ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಚಾರಕ್ಕೆ ಮೆಟ್ರೊ ಸಿದ್ಧತೆ : ಸ್ಮಾರ್ಟ್‌ ಕಾರ್ಡ್‌ ಇದ್ದವರಿಗಷ್ಟೇ ಸಂಚಾರ ಭಾಗ್ಯ?

ಸರ್ಕಾರದ ಹಸಿರು ನಿಶಾನೆಗಾಗಿ ಕಾಯುತ್ತಿದೆ ಬಿಎಂಆರ್‌ಸಿಎಲ್
Last Updated 16 ಮೇ 2020, 20:00 IST
ಅಕ್ಷರ ಗಾತ್ರ

ಬೆಂಗಳೂರು: ಲಾಕ್‌ಡೌನ್‌ ಅವಧಿ ಮುಕ್ತಾಯವಾದ ಬಳಿಕ ಮೆಟ್ರೊ ರೈಲು ಸಂಚಾರ ಪುನಾರಂಭ ಮಾಡಲು ಬೆಂಗಳೂರು ಮೆಟ್ರೊ ರೈಲು ನಿಗಮವು (ಬಿಎಂಆರ್‌ಸಿಎಲ್) ಸಿದ್ಧತೆ ಮಾಡಿಕೊಳ್ಳುತ್ತಿದೆ.

ಎಂದಿನಿಂದ ನಮ್ಮ ಮೆಟ್ರೊ ಸೇವೆ ಶುರುವಾಗಲಿದೆ ಎಂದು ನಿಗಮವು ಇನ್ನೂ ತಿಳಿಸಿಲ್ಲ.

ಮೇ 17ಕ್ಕೇ ಲಾಕ್‌ಡೌನ್‌ ಅವಧಿ ಮುಗಿಯುವ ನಿರೀಕ್ಷೆ ಇದೆ. ಆ ಬಳಿಕ ನಮ್ಮ ಮೆಟ್ರೊ ರೈಲು ಸಂಚಾರಕ್ಕೆ ಸರ್ಕಾರ ಅನುಮತಿ ನೀಡಿದರೂ, ಈ ಸೇವೆಯನ್ನು ಮತ್ತೆ ಶೂರು ಮಾಡಲು ಕನಿಷ್ಠ ಮೂರು ದಿನಗಳು ಬೇಕು. ಮೆಟ್ರೊ ರೈಲು ಸಂಚಾರ ಆರಂಭವಾದರೂ ಅದು ಷರತ್ತುಬದ್ಧ ಸೇವೆ ಎಂದು ನಿಗಮದ ಅಧಿಕಾರಿಗಳು ಹೇಳುತ್ತಾರೆ.

ಸ್ಮಾರ್ಟ್‌ ಕಾರ್ಡ್‌ ಇದ್ದರೆ ಮಾತ್ರ:ಸ್ಮಾರ್ಟ್ ಕಾರ್ಡ್ ಇದ್ದವರಿಗೆ ಮಾತ್ರ ಮೆಟ್ರೊ ರೈಲಿನಲ್ಲಿ ಸಂಚರಿಸಲು ಅವಕಾಶ ಸಿಗಲಿದೆ. ಆನ್‌ಲೈನ್‌ ಅಥವಾ ಪೇಟಿಎಂ ಮೂಲಕ ಮಾತ್ರ ಸ್ಮಾರ್ಟ್ ಕಾರ್ಡ್ ರಿಚಾರ್ಜ್ ಮಾಡಿಸಿಕೊಳ್ಳಬಹುದು ಎಂದು ನಿಗಮದ ಅಧಿಕಾರಿಗಳು ಮಾಹಿತಿ ನೀಡಿದರು.

350 ಜನರಿಗೆ ಮಾತ್ರ ಅವಕಾಶ:ಈ ಹಿಂದೆ ಮೆಟ್ರೊ ರೈಲಿನಲ್ಲಿ ಒಮ್ಮೆಗೆ ಸಾವಿರಕ್ಕೂ ಹೆಚ್ಚು ಜನ ಪ್ರಯಾಣಿಸುತ್ತಿದ್ದರು. ಈಗಒಂದು ರೈಲಿನಲ್ಲಿ ಒಮ್ಮೆಗೆ ಗರಿಷ್ಠ 350 ಜನರಿಗೆ ಮಾತ್ರ ಸಂಚಾರಕ್ಕೆ ಅವಕಾಶ ನೀಡಲಾಗುತ್ತದೆ.

