ಶನಿವಾರ, ಫೆಬ್ರವರಿ 29, 2020
19 °C

ಗಣಿಗಾರಿಕೆ ನಿಷೇಧ: ಸಿಗದ ಪರ್ಯಾಯ ಉದ್ಯೋಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕರ್ನಾಟಕದಲ್ಲಿ ಗಣಿಗಾರಿಕೆ ನಿಷೇಧದಿಂದ ನಿರುದ್ಯೋಗಿಗಳಾಗಿರುವ ಶೇ 85ರಷ್ಟು ಜನ ಪರ್ಯಾಯ ಆದಾಯದ ಮೂಲವಿಲ್ಲದೆ ಸಮಸ್ಯೆಗೆ ಸಿಲುಕಿದ್ದು, ಅವರಲ್ಲಿ ಶೇ 77ರಷ್ಟು ಜನ ಜೀವನ ನಿರ್ವಹಣೆಗೂ ಪರದಾಡುವ ಸ್ಥಿತಿ ಎದುರಾಗಿರುವುದನ್ನು ಸಮೀಕ್ಷೆಯೊಂದು ಬಹಿರಂಗಪಡಿಸಿದೆ.

ಅಕ್ರಮದ ಕಾರಣದಿಂದ ಬಳ್ಳಾರಿ, ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಕಬ್ಬಿಣದ ಅದಿರಿನ ಗಣಿಗಾರಿಕೆಯ ಮೇಲೆ 2010ರಲ್ಲಿ ನಿಷೇಧ ಹೇರಲಾಯಿತು. ಆನಂತರ ಕೆಲಸ ಕಳೆದುಕೊಂಡವರಲ್ಲಿ ಶೇ 58ರಷ್ಟು ಜನರಿಗೆ ಈವರೆಗೆ ಬೇರೆ ಉದ್ಯೋಗಾವಕಾಶ ದೊರೆತಿಲ್ಲ. ಅಂಥವರಲ್ಲಿ ಬಹಳಷ್ಟು ಜನ ತೀವ್ರ ಮಾನಸಿಕ ಒತ್ತಡ, ಮಾನಸಿಕ ಅಸ್ವಸ್ಥತೆಗೆ ಒಳಗಾಗಿದ್ದು, ನಿರುದ್ಯೋಗವು ಕೌಟುಂಬಿಕ ಹಿಂಸೆಯ ಹೆಚ್ಚಳಕ್ಕೂ ಕಾರಣವಾಗಿದೆ ಎಂದು ಹೇಳಿದೆ.

ವಿವಿಧ ರೀತಿಯ ಗಣಿಗಾರಿಕೆಯ ಮೇಲೆ ನಿಷೇಧ ಹೇರಲಾದ ಕರ್ನಾಟಕ, ಗೋವಾ, ಜಾರ್ಖಂಡ್‌, ಒಡಿಶಾ ಮತ್ತು ಛತ್ತೀಸ್‌ಗಡಗಳ 2,500 ಜನರನ್ನು ಸಮೀಕ್ಷೆಗೆ ಒಳಪಡಿಸಿರುವ ‘ಸಮಗ್ರ ಅಭಿವೃದ್ಧಿ ಮತ್ತು ಸಂಶೋಧನಾ ವೇದಿಕೆ’ (ಎಫ್‌ಐಡಿಆರ್)ಯು ಈ ಅಂಶವನ್ನು ಬೆಳಕಿಗೆ ತಂದಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು