ಬುಧವಾರ, ಆಗಸ್ಟ್ 21, 2019
27 °C

ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ

Published:
Updated:

ಬೆಂಗಳೂರು: ನಗರದ ಹದಿನಾರು ವರ್ಷದ ಬಾಲಕಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಎನ್ನಲಾದ ಲಕ್ಷ್ಮಣ ಎಂಬಾತ, ಆಕೆ ಗರ್ಭಿಣಿಯಾಗುವಂತೆ ಮಾಡಿ ಪರಾರಿಯಾಗಿದ್ದಾನೆ.

‘ಸ್ಥಳೀಯ ನಿವಾಸಿ ಲಕ್ಷ್ಮಣ ಎಂಬಾತ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ
ದ್ದಾನೆ. ಆತನನ್ನು ಬಂಧಿಸಿ ಕಠಿಣ ಕ್ರಮ ಜರುಗಿಸಿ’ ಎಂದು ಸಂತ್ರಸ್ತೆ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.

ಪೊಲೀಸರು, ‘ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ (ಪೋಕ್ಸೊ) ಕಾಯ್ದೆ ಅಡಿ ಲಕ್ಷ್ಮಣ ವಿರುದ್ಧ ಎಫ್‌ಐಆರ್‌ ದಾಖಲಿಸಿಕೊಳ್ಳಲಾಗಿದೆ. ಐದು ತಿಂಗಳಿನಿಂದಲೇ ಆತ ತಲೆಮರೆಸಿಕೊಂಡಿದ್ದು, ಪತ್ತೆ ಮಾಡುತ್ತಿದ್ದೇವೆ’ ಎಂದರು.

ಪ್ರಕರಣದ ವಿವರ: ‘10ನೇ ತರಗತಿಯಲ್ಲಿ ಅನುತ್ತೀರ್ಣ ಆದ ನಂತರ ಮಗಳು, ಮನೆ
ಯಲ್ಲೇ ಇರುತ್ತಿದ್ದಳು. ಟಿ.ವಿ ನೋಡಲು ಆಗಾಗ ಪಕ್ಕದ ಮನೆಗೆ ಹೋಗಿ ಬರುತ್ತಿದ್ದಳು. ಅದೇ ಮನೆಯಲ್ಲೇ ಆರೋಪಿ ಲಕ್ಷ್ಮಣನ ಪರಿಚಯ
ವಾಗಿತ್ತು’ ಎಂದು ಪೋಷಕರು ದೂರಿನಲ್ಲಿ ತಿಳಿಸಿದ್ದಾರೆ.

‘ಅಡುಗೆ ಕೆಲಸ ಮಾಡುತ್ತಿದ್ದ ಲಕ್ಷ್ಮಣ, ಮಗಳನ್ನು ಪುಸಲಾಯಿಸಿ ಹಲವು ಬಾರಿ ತನ್ನ ಮನೆಗೆ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಇದೇ 10ರಂದು ಮಗಳ ಆರೋಗ್ಯದಲ್ಲಿ ಏರುಪೇರು ಕಂಡುಬಂದಿದ್ದರಿಂದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ತಪಾಸಣೆ ನಡೆಸಿದ ವೈದ್ಯರು, ‘ಬಾಲಕಿ 8 ತಿಂಗಳ ಗರ್ಭಿಣಿ’ ಎಂದು ಹೇಳಿದರು. ಆಘಾತ
ವಾಗಿ ಮಗಳನ್ನು ವಿಚಾರಿಸಿದಾಗಲೇ ಲೈಂಗಿಕ ದೌರ್ಜನ್ಯದ ಸಂಗತಿ ಬಾಯ್ಬಿಟ್ಟಳು’ ಎಂದು ಪೋಷಕರು ದೂರಿನಲ್ಲಿ ಉಲ್ಲೇಖಿಸಿದ್ದಾರೆ. 

Post Comments (+)