ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊಲೀಸರ ಮಾನವೀಯತೆ

Last Updated 8 ಮಾರ್ಚ್ 2018, 19:30 IST
ಅಕ್ಷರ ಗಾತ್ರ

‘ಪೊಲೀಸ್ ಸಿಬ್ಬಂದಿಗೆ ಕನಿಕರವೇ ಇರುವುದಿಲ್ಲ’ ಎಂಬುದು ಜನಸಾಮಾನ್ಯರ ಅನಿಸಿಕೆ. ಆದರೆ ಇದನ್ನು ಹುಸಿ ಮಾಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಚೆಗೆ ನಡೆದಿರುವುದು ವರದಿಯಾಗಿದೆ.

ದ.ಕ. ಜಿಲ್ಲೆಯ ಕೊಯಿಲ ಗುಡ್ಡದಲ್ಲಿ ಹೃದಯಾಘಾತದಿಂದ ಮೃತಪಟ್ಟ ವ್ಯಕ್ತಿಯೊಬ್ಬರ ಶವವನ್ನು ಊರಿನವರಾರೂ ಮುಟ್ಟದಿದ್ದಾಗ, ಪೊಲೀಸರು ಸ್ಥಳಕ್ಕೆ ಬಂದು ಶವವನ್ನು ಮನೆಗೆ ಸಾಗಿಸಿದ್ದಾರೆ.

ಮನೆಯಲ್ಲಿಯೂ ಧಾರ್ಮಿಕ ವಿಧಿವಿಧಾನಗಳನ್ನು ಪೂರೈಸಲು ಕುಟುಂಬದವರಿಗೆ ಸಹಕರಿಸಿ, ಆನಂತರ ಶವವನ್ನು ಅವರ ಜಮೀನಿಗೆ ಒಯ್ಯಲು ನೆರವಾಗಿ, ಅಂತ್ಯಸಂಸ್ಕಾರ ಮಾಡಿ ಮಾನವೀಯತೆಯನ್ನು ಮೆರೆದಿದ್ದಾರೆ.

ಈ ಸಿಬ್ಬಂದಿಯ ಕೆಲಸ ಮೆಚ್ಚುವಂತಹುದು. ನಿಜವಾಗಿಯೂ ಅವರು ಅಭಿನಂದನಾರ್ಹರು.
-ಡಾ.ಶಿವರಾಜ ಯತಗಲ್, ಲಿಂಗಸುಗೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT