಹಾಗೂ ಖರೀದಿ ಪ್ರಮಾಣವನ್ನು ನಮೂದಿಸಬಹುದು. ತಮ್ಮ ವಿಳಾಸ ಹಾಗೂ ಮಾವು ಬೇಕಿರುವ ದಿನಾಂಕವನ್ನು ನಮೂದಿಸಿದರೆ, ಇದರ ಮಾಹಿತಿ ನಿಗಮಕ್ಕೆ ರವಾನೆಯಾಗಲಿದೆ. ಬೇಡಿಕೆಯ ಮಾಹಿತಿಯನ್ನು ರೈತರಿಗೆ ತಲುಪಿಸಿ, ನೇರವಾಗಿ ಅಪಾರ್ಟ್‍ಮೆಂಟ್ಸಮುಚ್ಚಯಗಳ ಬಳಿಗೆ ಮಾವು ತಲುಪಿಸಲಾಗುವುದು' ಎಂದು ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಸಿ.ಜಿ.ನಾಗರಾಜ್ ತಿಳಿಸಿದರು.

ಬಾದಾಮಿ, ರಸಪುರಿ, ಸೇಂದೂರ, ತೋತಾಪುರಿ, ಆಲ್ಫೋನ್ಸೋ, ಬಂಗನ್‍ಪಲ್ಲಿ, ಮಲಗೋಬಾ, ಮಲ್ಲಿಕಾ, ನಾಟಿ, ಕಲಪಾಡು, ಕೇಸರ್, ಸಕ್ಕರೆಗುತ್ತಿ ತಳಿಗಳ ಮಾವುಗಳು ಖರೀದಿಗೆ ಲಭ್ಯ.

ಮಾವು ಖರೀದಿಸುವವರು https://forms.gle/FAdsZwhKmnQbUWiE7 ಅಥವಾ ಇಮೇಲ್ ksmdmc@gmail.com ಅನ್ನು ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT