ಕೆ.ಆರ್.ಪುರ: ಸಮಾನತೆ, ಏಕತೆ, ಯುವಶಕ್ತಿ, ಸಾಮಾಜಿಕ ನ್ಯಾಯದ ಮೌಲ್ಯಗಳ ಜಾಗೃತಿಗಾಗಿ ವೈಚಾರಿಕ ಪ್ರಗತಿಪರ ವೇದಿಕೆ (ಕರ್ನಾಟಕ) ಬೆಳತ್ತೂರಿನಲ್ಲಿ ಹಮ್ಮಿಕೊಂಡಿದ್ದ ‘ಹಕ್ಕುಗಳಿಗಾಗಿ ಓಟ’ ಮ್ಯಾರಥಾನ್ನಲ್ಲಿ ನೂರಾರು ಜನ ಪಾಲ್ಗೊಂಡಿದ್ದರು.

5 ಕಿ.ಮೀ. ಹಾಗೂ 10 ಕಿ.ಮೀ. ಮ್ಯಾರಥಾನ್ಗೆ ಬಾಕ್ಸಿಂಗ್ ಕ್ರೀಡಾಪಟು ಎಂ. ವೇಣು ಅವರು ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ‘ಯುವ ಪೀಳಿಗೆ ಆರೋಗ್ಯ ಕಾಪಾಡುವುದರ ಜೊತೆಗೆ ನಮ್ಮ ಹಕ್ಕುಗಳನ್ನು ರಕ್ಷಿಸಲು ಹೋರಾಟ ಮಾಡಬೇಕು. ದೇಶದ ಏಕತೆಯ ದೃಷ್ಟಿಯಿಂದ ನಾವೆಲ್ಲರೂ ಒಂದಾಗಬೇಕು’ ಎಂದು ಕರೆ ನೀಡಿದರು.

ವೈಚಾರಿಕ ಪ್ರಗತಿಪರ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಎಂ.ಆರ್. ವೆಂಕಟೇಶ್ ಮಾತನಾಡಿ, ‘ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯಗಳನ್ನು ಸಾರ್ವಜನಿಕರಿಗೆ ತಲುಪಿಸುವ ಉದ್ದೇಶದಿಂದ ಈ ಮ್ಯಾರಥಾನ್ ಹಮ್ಮಿಕೊಳ್ಳಲಾಗಿತ್ತು. 5 ಹಾಗೂ 10 ಕಿ.ಮೀ. ಓಟದಲ್ಲಿ ಪ್ರಥಮ ಸ್ಥಾನ ಗಳಿಸಿದವರಿಗೆ ₹25 ಸಾವಿರ ನಗದು ಬಹುಮಾನವನ್ನು ಬರುವ ಮೇ 31ರಂದು ನಡೆಯುವ ಕಾರ್ಯಕ್ರಮದಲ್ಲಿ ಪ್ರದಾನ ಮಾಡಲಾಗುತ್ತದೆ ಎಂದು ಮಾಹಿತಿ ನೀಡಿದರು.

ಪದಾಧಿಕಾರಿಗಳಾದ ಎಂ.ಆರ್. ವೆಂಕಟೇಶ್, ಚಿನ್ನಸ್ವಾಮಿ, ಅಸಿಫ್, ವಿಜಯನ್, ಬೆಳತ್ತೂರು ರಮೇಶ್, ಮಹೇಂದ್ರ, ಕೆ. ಗಂಗಾಧರ್, ಮಾಸ್ತಿ ಜಗನ್ನಾಥ್, ಕಾಂಚನಾ, ಆದೂರು ಮುನಿರಾಜು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.