ಬುಧವಾರ, ಏಪ್ರಿಲ್ 1, 2020
19 °C

ಮಾಧ್ಯಮದ ಎಲ್ಲ ಸಿಬ್ಬಂದಿಗೂ ಸೌಲಭ್ಯ ವಿಸ್ತರಿಸಿ: ಸಿ.ಎಂಗೆ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಪತ್ರಕರ್ತರಿಗೆ ನೀಡಿರುವ ವೈದ್ಯಕೀಯ ವಿಮೆ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಮಾಧ್ಯಮ ಕಚೇರಿಗಳಲ್ಲಿ ಕಾರ್ಯನಿರ್ವಹಿಸುವ ಇತರ ವಿಭಾಗದ ಸಿಬ್ಬಂದಿಗೂ ವಿಸ್ತರಿಸಬೇಕು’ ಎಂದು ಪತ್ರಿ‌ಕಾಲಯದ ಸಿಬ್ಬಂದಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿದ್ದಾರೆ.

‘ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಬಜೆಟ್‍ನಲ್ಲಿ ಪತ್ರಕರ್ತರಿಗೆ ಹಲವು ಸವಲತ್ತುಗಳನ್ನು ಘೋಷಿಸಿದ್ದರು. ನಂತರ ಮೈತ್ರಿ ಸರ್ಕಾರವೂ ಸೌಲಭ್ಯಗಳನ್ನು ಮುಂದುವರಿಸಿತ್ತು. ಮುಂಬರುವ ಬಜೆಟ್‌ನಲ್ಲಿ ತಾವು ಸಂಪಾದಕೀಯ ವಿಭಾಗದವರಿಗೆ ನೀಡಿದ ಸೌಲಭ್ಯವನ್ನು ಇತರ ವಿಭಾಗದವರಿಗೂ ಘೋಷಿಸಬೇಕು’ ಎಂದು ಮನವಿಯಲ್ಲಿ ತಿಳಿಸಲಾಗಿದೆ.

‘ಜಾಹೀರಾತು, ಪ್ರಸರಣ, ಮುದ್ರಣ, ಪ್ಯಾಕಿಂಗ್, ಆಡಳಿತ ಸೇರಿದಂತೆ ವಿವಿಧ ವಿಭಾಗಗಳು ಮಾಧ್ಯಮದ ಅವಿಭಾಜ್ಯ ಅಂಗಗಳಾಗಿವೆ. ಉಳಿದ ವಿಭಾಗಗಳನ್ನು ಗಂಭೀರವಾಗಿ ಪರಿಗಣಿಸಿ, ಸೌಲಭ್ಯಗಳನ್ನು ವಿಸ್ತರಿಸಬೇಕು. ಈ ಬೇಡಿಕೆಗೆ ಸಂಪಾದಕೀಯ ವಿಭಾಗದವರ ಬೆಂಬಲವೂ ಇದೆ’ ಎಂದು ತಿಳಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು