ಭಾನುವಾರ, ಜೂಲೈ 5, 2020
28 °C

ಹಾಲಿನ ಹಣ ಕೇಳಿದ್ದಕ್ಕೆ ಸಿ.ಎಂ. ಹೆಸರಿನಲ್ಲಿ ಬೆದರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಹಾಲು ಮಾರಾಟ ಮಳಿಗೆ ಯುವತಿ ಜೊತೆ ಅನುಚಿತವಾಗಿ ವರ್ತಿಸಿ, ಮುಖ್ಯಮಂತ್ರಿ ಹೆಸರಿನಲ್ಲಿ ಬೆದರಿಕೆ ಹಾಕಿದ ಆರೋಪದಡಿ ಅಶೋಕ ಶೆಟ್ಟಿ ಎಂಬುವರ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ.

‘ಘಟನೆ ಬಗ್ಗೆ ಯುವತಿ ಪೋಷಕರು ದೂರು ನೀಡಿದ್ದಾರೆ. ಲೈಂಗಿಕ ದೌರ್ಜನ್ಯ ಹಾಗೂ ಬೆದರಿಕೆ ಆರೋಪದಡಿ ತಲಕಾವೇರಿ ಲೇಔಟ್ ನಿವಾಸಿಯಾದ ಅಶೋಕ ಶೆಟ್ಟಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಅಮೃತಹಳ್ಳಿ ಪೊಲೀಸರು ಹೇಳಿದರು.

‘ಯುವತಿ ಪೋಷಕರು ಹಾಲು ಮಾರಾಟ ಮಳಿಗೆ ಇಟ್ಟುಕೊಂಡಿದ್ದಾರೆ. ಇದೇ 21ರಂದು ಬೆಳಿಗ್ಗೆ ಮಳಿಗೆಗೆ ಹೋಗಿದ್ದ ಅಶೋಕ ಹಾಲು ಖರೀದಿಸಿದ್ದ. ಹಣ ಕೇಳಿದ್ದಕ್ಕಾಗಿ ಯುವತಿ ಕೈ ಹಿಡಿದು ಅನುಚಿತವಾಗಿ ವರ್ತಿಸಿದ್ದ. ‘ನಾನು ಮುಖ್ಯಮಂತ್ರಿ ಕುಲ ಬಾಂಧವ. ಹಣ ಕೇಳಿದರೆ ಜೈಲಿಗೆ ಹಾಕಿಸುತ್ತೇನೆ’ ಎಂದೂ ಬೆದರಿಕೆ ಹಾಕಿದ್ದ’ ಎಂದು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.