ಪೇಟಿಎಂನಲ್ಲಿ ಮೆಟ್ರೊ ಸ್ಮಾರ್ಟ್ಕಾರ್ಡ್ ರಿಚಾರ್ಜ್
ಬೆಂಗಳೂರು: ‘ನಮ್ಮ ಮೆಟ್ರೊ’ ಸ್ಮಾರ್ಟ್ ಕಾರ್ಡ್ ಅನ್ನು ಇನ್ನು ಮುಂದೆ ಪೇಟಿಎಂ ಮೂಲಕವೂ ರಿಚಾರ್ಜ್ ಮಾಡಬಹುದಾಗಿದೆ. ಶೀಘ್ರದಲ್ಲಿಯೇ ಈ ವ್ಯವಸ್ಥೆ ಫೋನ್ ಪೇನಲ್ಲಿಯೂ ಲಭ್ಯವಾಗಲಿದೆ.
ಈ ಮೊದಲು ಬೆಂಗಳೂರು ಮೆಟ್ರೊ ರೈಲು ನಿಗಮದ (ಬಿಎಂಆರ್ಸಿಎಲ್) ವೆಬ್ಸೈಟ್ ಅಥವಾ ನಿಗಮದ ಆ್ಯಪ್ ಮೂಲಕ ರಿಚಾರ್ಜ್ ಮಾಡಿಕೊಳ್ಳಬಹುದಿತ್ತು. ಕ್ರೆಡಿಟ್ ಕಾರ್ಡ್ ಬಳಸಿ ಅಥವಾ ಡಿಜಿಟಲ್ ರೂಪದಲ್ಲಿ ಮೆಟ್ರೊ ನಿಲ್ದಾಣದ ಕೌಂಟರ್ಗಳಲ್ಲಿಯೂ ರಿಚಾರ್ಜ್ ಮಾಡಿಕೊಳ್ಳಬಹುದಾಗಿದೆ. ಈಗ ಈ ಸೌಲಭ್ಯವನ್ನು ಪೇಟಿಎಂ ಮೂಲಕವೂ ವಿಸ್ತರಿಸಲಾಗಿದೆ. ಈ ಸಂಬಂಧ ಬಿಎಂಆರ್ಸಿಎಲ್ ಮತ್ತು ಆನ್ಲೈನ್ ಪಾವತಿ ಸೇವೆ ಒದಗಿಸುವ ಪೇಟಿಎಂ ಜತೆ ಒಪ್ಪಂದ ಆಗಿದೆ.
‘ಪೇಟಿಎಂ ಅಲ್ಲದೆ, ಫೋನ್ ಪೇ ಕೂಡ ಈ ಸೌಲಭ್ಯ ಒದಗಿಸಲು ಮುಂದೆ ಬಂದಿದೆ. ಜೊತೆಗೆ, ಇನ್ನೂ ಹಲವು ಸರ್ವಿಸ್ ಪ್ರೊವೈಡರ್ಗಳು ಆಸಕ್ತಿ ತೋರಿಸಿವೆ. ಅವರೊಂದಿಗೂ ಕೈಜೋಡಿಸುವ ಬಗ್ಗೆ ನಿಗಮ ಚಿಂತನೆ ನಡೆಸಿದೆ’ ಎಂದು ಬಿಎಂಆರ್ಸಿಎಲ್ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಯಶವಂತ ಚವಾಣ್ ತಿಳಿಸಿದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.