ಬೆಂಗಳೂರು: ಮಹಾತ್ಮ ಗಾಂಧಿ ರಸ್ತೆಯಲ್ಲಿ ಬ್ಲ್ಯಾಕ್ ಟಾಪಿಂಗ್ ಕಾಮಗಾರಿ ಬುಧವಾರ ಆರಂಭವಾಗಿದ್ದು, ರಾತ್ರಿ ವೇಳೆಯಲ್ಲಿ ಮಾತ್ರ ಕೆಲಸ ನಡೆಯಲಿದೆ.

ವೈಟ್ ಟಾಪಿಂಗ್ ನಡೆಸಲು ಈ ಹಿಂದೆ ಯೋಜಿಸಲಾಗಿತ್ತು. 45 ದಿನ ವಾಹನ ಸಂಚಾರವನ್ನು ಬದಲಾಯಿಸಲು ನಗರ ಸಂಚಾರ ಪೊಲೀಸರು ಸಮ್ಮತಿ ನೀಡಿರಲಿಲ್ಲ. ಹೀಗಾಗಿ, ಬ್ಲ್ಯಾಕ್ ಟಾಪಿಂಗ್ ಕಾಮಗಾರಿಗೆ ಕೇಂದ್ರ ನಗರ ಪಾಲಿಕೆ ಸಜ್ಜಾಗಿದೆ. ಮುಖ್ಯಮಂತ್ರಿಯವರ ವಿಶೇಷ ಅನುದಾನದಲ್ಲಿ ಮಹಾತ್ಮ ಗಾಂಧಿ ರಸ್ತೆಯಲ್ಲಿ ಬ್ಲ್ಯಾಕ್ ಟಾಪಿಂಗ್ ಮುಂದಿನ 15 ರಾತ್ರಿ ನಡೆಯಲಿದೆ.

‘ಮಹಾತ್ಮ ಗಾಂಧಿ ರಸ್ತೆಯ ಅನಿಲ್ ಕುಂಬ್ಳೆ ವೃತ್ತದಿಂದ ಟ್ರಿನಿಟಿ ವೃತ್ತದವರೆಗಿನ 2.2 ಕಿ.ಮೀ. ಉದ್ದದ ರಸ್ತೆಯನ್ನು ಬ್ಲ್ಯಾಕ್ ಟಾಪಿಂಗ್ ಮಾಡಲಾಗುತ್ತದೆ. ಒಂದೇ ಬಾರಿ ಕಾಮಗಾರಿಯನ್ನು ನಡೆಸಲು ಸಾಧ್ಯವಿಲ್ಲ. ಹಂತ ಹಂತವಾಗಿ, ಒಂದು ಭಾಗವನ್ನು ಆರಿಸಿಕೊಂಡು ಅದನ್ನು ‘ಮಿಲ್ಲಿಂಗ್’ ಮಾಡಿ, ನಂತರ ಡಾಂಬರ್ ಹಾಕಲಾಗುತ್ತದೆ’ ಎಂದು ಕೇಂದ್ರ ನಗರ ಪಾಲಿಕೆಯ ಕಾರ್ಯಪಾಲಕ ಎಂಜಿನಿಯರ್ ಆಸಿಫ್ ತಿಳಿಸಿದರು.

‘ವಾಹನ ಸಂಚಾರಕ್ಕೆ ಯಾವುದೇ ರೀತಿಯಲ್ಲಿ ತೊಂದರೆಯಾಗುವುದಿಲ್ಲ. ರಸ್ತೆ ಕಾಮಗಾರಿಯನ್ನು ರಾತ್ರಿ ವೇಳೆ ಮಾತ್ರ ಮಾಡಲಾಗುತ್ತದೆ. ಸಂಚಾರ ಪೊಲೀಸರು, ರಾತ್ರಿ 10ರಿಂದ ಬೆಳಗಿನ ಜಾವದವರೆಗೆ ಕಾಮಗಾರಿ ನಡೆಸಲು ಅನುಮತಿ ನೀಡಿದ್ದಾರೆ. ಆದಷ್ಟು ಶೀಘ್ರವೇ ಬ್ಲ್ಯಾಕ್ ಟಾಪಿಂಗ್ ಕಾಮಗಾರಿಯನ್ನು ಮುಗಿಸಲಾಗುತ್ತದೆ’ ಎಂದು ಹೇಳಿದರು.

ಕೇಂದ್ರ ನಗರ ಪಾಲಿಕೆ ಆಯುಕ್ತ ರಾಜೇಂದ್ರ ಚೋಳನ್ ಅವರು ಪರಿಶೀಲನೆ ಸಂದರ್ಭದಲ್ಲಿ ‘ಮುಖ್ಯಮಂತ್ರಿಯವರ ಅನುದಾನದಲ್ಲಿ ಎಂ.ಜಿ. ರಸ್ತೆ ಸೇರಿದಂತೆ ಎಲ್ಲ ಪ್ರಮುಖ ರಸ್ತೆಗಳನ್ನೂ ಅಭಿವೃದ್ಧಿಗೊಳಿಸಿ, ಗುಂಡಿಮುಕ್ತಗೊಳಿಸಬೇಕು’ ಎಂದು ಸೂಚಿಸಿದ್ದರು. ಅದರಂತೆ ಎಂ.ಜಿ. ರಸ್ತೆಯಲ್ಲಿ ಕಾಮಗಾರಿ ಆರಂಭವಾಗಿದೆ.

ಒಳಚರಂಡಿ ವ್ಯವಸ್ಥೆ ಬದಲಿಲ್ಲ: ಎಂ.ಜಿ. ರಸ್ತೆಯಲ್ಲಿ ಸುಮಾರು 40 ವರ್ಷಗಳ ಹಿಂದೆ ಅಳವಡಿಸಲಾಗಿರುವ ಒಳಚರಂಡಿ ಮಾರ್ಗವನ್ನು ಬೆಂಗಳೂರು ಜಲಮಂಡಳಿ ಬದಲಾಯಿಸದಿರಲು ನಿರ್ಧರಿಸಿದೆ.

‘ವೈಟ್ ಟಾಪಿಂಗ್ ಕಾಮಗಾರಿ ಮಾಡುವ ಯೋಜನೆ ಇದ್ದಾಗ, ‘ಯುಟಿಲಿಟಿ ಸೌಲಭ್ಯಗಳನ್ನು’ ಪ್ರತ್ಯೇಕಗೊಳಿಸುವುದು ಅಗತ್ಯವಾಗಿತ್ತು. ಆದರೆ, ಈ ಯೋಜನೆಯನ್ನು ಕೈಬಿಡಲಾಗಿದೆ. ಎಂ.ಜಿ. ರಸ್ತೆಯ ಒಂದರೆಡು ಭಾಗಗಳಲ್ಲಿ ಪೈಪ್ ಸೋರಿಕೆ ಸಮಸ್ಯೆ ಇತ್ತು. ಅದನ್ನು ಸರಿಪಡಿಸಲಾಗಿದ್ದು, ಪಾಲಿಕೆಯವರು ಬ್ಲ್ಯಾಕ್ ಟಾಪಿಂಗ್ ಕಾಮಗಾರಿ ನಡೆಸಬಹುದು’ ಎಂದು ಜಲಮಂಡಳಿಯ ಎಂಜಿನಿಯರ್ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.