ಶುಕ್ರವಾರ, 22 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆ.ಆರ್ ಪುರ–ಬೈಯಪ್ಪನಹಳ್ಳಿ ಮಾರ್ಗದಲ್ಲಿ ಮೆಟ್ರೊ ಪ್ರಾಯೋಗಿಕ ಸಂಚಾರ

Published 27 ಜುಲೈ 2023, 0:24 IST
Last Updated 27 ಜುಲೈ 2023, 0:24 IST
ಅಕ್ಷರ ಗಾತ್ರ

ಬೆಂಗಳೂರು: ಕೆ.ಆರ್‌.ಪುರ–ಬೈಯಪ್ಪನಹಳ್ಳಿ ನಡುವಿನ ಕಾಮಗಾರಿಗಳನ್ನು ಪೂರ್ಣಗೊಳಿಸಿರುವ ಬಿಎಂಆರ್‌ಸಿಎಲ್‌ ಬುಧವಾರ ಪ್ರಾಯೋಗಿಕವಾಗಿ ಮೆಟ್ರೊ ರೈಲು ಸಂಚಾರ ಆರಂಭಿಸಿದೆ.

ಕೆ.ಆರ್‌.ಪುರ ಮೆಟ್ರೊ ನಿಲ್ದಾಣದಿಂದ ಬುಧವಾರ ಸಂಜೆ 6 ಗಂಟೆ 4 ನಿಮಿಷಕ್ಕೆ ಪ್ರಾಯೋಗಿಕ ಸಂಚಾರ ಆರಂಭವಾಯಿತು. ಮೆಟ್ರೊ ರೈಲಿನಲ್ಲಿ ಬಿಎಂಆರ್‌ಸಿಎಲ್‌ ತಾಂತ್ರಿಕ ತಂಡವು ಸಂಚರಿಸಿ ಪರಿಶೀಲಿಸಿತು. ಬೈಯಪ್ಪನಹಳ್ಳಿವರೆಗೆ ತೆರಳಿ ಕೆ.ಆರ್‌. ಪುರ ಮೆಟ್ರೊ ನಿಲ್ದಾಣಕ್ಕೆ ವಾಪಸ್ಸಾಯಿತು. ಸುಮಾರು ಮುಕ್ಕಾಲು ಗಂಟೆಗಳ ಕಾಲ ಪರಿಶೀಲನೆ ನಡೆಯಿತು.

ನೇರಳೆ ಮಾರ್ಗದಲ್ಲಿನ ವಿಸ್ತರಿತ ಕಾಮಗಾರಿ ಇದಾಗಿದ್ದು, ಬೈಯಪ್ಪನಹಳ್ಳಿ–ಕೆ.ಆರ್‌. ಪುರ ನಡುವೆ 2.5 ಕಿಲೋಮೀಟರ್‌ ಹಾಗೂ ಕೆಂಗೇರಿ–ಚಲ್ಲಘಟ್ಟದ ನಡುವೆ 1.9 ಕಿ.ಮೀ ಕಾಮಗಾರಿ ಬಾಕಿ ಉಳಿದಿತ್ತು. ಎರಡೂ ಕಡೆಗಳಲ್ಲಿ ಕಾಮಗಾರಿ ಮುಗಿದಿದೆ. ಬೈಯಪ್ಪನಹಳ್ಳಿ–ಕೆ.ಆರ್‌. ಪುರ ನಡುವೆ ಪ್ರಾಯೋಗಿಕ ಸಂಚಾರ ಆರಂಭವಾಗಿದೆ. ಕೆಲವು ದಿನಗಳ ಕಾಲ ಪ್ರಾಯೋಗಿಕ ಸಂಚಾರ ನಡೆಸಿ, ಎಲ್ಲ ತಾಂತ್ರಿಕ ತೊಂದರೆಗಳು ಬಗೆಹರಿದ ಬಳಿಕ ವಾಣಿಜ್ಯ ಸಂಚಾರ ಆರಂಭಗೊಳ್ಳಲಿದೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ತಿಳಿಸಿದ್ದಾರೆ.

ಕೆ.ಆರ್‌.ಪುರ–ವೈಟ್‌ಫೀಲ್ಡ್‌ (13.71 ಕಿ.ಮೀ) ನಡುವೆ ಮೆಟ್ರೊ ವಾಣಿಜ್ಯ ಸಂಚಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಮಾರ್ಚ್‌ ತಿಂಗಳಲ್ಲೇ ಚಾಲನೆ ನೀಡಿದ್ದರು. ಬೈಯಪ್ಪನಹಳ್ಳಿ– ಕೆ.ಆರ್‌.ಪುರದ ನಡುವೆ ಮೆಟ್ರೊ ಸಂಚರಿಸದ ಕಾರಣದಿಂದ ಪ್ರಯಾಣಿಕರು ತೊಂದರೆಗೆ ಸಿಲುಕಿದ್ದರು. ಬೈಯಪ್ಪನಹಳ್ಳಿಗೆ ಬಂದವರು ವೈಟ್‌ಫೀಲ್ಡ್‌ನತ್ತ ತೆರಳಲು ಆಟೊ, ಕ್ಯಾಬ್‌, ಬಿಎಂಟಿಸಿ ಬಸ್‌ ಅವಲಂಬಿಸಬೇಕಿತ್ತು. ವಾಣಿಜ್ಯ ಸಂಚಾರ ಆರಂಭಗೊಂಡರೆ ಈ ಸಮಸ್ಯೆ ಕೊನೆಗೊಳ್ಳಲಿದೆ. ವೈಟ್‌ಫೀಲ್ಡ್‌ ಸುತ್ತಮುತ್ತ ಸಂಚಾರ ದಟ್ಟಣೆ ಕಡಿಮೆಯಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT