ಭಾನುವಾರ, ಜುಲೈ 25, 2021
28 °C

ಗ್ರಂಥಾಲಯ ಇಲಾಖೆ ಸಿಬ್ಬಂದಿಗೆ ಮಾಸ್ಕ್ ಕೊಡುಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೊರೊನಾ ಕಾಲಘಟ್ಟದಲ್ಲಿ ಕರ್ತವ್ಯ ನಿರ್ವಹಿಸಲು ಅನುವಾಗುವಂತೆ ರಾಜ್ಯದ ಎಲ್ಲೆಡೆಯ ಸಾರ್ವಜನಿಕ ಗ್ರಂಥಾಲಯದ ಸಿಬ್ಬಂದಿಗೆ ರಾಜ್ಯ ಗ್ರಂಥಾಲಯ ಇಲಾಖೆಯ ಮೊದಲ ನಿರ್ದೇಶಕರಾದ ದಿವಂಗತ ನೀಲಪ್ಪ ದ್ಯಾಮಪ್ಪ ಬಗ್ರಿ ಅವರ ಕುಟುಂಬದ ಸದಸ್ಯರು ಮಾಸ್ಕ್‌ಗಳನ್ನು ಉಚಿತವಾಗಿ ನೀಡಿದರು.

ಗ್ರಂಥಾಲಯ ಇಲಾಖೆಗೆ ನೀಡಲಾದ ಮಾಸ್ಕ್ ಗಳನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಅವರಿಗೆ ದಿವಂಗತ ದ್ಯಾಮಪ್ಪ ಬಗ್ರಿಯವರ ಧರ್ಮಪತ್ನಿ  ಶಾಂತಮ್ಮ ಬಗ್ರಿ ಹಾಗೂ ಅವರ ಪುತ್ರಿ ಅನ್ನಪೂರ್ಣ ಬಗ್ರಿ ಹಾಗೂ ಅವರ ಪುತ್ರ ನಯೋನಿಕಾ ಏ ಕೇರ್ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಪ್ರಶಾಂತ್ ಎಸ್.ಬಿ. ಹಸ್ತಾಂತರಿಸಿದರು.

ಈ ಮಾಸ್ಕ್ ಗಳನ್ನು ರಾಜ್ಯದ ಕೇಂದ್ರ ಗ್ರಂಥಾಲಯ ಸೇರಿದಂತೆ ನಗರ, ಗ್ರಾಮಾಂತರ ಗ್ರಂಥಾಲಯಗಳಿಗೆ ನೀಡುವಂತೆ ಸಚಿವರು ಸೂಚಿಸಿದರು. ಅತ್ಯಂತ ಪ್ರೀತಿಯಿಂದ ಮತ್ತು ಕಾಳಜಿಯಿಂದ ನೀಡಿರುವ ಈ ಮಾಸ್ಕ್‌ಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಗ್ರಂಥಾಲಯ ಇಲಾಖೆಯ ನಿರ್ದೇಶಕ ಡಾ. ಸತೀಶ್ ಬಿ. ಹೊಸಮನಿ ಅವರಿಗೆ ಸಲಹೆ ನೀಡಿದರು.

ಇಂತಹ ಮಹತ್ತರ ಕಾರ್ಯಕ್ಕೆ ಮುಂದಾದ ಎನ್.ಡಿ. ಬಗ್ರಿಯವರ ಕುಟುಂಬದವರಿಗೆ ಕೃತಜ್ಞತೆ ಸಲ್ಲಿಸಿ ಈ ಔದಾರ್ಯ ಎಲ್ಲರಿಗೂ ಮಾದರಿಯಾಗಿದೆ ಎಂದರು. ಗ್ರಂಥಾಲಯ ಇಲಾಖೆ ಅಧಿಕಾರಿಗಳು ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು