ಮಂಗಳವಾರ, ಜೂನ್ 28, 2022
28 °C

ಪಕ್ಷಿಗಳಿಗೆ ನೀರುಣಿಸುತ್ತಿದೆ ಮಿಡಿತ ಫೌಂಡೇಷನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿರು ಬಿಸಿಲಿಗೆ ಕಾಂಕ್ರೀಟ್‌ ಕಾಡಾದ ಬೆಂಗಳೂರು ನಗರದಲ್ಲಿ ಮನುಷ್ಯರು ಜೊತೆಗೆ ಪ್ರಾಣಿ, ಪಕ್ಷಿಗಳು ಸಹ ನೀರಿಗಾಗಿ ಪರಿತಪಿಸುವಂತಾಗಿದೆ. ಬಿಸಿಲಿನ ತೀವ್ರತೆಗೆ  ಪಕ್ಷಿಗಳು ನಿಡುಸುಯ್ಯುತ್ತಿವೆ.

ಬೇಸಿಗೆಯಲ್ಲಿ ಕುಡಿಯಲು ನೀರು ಸಿಗದೆ ಜೀವ ಬಿಡುತ್ತಿರುವ ಪಕ್ಷಿಗಳಿಗೆ ಮಿಡಿತ ಫೌಂಡೇಷನ್ ನೀರು ಒದಗಿಸುವ ಕೆಲಸ ಮಾಡುತ್ತಿದೆ. ಕುಡಿದು ಬಿಸಾಡುವ ನೀರು, ಪಾನೀಯಗಳ ಖಾಲಿ ಬಾಟಲಿಗಳನ್ನು ಸ್ವಚ್ಛ ಮಾಡಿ ಅವನ್ನು ಪಕ್ಷಿಗಳಿಗೆ ಕುಡಿಯಲು ನೀರು ಮತ್ತು ಆಹಾರ ಧಾನ್ಯಗಳನ್ನು ಒದಗಿಸುವ ಬಳಸುತ್ತಿದೆ. 

ಬೆಂಗಳೂರಿನ ಕೆ.ಆರ್.ಪುರ ಸರ್ಕಾರಿ ಆಸ್ಪತ್ರೆ ಹಾಗೂ ಸ್ಥಳೀಯ ಸುತ್ತಮುತ್ತಲಿನ ಮರಗಳಲ್ಲಿ ನೀರು ಮತ್ತು ಆಹಾರ ಬಟ್ಟಲುಗಳ ಅಳವಡಿಸಿದೆ. 
ಸಂಪರ್ಕ: 9738965213

ಪ್ರಾಣಿ ಪಕ್ಷಿಗಳ ರಕ್ಷಣೆಗೆ ಹೀಗೆ ಮಾಡಿ-
* ಮನೆಯ ಮುಂಭಾಗದಲ್ಲಿ ಅಥವಾ ತಾರಸಿಯ ಮೇಲೆ ಪಾತ್ರೆಯಲ್ಲಿ ನೀರು ತುಂಬಿಸಿಡಿ.
* ಪ್ರತಿ ರಸ್ತೆಯ ಒಂದು ಬದಿಯಲ್ಲಿ ಸಣ್ಣದೊಂದು ತೊಟ್ಟಿ ಇಟ್ಟು ನೀರು ತುಂಬಿಸಿ.
* ಈ ನೀರನ್ನು ಪ್ರತಿ ದಿನ ತಪ್ಪದೇ ಬದಲಿಸಿ.
* ಮನೆಯ ಬಳಿ ಪಕ್ಷಿಗಳು ವಿಶ್ರಾಂತಿ ಪಡೆಯಲು ಬಿದಿರಿನ ಗೂಡು ತೂಗುಹಾಕಿ.
* ಪಕ್ಷಿಗಳಿಗೆ ಆಹಾರಕ್ಕಾಗಿ ಮನೆಯ ಹೊರಗೆ ಕಾಳುಗಳನ್ನು ಹಾಕಿ.

__

ತಮ್ಮ ಮಹಡಿ ಮೇಲ್ಭಾಗದಲ್ಲಿ ಪಾತ್ರೆ, ಮಡಿಗೆಗಳಲ್ಲಿ ಪಕ್ಷಿಗಳಿಗೆ ನೀರು ಒದಗಿಸಿ. ಇದೇ ರೀತಿ ಹವ್ಯಾಸವನ್ನು ಎಲ್ಲರೂ ಬೆಳೆಸಿಕೊಂಡರೆ ಪಕ್ಷಿ ಸಂಕಲವನ್ನು ರಕ್ಷಿಸಬಹುದು. ಸಾರ್ವಜನಿಕರು ನಮ್ಮ ಪ್ರಯತ್ನವನ್ನು ಪ್ರೋತ್ಸಾಹಿಸಿದ್ದಾರೆ. ಇನ್ನೂ ಹೆಚ್ಚಿನ ಸ್ವಯಂಸೇವಕರು ಕೈಜೋಡಿಬೇಕು. ಮಿಡಿತ ಸದಸ್ಯರಾದ ಸೌಮ್ಯ, ಲಕ್ಷ್ಮೀನಾರಾಯಣ ಶ್ರೀನಿವಾಸಲು, ಉಮೇಶ್ ಇವರ ಸಹಕಾರದಿಂದ ಇಂತಹ ಕೆಲಸ ಸಾಧ್ಯವಾಯಿತು.‌'

- ಡಾ. ಪರಿಸರ ಮಂಜುನಾಥ್, ಅಧ್ಯಕ್ಷರು, ಮಿಡಿತ ಫೌಂಡೇಷನ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು