ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುವಿ ವಿಕಿರಣಗಳಿಂದ ಮಾಸ್ಕ್‌ ಸ್ವಚ್ಛತೆ

Last Updated 20 ಮೇ 2020, 14:25 IST
ಅಕ್ಷರ ಗಾತ್ರ

ಬೆಂಗಳೂರು: ಒಮ್ಮೆ ಉಪಯೋಗಿಸಿದ ಎನ್–95 ರೆಸ್ಪಿರೇಟರ್ ಮಾಸ್ಕ್‌‌ಗಳನ್ನು ನೇರಳಾತೀತ (ಅಲ್ಟ್ರಾ ವೈಲಟ್‌ ರೇಡಿಯೇಷನ್‌)ವಿಕಿರಣಗಳನ್ನು ಬಳಸಿ ವೈಜ್ಞಾನಿಕ ರೀತಿಯಲ್ಲಿ ಸೋಂಕು ನಿವಾರಿಸಿ, ಶುದ್ಧೀಕರಿಸುವಂತಹ(ಸ್ಟರಲೈಸ್)‌ ವಿನೂತನ ವ್ಯವಸ್ಥೆಯನ್ನು ನಗರದ ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್ ಆಸ್ಪತ್ರೆ ಅಳವಡಿಸಿಕೊಂಡಿದೆ.

ಪಿಪಿಇ (ವೈಯಕ್ತಿಕ ರಕ್ಷಣಾ ಉಪಕರಣಗಳು) ಕಿಟ್‍ಗಳು ಕೊರತೆಯಾಗುತ್ತಿರುವ ಹಿನ್ನೆಲೆಯಲ್ಲಿ ಹೀಗೆ ಬಳಸಿದ ಮಾಸ್ಕ್‌ಗಳನ್ನು ಶುದ್ಧೀಕರಿಸಿ ಮರುಬಳಕೆ ಮಾಡುವಂತಹ ವ್ಯವಸ್ಥೆಯನ್ನು ಈ ಆಸ್ಪತ್ರೆ ಅಭಿವೃದ್ಧಿಪಡಿಸಿದೆ.

ಪೋರ್ಟಿಸ್ ಆಸ್ಪತ್ರೆಯ ದಕ್ಷಿಣ ವಲಯದ ವೈದ್ಯಕೀಯ ಕಾರ್ಯಾಚರಣೆಗಳ ನಿರ್ದೇಶಕ ಡಾ.ವಸುಂಧರ ಅತ್ರೆ ಮತ್ತು ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯ ಸೆಂಟ್ರಲ್ ಇನ್‍ಫೆಕ್ಷನ್ ಪ್ರಿವೆನ್ಷನ್ ಅಂಡ್ ಕಂಟ್ರೋಲ್ ಕಮಿಟಿಯ ಅಧ್ಯಕ್ಷ ಡಾ.ಮುರಳಿ ಚಕ್ರವರ್ತಿ ಅವರ ಮಾರ್ಗದರ್ಶನದಲ್ಲಿ ಈ ಸಿಸ್ಟಂ ಸಂಶೋಧಿಸಲಾಗಿದೆ. ಇದರಲ್ಲಿ ಎನ್–95 ರೆಸ್ಪಿರೇಟರ್‌ ಮಾಸ್ಕ್‌ಗಳನ್ನು ಅತ್ಯಂತ ಸರಳವಾಗಿ ಸ್ಯಾನಿಟೈಸ್ ಮಾಡಬಹುದು ಎನ್ನುತ್ತಾರೆ ಆಸ್ಪತ್ರೆ ಸಿಬ್ಬಂದಿ.

ವೈಜ್ಞಾನಿಕ ಮಾಹಿತಿಯ ಪ್ರಕಾರ, ಮಾಸ್ಕ್‌ಗಳ ಸೋಂಕು ನಿವಾರಣೆಗೆ ಹಾಟ್ ಏರ್ ಓವನ್, ಅಲ್ಟ್ರಾವೈಲೆಟ್ ಜರ್ಮಿಸಿಡಲ್ ಇರಾಡಿಯೇಶನ್ (ಯುವಿಜಿಐ), ಲೇ ಆಫ್ ಮೆಥಡ್, ಪ್ಲಾಸ್ಮಾ ಸ್ಟರಿಲೈಸೇಷನ್ ಎಂಬನಾಲ್ಕು ಪ್ರಮುಖ ಹಂತದ ತಾಂತ್ರಿಕತೆಗಳಿವೆ. ಇದರಲ್ಲಿ ಯಾವುದಾದರೂ ಒಂದು ತಾಂತ್ರಿಕತೆ ಬಳಸಿ ಮಾಸ್ಕ್‌ಗಳನ್ನುಸೋಂಕು ರಹಿತ ಮಾಡಬಹುದು ಹಾಗೂ ಹಾಗೆ ಸೋಂಕುರಹಿತ ಮಾಡಿದ ಮಾಸ್ಕ್‌ ಅನ್ನು ಮರುಬಳಕೆ ಮಾಡಬಹುದು ಎಂದುಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ (ಸಿಡಿಸಿ) ಅನುಮೋದಿಸಿದೆ.

ಈ ಬಗ್ಗೆ ಕುರಿತು ಡಾ.ವಸುಂಧರ ಅತ್ರೆ, ’ಜಾಗತಿಕ ಮಟ್ಟದಲ್ಲಿ ಪಿಪಿಇ ಕಿಟ್‌ ಲಭ್ಯತೆ ಮತ್ತು ಪೂರೈಕೆಯ ಸವಾಲುಗಳನ್ನು ಎದುರಿಸಲಾಗುತ್ತಿದೆ. ಹಾಗಾಗಿ ಫೋರ್ಟಿಸ್ ಆಸ್ಪತ್ರೆ ಎನ್–95 ರೆಸ್ಪಿರೇಟರ್ ಮಾಸ್ಕ್‌ಗಳನ್ನು ವೈಜ್ಞಾನಿಕವಾಗಿ ಶುಚಿಗೊಳಿಸುವ ಮೂಲಕ ಮರುಬಳಕೆ ವಿಧಾನಗಳನ್ನು ಕಂಡುಕೊಂಡಿದೆ‘ ಎಂದು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT