ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು | ವಿದ್ಯಾರ್ಥಿಗಳಿಂದ ಮಾಸ್ಕ್‌ ತಯಾರಿಸಿ, ವಿತರಣೆ

Last Updated 22 ಏಪ್ರಿಲ್ 2020, 9:30 IST
ಅಕ್ಷರ ಗಾತ್ರ

ಬೆಂಗಳೂರು: ಮಾಸ್ಕ್‌ ಕೊಳ್ಳಲಾರದ ಬಡವರು, ನಿರ್ಗತಿಕರು ಹಾಗೂ ವ್ಯಾಪಾರಸ್ಥರಿಗೆವೊಗ್‌ ಇನ್‌ಸ್ಟಿಟ್ಯೂಟ್‌ ಆಫ್‌ ಆರ್ಟ್‌ ಆ್ಯಂಡ್‌ ಡಿಸೈನ್‌ನ ಮೂವರು ವಿದ್ಯಾರ್ಥಿಗಳು ತಾವೇ ಹತ್ತಿ ಬಟ್ಟೆಯಲ್ಲಿ ಮಾಸ್ಕ್‌ಗಳನ್ನು ತಯಾರಿಸಿ ಹಂಚುತ್ತಿದ್ದಾರೆ.

ಮಾಸ್ಕ್‌ ಬಳಸುವವರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಮಾರುಕಟ್ಟೆಯಲ್ಲಿ ಅವುಗಳ ದರ ದುಪ್ಪಟ್ಟಾಯಿತು. ಹೀಗಾಗಿ ಅನೇಕರಿಗೆ ಅವುಗಳನ್ನು ಕೊಳ್ಳಲು ಸಾಧ್ಯವಾಗುತ್ತಿರಲಿಲ್ಲ. ಇದನ್ನು ಮನಗಂಡವಿದ್ಯಾರ್ಥಿಗಳಾದ ನಿಕಿತಾ ಕೇಸರಿ, ಸಂದೀಪ್‌ ರಜನ್‌ ಹಾಗೂ ಹೃತ್ವಿಕ್‌ ಅವರು ತಮ್ಮ ಶಕ್ತಿಯಾನುಸಾರ ಮಾಸ್ಕ್‌ಗಳನ್ನು ತಯಾರಿಸಿನಗರದ ನಾನಾ ಭಾಗದಲ್ಲಿರುವ ಜನರಿಗೆ ಹಂಚುತ್ತಿದ್ದಾರೆ.

ಆರಂಭದಲ್ಲಿ 1,500 ಮಾಸ್ಕ್‌ಗಳನ್ನು ತಯಾರಿಸಿ ಅಂಗಡಿಯವರು, ಹಣ್ಣು, ತರಕಾರಿ ವ್ಯಾಪಾರಿಗಳು, ಪೌರಕಾರ್ಮಿಕರಿಗೆ ಹಂಚಿದರು. ಅಷ್ಟೇ ಅಲ್ಲ, ಬಡವರು, ನಿರ್ಗತಿಕರು, ವೃದ್ಧರು ಹಾಗೂ ಅಂಧರಿಗೆ ದಿನನಿತ್ಯದ ಅಗತ್ಯ ವಸ್ತುಗಳು ಹಾಗೂ ರೇಷನ್‌ ಕೂಡ ಒದಗಿಸುವ ಕೆಲಸ ಮಾಡುತ್ತಿದ್ದಾರೆ. ಲಾಕ್‌ಡೌನ್‌ ಮುಗಿಯುವ ತನಕವೂ ಅಗತ್ಯ ಇರುವವರಿಗೆ ಮಾಸ್ಕ್‌ ಹಾಗೂ ಅಗತ್ಯ ವಸ್ತುಗಳನ್ನು ಹಂಚುವ ನಿರ್ಧಾರ ಮಾಡಿದ್ದಾರೆ ಈ ವಿದ್ಯಾರ್ಥಿಗಳು.

‘ನಾನು ತರಕಾರಿ ಖರೀದಿಸುವಾಗ ಅನೇಕರು ಮಾಸ್ಕ್‌ ಧರಿಸದೇ ಬಂದಿದ್ದನ್ನು ನೋಡಿದೆ. ಕೆಲವರು ತಮ್ಮ ಮುಖಕ್ಕೆ ಮಫ್ಲರ್‌ ಸುತ್ತಿಕೊಂಡಿದ್ದರು. ಆಗ ಮಾಸ್ಕ್‌ ಹಂಚಬೇಕು ಎಂದು ನಿರ್ಧರಿಸಿದೆ’ ಎಂದುಬಿ.ಎಸ್‌ಸಿ ಫ್ಯಾಷನ್‌ ಓದುತ್ತಿರುವ ಹೃತ್ವಿಕ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT