ಮಂಗಳವಾರ, ಏಪ್ರಿಲ್ 7, 2020
19 °C
ಅಧಿಕಾರಿಗಳು–ಮೇಯರ್‌ ನಡುವೆ ಮುಸುಕಿನ ಗುದ್ದಾಟ?

ಮಾಹಿತಿ ನೀಡದ್ದಕ್ಕೆ ಮೇಯರ್‌ ಗರಂ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಬಿಎಂಪಿಯ ಆಗುಹೋಗುಗಳು ಮೇಯರ್‌ ಎಂ.ಗೌತಮ್ ಕುಮಾರ್‌ ಅವರಿಗೆ ತಿಳಿಯುತ್ತಿಲ್ಲವೇ? ಅಧಿಕಾರಿಗಳು ಮೇಯರ್‌ ಅವರಿಂದ ಮಾಹಿತಿಗಳನ್ನು ಮುಚ್ಚಿಡುತ್ತಿದ್ದಾರೆಯೇ? ಮೇಯ
ರ್‌ ಹಾಗೂ ಅಧಿಕಾರಿಗಳ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆಯೇ?

ಮೇಯರ್‌ ಅವರು ಪಾಲಿಕೆ ಎಲ್ಲಾ ವಿಭಾಗಗಳ ಮುಖ್ಯಸ್ಥರಿಗೆ ಮಂಗಳವಾರ ಕಳುಹಿಸಿರುವ ಪತ್ರದ ಟಿಪ್ಪಣಿ ಇಂತಹದ್ದೊಂದು ಸಂದೇಹ ಮೂಡಿಸಿದೆ. ಕಾನೂನು ಕೋಶದ ಮುಖ್ಯಸ್ಥರ ಮೇಲೆ ಮೇಯರ್‌ ತುಸು ಗರಂ ಆಗಿರುವಂತಿದೆ ಈ ಪತ್ರದ ಒಕ್ಕಣೆ.

‘ಪಾಲಿಕೆಗೆ ಸಂಬಂಧಿಸಿದಂತೆ ನ್ಯಾಯಾಲಯಗಳು ನೀಡುವ ಆದೇಶಗಳು, ಪಾಲಿಕೆಯಿಂದ ನ್ಯಾಯಾಲಯಗಳಿಗೆ ಸಲ್ಲಿಸುವ ವರದಿಗಳು ಮತ್ತು ಪ್ರಸ್ತಾವನೆಗಳು ಹಾಗೂ ಸರ್ಕಾರದ ಪ್ರಮುಖ ಆದೇಶಗಳು ನನ್ನ ಗಮನಕ್ಕೆ ಬರುತ್ತಿಲ್ಲ’ ಎಂದು ಮೇಯರ್‌ ಅವರು ಟಿಪ್ಪಣಿಯಲ್ಲಿ ದೂರಿದ್ದಾರೆ.

‘ಇನ್ನು ಮುಂದೆ ನ್ಯಾಯಾಲಯಗಳಲ್ಲಿ ವಿಚಾರಣೆಗೆ ಬರಲಿರುವ ದಾವೆಗಳು, ನ್ಯಾಯಾಲಯಗಳ ಆದೇಶಗಳು, ಪಾಲಿಕೆಯಿಂದ ಸಲ್ಲಿಸುವ ಪ್ರಮಾಣಪತ್ರಗಳು, ಸರ್ಕಾರಕ್ಕೆ ಸಲ್ಲಿಸುವ ವರದಿಗಳು ಮತ್ತು ಪ್ರಸ್ತಾವಗಳು ಸರ್ಕಾರ ಹೊರಡಿಸುವ ಆದೇಶಗಳನ್ನು ಕಾನೂನು ಕೋಶದ ಮುಖ್ಯಸ್ಥರೂ ಸೇರಿದಂತೆ ಎಲ್ಲಾ ವಿಭಾಗಗಳ ಮುಖ್ಯಸ್ಥರು ನನ್ನ ಗಮನಕ್ಕೆ ತರಬೇಕು’ ಎಂದು ಮೇಯರ್‌ ಕಟ್ಟುನಿಟ್ಟಾಗಿ ಸೂಚಿಸಿದ್ದಾರೆ.

ಕೆಲವೊಂದು ಮಾಹಿತಿ ಸಿಗದ ಕಾರಣ ಮಾಧ್ಯಮದವರ ಜೊತೆ ಅಭಿಪ್ರಾಯ ಹಂಚಿಕೊಳ್ಳುವ ಸಂದರ್ಭಗಳಲ್ಲಿ ಮುಜುಗರ ಉಂಟಾಗುತ್ತಿತ್ತು. ಇದನ್ನು ತಪ್ಪಿಸಲು ಇಂತಹ ಆದೇಶ ಮಾಡಿದ್ದೇನೆ 

ಎಂ. ಗೌತಮ್‌ ಕುಮಾರ್‌, ಬಿಬಿಎಂಪಿ ಮೇಯರ್‌ 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು