ಶುಕ್ರವಾರ, ಆಗಸ್ಟ್ 23, 2019
22 °C

‘ಮೇಯರ್ ಕಪ್’ ಬ್ಯಾಸ್ಕೆಟ್‌ಬಾಲ್ ಪಂದ್ಯಾವಳಿ

Published:
Updated:

ಬೆಂಗಳೂರು: ‌ಬಿಬಿಎಂಪಿ ಮತ್ತು ರಾಜ್ಯ ಬ್ಯಾಸ್ಕೆಟ್‌ಬಾಲ್ ಸಂಸ್ಥೆ ಸಹಯೋಗದಲ್ಲಿ ‘ಮೇಯರ್ ಕಪ್’ ಬ್ಯಾಸ್ಕೆಟ್‌ಬಾಲ್ ರಾಜ್ಯ ಮಟ್ಟದ ಪಂದ್ಯಾಟ ಆ.7 ರಿಂದ 11ರವರೆಗೆ ನಡೆಯಲಿದೆ ಎಂದು ಮೇಯರ್ ಗಂಗಾಂಬಿಕೆ ತಿಳಿಸಿದರು.

ಜಯನಗರ ವಾರ್ಡ್‌ನ ಕೃಷ್ಣರಾವ್ ಉದ್ಯಾನದಲ್ಲಿ ನಡೆಯುವ ಪಂದ್ಯಾವಳಿಯಲ್ಲಿ ವಿವಿಧ ರಾಜ್ಯಗಳಿಂದ 64 ತಂಡಗಳು ಭಾಗವಹಿಸಲಿವೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಇದೇ ಉದ್ಯಾನದಲ್ಲಿ ನಿರ್ಮಾಣಗೊಂಡಿರುವ ‘ಶಿವಕುಮಾರ ಸ್ವಾಮೀಜಿ’ ಒಳಾಂಗಣ ಬ್ಯಾಡ್ಮಿಂಟನ್ ಕ್ರೀಡಾಂಗಣವನ್ನು ಆ.9 ರಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಉದ್ಘಾಟನೆ ಮಾಡಲಿದ್ದಾರೆ. ಕ್ರಿಯೇಟಿವ್ ಸ್ಪೋರ್ಟ್ಸ್ ಅಕಾಡೆಮಿ, ಪ್ರೀಮಿಯರ್ ಲೀಗ್ ಅಕಾಡೆಮಿ ಸಹಯೋಗದಲ್ಲಿ ‘ಮೇಯರ್ ಕಪ್’ ಬ್ಯಾಡ್ಮಿಂಟನ್ ಪಂದ್ಯಾವಳಿಯನ್ನು ಆ.9ರಿಂದ 12ರವರೆಗೆ ಇದೇ ಕ್ರೀಡಾಂಗಣದಲ್ಲಿ ಆಯೋಜಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

Post Comments (+)