ಬೆಂಗಳೂರು: ‘ನರೇಗಾ ಯೋಜನೆಯನ್ನು ವಿಬಿ ಜಿ ರಾಮ್ ಜಿ ಹೆಸರಿನಲ್ಲಿ ಬದಲಾವಣೆ ಮಾಡಿ ಯೋಜನೆ ಸ್ಥಗಿತಗೊಳಿಸುವ ಉದ್ದೇಶವಿದೆ. ಇದರಿಂದ ಸಾಮಾಜಿಕ, ಆರ್ಥಿಕ ಭದ್ರತೆಗೆ ಹೊಡೆತ ಬೀಳಲಿದೆ’ ಎಂದು ಆರ್ಥಿಕ ತಜ್ಞ ಜಾನ್ ಡ್ರೀಝ್ ಹೇಳಿದರು.

ಮನರೇಗಾ ರಕ್ಷಣಾ ಒಕ್ಕೂಟ ಗಾಂಧಿ ಭವದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮನರೇಗಾ ವರ್ಸಸ್ ವಿಬಿ ರಾಮ್ಜಿ ಕಟು ವಾಸ್ತವಗಳು’ ಸಂವಾದದಲ್ಲಿ ಅವರು ಮಾತನಾಡಿದರು.

‘ಕೇಂದ್ರ ಸರ್ಕಾರವು ಉದ್ಯೋಗ ಖಾತ್ರಿ ಯೋಜನೆಯನ್ನು ಈಗಿನ ಸ್ವರೂಪಕ್ಕೆ ತಕ್ಕುನಾಗಿ ಬದಲಾವಣೆ ಮಾಡಿ ಸಶಕ್ತಗೊಳಿಸುತ್ತಿರುವುದಾಗಿ ಹೇಳುತ್ತಿದೆಯಷ್ಟೇ. ನಿಧಾನವಾಗಿ ಯೋಜನೆ ನಿಲ್ಲಲಿದೆ. ಈ ಸರ್ಕಾರ ಉದ್ಯಮಿಗಳ ಪರವಾಗಿದೆ ’ ಎಂದು ಟೀಕಿಸಿದರು.

‘ಈ ಯೋಜನೆಗೆ ₹95 ಸಾವಿರ ಕೋಟಿ ಆರ್ಥಿಕ ನೆರವು ನೀಡುವುದಾಗಿ ಹೇಳಿದೆ. ರಾಜ್ಯ ಸರ್ಕಾರಗಳು ಶೇ 40ರ ಅನುಪಾತದಂತೆ ಅನುದಾನ ನೀಡಿದರೆ ಹೆಚ್ಚಿನ ಆರ್ಥಿಕ ಬಲ ಸಿಗಲಿದೆ. ಅನುದಾನ ಬಿಡುಗಡೆ, ಬಳಕೆ ಮೇಲೆ ಈ ವರ್ಷದಲ್ಲಿ ಬದಲಾವಣೆಯ ಚಿತ್ರಣ ಸಿಗಲಿದೆ. ಮೂರ್ನಾಲ್ಕು ವರ್ಷದಲ್ಲಿ ನಿಖರವಾಗಿ ತಿಳಿಯಲಿದೆ’ ಎಂದು ಹೇಳಿದರು.

ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್.ಪಾಟೀಲ ಮಾತನಾಡಿ, ‘ನರೇಗಾ ಯೋಜನೆ ಬದಲಾವಣೆ ಸ್ವರೂಪವನ್ನು ಪ್ರಕಟಿಸಿರುವ ಕೇಂದ್ರ ಸರ್ಕಾರ ನಿಯಮಾವಳಿಗಳನ್ನು ರೂಪಿಸಬೇಕಿದೆ. ಇವುಗಳು ಬಂದ ನಂತರ ಬದಲಾವಣೆ ಸ್ವರೂಪ ಹೇಗಿರಲಿದೆ. ಏನು ಪರಿಣಾಮ ಆಗಬಹುದು ಎನ್ನುವುದು ತಿಳಿಯಬಹುದು. ಯೋಜನೆ ಕುರಿತಾಗಿ ವ್ಯಾಪಕ ಚರ್ಚೆಯೂ ಆಗಬೇಕು’ ಎಂದು ತಿಳಿಸಿದರು.

‘ಈಗಾಗಲೇ ರಾಜ್ಯ ಸರ್ಕಾರವು ವಿಬಿ ಜಿ ರಾಮ್ ಜಿ ಯೋಜನೆಗೆ ವಿರೋಧ ವ್ಯಕ್ತಪಡಿಸಿ ಹಿಂದಿನ ಯೋಜನೆಯನ್ನೇ ಮುಂದುವರೆಸುವಂತೆ ಆಗ್ರಹಿಸಿದೆ. ಈ ಹೋರಾಟ ಇನ್ನಷ್ಟು ಕೆಳ ಹಂತಕ್ಕೂ ತಲುಪಿ ಜನ ಸಾಮಾನ್ಯರಿಗೆ ಹುನ್ನಾರ ತಿಳಿಯಬೇಕು. ಕೇಂದ್ರ ಸರ್ಕಾರ ಒಕ್ಕೂಟ ವ್ಯವಸ್ಥೆ ಹಾಳು ಮಾಡಿ ರಾಜ್ಯಗಳನ್ನು ಗುಲಾಮರನ್ನಾಗಿಸುವ ಪ್ರಯತ್ನ ಮಾಡಿದೆ. ಕಾಯಕಕ್ಕೆ ಒತ್ತು ನೀಡುತ್ತಿದ್ದ ಯೋಜನೆಗೆ ಕರ್ಮ ಸಿದ್ದಾಂತ, ರಾಮನ ಹೆಸರು ನೀಡಿ ಸರ್ಕಾರ ಧರ್ಮದ ರೂಪ ನೀಡುತ್ತಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.