ಪ್ರತಿ ನಿಲ್ದಾಣದಲ್ಲಿ ಇಳಿಯುವ ಮತ್ತು ಹತ್ತುವ ಪ್ರಯಾಣಿಕರ ವಿವರ ನಿಯಂತ್ರಣ ಕೊಠಡಿಗೆ ರವಾನೆಯಾಗಲಿದೆ. ಎಷ್ಟು ಪ್ರಯಾಣಿಕರು ಇಳಿಯುತ್ತಾರೋ, ಅಷ್ಟು ಜನ ಮಾತ್ರ ರೈಲು ಏರಬಹುದು ಎಂದು ಅಧಿಕಾರಿಗಳು ಹೇಳುತ್ತಾರೆ.

ಅಂತರ– ನಿಯಮ ಪಾಲನೆ:ರೈಲಿನಲ್ಲಿ ಆಸನಗಳಲ್ಲಿ ಹಾಗೂ ಇತರ ಖಾಳಿ ಜಾಗದಲ್ಲಿ ಗುರುತು ಹಾಕಲಾಗಿರುತ್ತದೆ. ಅಲ್ಲಿ ಮಾತ್ರ ನಿಲ್ಲಬೇಕು ಅಥವಾ ಕುಳಿತುಕೊಳ್ಳಬೇಕು. ಅದೇ ರೀತಿ, ಮೆಟ್ರೊ ನಿಲ್ದಾಣದ ಒಂದು ಪ್ರವೇಶ ಮತ್ತು ಒಂದು ನಿರ್ಗಮನ ದ್ವಾರ ಮಾತ್ರ ಪ್ರಯಾಣಿಕರಿಗೆ ಮುಕ್ತವಾಗಿರಲಿದೆ.

ಎರಡೂ ದ್ವಾರಗಳಲ್ಲಿ ಸ್ಯಾನಿಟೈಸರ್ ಮತ್ತು ದೇಹದ ಉಷ್ಣಾಂಶ ಪರೀಕ್ಷಿಸುವ (ಥರ್ಮಲ್‌ ಸ್ಕ್ರೀನಿಂಗ್) ಯಂತ್ರ ಇರಲಿದೆ. ಪ್ರಯಾಣಿಕರ ದೇಹದ ಉಷ್ಣಾಂಶ 38 ಡಿಗ್ರಿ ಸೆಲ್ಸಿಯಸ್‌ ಅಥವಾ ಅದಕ್ಕಿಂತ ಹೆಚ್ಚಿದ್ದರೆ, ಪ್ರವೇಶ ನಿರ್ಬಂಧಿಸಲಾಗುವುದು. ಅಷ್ಟೇ ಅಲ್ಲ, ಆ ವ್ಯಕ್ತಿ ಬಗ್ಗೆ ಆರೋಗ್ಯ ಇಲಾಖೆಗೆ ಮಾಹಿತಿ ನೀಡಲಾಗುವುದು.

ನೇರಳೆ ಮಾರ್ಗದಲ್ಲಿ ಬೆಳಿಗ್ಗೆ ಮತ್ತು ಸಂಜೆ ವೇಳೆ ಪ್ರತಿ 5 ನಿಮಿಷಗಳ ಅಂತರ ಹಾಗೂ ಹಸಿರು ಮಾರ್ಗದಲ್ಲಿ ಪ್ರತಿ 8ರಿಂದ 10 ನಿಮಿಷಗಳ ಅಂತರದಲ್ಲಿ ಮತ್ತು ಉಳಿದ ಸಮಯದಲ್ಲಿ 10 ನಿಮಿಷಗಳಿಂದ 15 ನಿಮಿಷಗಳ ಅಂತರದಲ್ಲಿ ಮೆಟ್ರೊ ಸೇವೆ ಇರಲಿದೆ ಎಂದು ಅಧಿಕಾರಿಗಳು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT