ಪೋಸ್ಟರ್ ತೆರವು ಕಾರ್ಯಾಚರಣೆ ಅಭಿಯಾನಕ್ಕೆ ಮೇಯರ್ ಚಾಲನೆ

7

ಪೋಸ್ಟರ್ ತೆರವು ಕಾರ್ಯಾಚರಣೆ ಅಭಿಯಾನಕ್ಕೆ ಮೇಯರ್ ಚಾಲನೆ

Published:
Updated:

ಬೆಂಗಳೂರು: ನಗರದ ಸಾರ್ವಜನಿಕ ಸ್ಥಳಗಳಲ್ಲಿರುವ ಭಿತ್ತಿಪತ್ರ (ಪೋಸ್ಟರ್) ತೆರವು ಮತ್ತು ಗೋಡೆಬರಹ ಅಳಿಸುವ ಅಭಿಯಾನಕ್ಕೆ ಮೇಯರ್ ಸಂಪತ್ ರಾಜ್  ಶನಿವಾರ ಚಾಲನೆ ನೀಡಿದರು. 

ಸಂಪತ್ ರಾಜ್ ಹಾಗೂ ಆಡಳಿತ ಪಕ್ಷದ ನಾಯಕ ಎಂ. ಶಿವರಾಜ್ ಅವರು ಗಾಂಧಿನಗರದ ವೈ.ರಾಮಚಂದ್ರ ರಸ್ತೆ ಯಲ್ಲಿ ಭಿತ್ತ ಪತ್ರ ತೆರವುಗೊಳಿಸಿದರು.  

ನಗರದ ಅಂದಗೆಡಿಸುತ್ತಿರುವ ಪೋಸ್ಟರ್‌ಗಳನ್ನು ಹಾಗೂ ಗೋಡೆಬರಹಗಳನ್ನು ಭಾನುವಾರ ಸಂಜೆಯೊಳಗೆ ತೆರವುಗೊಳಿಸುವಂತೆ ಹೈಕೋರ್ಟ್ ಸೂಚನೆ ನೀಡಿದೆ. ಇದಕ್ಕಾಗಿ ಪಾಲಿಕೆ ಎರಡು ದಿನಗಳ ವಿಶೇಷ ಅಭಿಯಾನ ಹಮ್ಮಿಕೊಂಡಿದೆ. 

'ಇನ್ನು ಸಾರ್ವಜನಿಕ ಸ್ಥಳಗಳಲ್ಲಿ ಯಾರಾದರೂ ಪೋಸ್ಟರ್ ಅಂಟಿಸಿದರೆ ಪೋರ್ಟ್ ಕಾಯ್ದೆ ಪ್ರಕಾರ ದಂಡ ವಿಧಿಸುತ್ತೇವೆ' ಎಂದು ಮೇಯರ್ ತಿಳಿಸಿದರು.

ಬರಹ ಇಷ್ಟವಾಯಿತೆ?

 • 6

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !