ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾವು: ಹೊರ ರಾಜ್ಯಗಳಲ್ಲೂ ಮಾರುಕಟ್ಟೆ

‘ಕೆಎಸ್‌ಎಂಡಿಎಂಸಿ’ಯಿಂದ ಶೀಘ್ರದಲ್ಲೇ ಬೆಳೆಗಾರರು–ವ್ಯಾಪಾರಿಗಳ ಸಭೆ
Last Updated 4 ಫೆಬ್ರುವರಿ 2022, 19:22 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದ ಮಾವು ಬೆಳೆಗಾರರಿಗೆ ಈ ಬಾರಿ ಹೊರ ರಾಜ್ಯಗಳಲ್ಲೂ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲುಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ (ಕೆಎಸ್‌ಎಂಡಿಎಂಸಿ) ಚಿಂತನೆ ನಡೆಸಿದೆ.

ಇದಕ್ಕಾಗಿ ದೆಹಲಿ, ಮುಂಬೈ, ಕೋಲ್ಕತ್ತ ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿನ ಮಾವು ವ್ಯಾಪಾರಿಗಳನ್ನು ಬೆಂಗಳೂರಿಗೆ ಕರೆಸಿ, ಅವರೊಂದಿಗೆ ಸಭೆ ನಡೆಸಲು ನಿಗಮ ಮುಂದಾಗಿದೆ.

ಕೋವಿಡ್‌ ಕಾರಣದಿಂದಾಗಿ ಮಾವು ಬೆಳೆಗಾರರಿಗೆಎರಡು ವರ್ಷಗಳಿಂದ ನಿರೀಕ್ಷಿತ ಮಟ್ಟದ ಮಾರುಕಟ್ಟೆ ಲಭ್ಯವಾಗಿರಲಿಲ್ಲ. ಇದನ್ನು ಮನಗಂಡು ಅಂಚೆ ಮೂಲಕ ಮನೆ ಬಾಗಿಲಿಗೆ ಮಾವು ತಲುಪಿಸುವ ಆನ್‌ಲೈನ್‌ ಸೇವೆಯನ್ನು ನಿಗಮ ಆರಂಭಿಸಿತ್ತು. ಸುಮಾರು 300 ಟನ್‌ಗಳಷ್ಟು ಮಾವು ಅಂಚೆ ಮೂಲಕವೇ ಬಿಕರಿಯಾಗಿತ್ತು.

ಮಾವು ಕೊಯಿಲಿನ ಸಮಯ ಸಮೀಪಿಸುತ್ತಿರುವುದರಿಂದ ಈ ಬಾರಿ ರಾಜ್ಯದಲ್ಲಿ ಮಾತ್ರವಲ್ಲದೆ, ಹೊರ ರಾಜ್ಯದ ಜನರಿಗೂ ಮಾವಿನ ರುಚಿ ಉಣಬಡಿಸಲು ನಿಗಮ ಯೋಜನೆ ರೂಪಿಸಿದೆ. ಇದಕ್ಕಾಗಿ ಅಲ್ಲಿನ ಪ್ರಮುಖ ಮಾವು ವ್ಯಾಪಾರಿಗಳು ಹಾಗೂ ರಾಜ್ಯದ ಮಾವು ಬೆಳೆಗಾರರನ್ನು ಒಂದೆಡೆ ಸೇರಿಸಿ ವ್ಯಾಪಾರ ಸುಗಮಗೊಳಿಸುವ ಬಗ್ಗೆ ಸಮಾಲೋಚನೆ ನಡೆಸಲಿದೆ.

‘ಮಾವಿನ ತೋಟಗಳೆಲ್ಲ ಹೂವಿನಿಂದ ತುಂಬಿಕೊಂಡಿದ್ದು, ಮಾವು ಋತುವಿನ ಸ್ವಾಗತಕ್ಕೆ ಸಮಯ ಪಕ್ವವಾಗಿದೆ. ಎರಡು ವರ್ಷಗಳಿಂದ ಸಂಕಷ್ಟ ಎದುರಿಸಿದ್ದ ಮಾವು ಬೆಳೆಗಾರರಿಗೆ ಈ ಸಲ ರಾಷ್ಟ್ರಮಟ್ಟದಲ್ಲಿ ಮಾರುಕಟ್ಟೆ ವಿಸ್ತರಿಸುವ ಉದ್ದೇಶದಿಂದ ಫೆಬ್ರುವರಿಯಲ್ಲಿ ಸಭೆ ಆಯೋಜಿಸಲಿದ್ದೇವೆ’ ಎಂದು ಕೆಎಸ್‌ಎಂಡಿಎಂಸಿ ಅಧ್ಯಕ್ಷ ಕೆ.ವಿ.ನಾಗರಾಜ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಬೇರೆ ರಾಜ್ಯಗಳ ಮಾವು ಮಾರುಕಟ್ಟೆಗಳ ವ್ಯಾಪಾರಿಗಳನ್ನು ಸಭೆಗೆ ಆಹ್ವಾನಿಸಿದ್ದೇವೆ. ಮಾವು ಬೆಳೆಗಾರರ ಸಂಸ್ಥೆಗಳು ಹಾಗೂ ರೈತರೂ ಸಭೆಯಲ್ಲಿ ಭಾಘವಹಿಸಲಿದ್ದಾರೆ. ಮಾವು ಫಸಲಿನ ಬಗ್ಗೆ ಅವರೊಂದಿಗೆ ಚರ್ಚಿಸಿ, ಬೇರೆ ರಾಜ್ಯಗಳಿಗೆ ಮಾವು ಪೂರೈಸುವ ಒಪ್ಪಂದಗಳನ್ನು ಮಾಡಿಕೊಳ್ಳಲಿದ್ದೇವೆ. ಬೆಳೆಗಾರರು ಮತ್ತು ವ್ಯಾಪಾರಿಗಳ ನಡುವೆ ನಿಗಮವು ಸೇತುವೆಯಾಗಿ ಕಾರ್ಯನಿರ್ವಹಿಸಲಿದೆ’ ಎಂದರು.

‘ಭಾರಿ ಮಳೆಯಿಂದಾಗಿ ಈ ವರ್ಷದ ಮಾವು ಇಳುವರಿ ಕುಂಠಿತವಾಗುವ ಸಾಧ್ಯತೆ ಇದೆ. ಮಾರುಕಟ್ಟೆಗೆ ಮಾವು ಬರುವುದೂ ತಡವಾಗಲಿದೆ. ಆದರೆ, ಮಾವು ಬೆಳೆಗಾರರಿಗೆ ಯಾವುದೇ ಸಮಸ್ಯೆಯಾಗದಂತೆ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವುದು ನಿಗಮದ ಉದ್ದೇಶ. ಕಳೆದ ವರ್ಷದಂತೆಈ ಬಾರಿಯೂ ಮಾವಿನ ಹಣ್ಣನ್ನು ಅಂಚೆ ಮೂಲಕ ಮನೆ ಮನೆಗೆ ತಲುಪಿಸುವ ವ್ಯವಸ್ಥೆ ಮುಂದುವರಿಯಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT