ಬಿಬಿಎಂಪಿ ವಿಶೇಷ ಆಯುಕ್ತ ಎಂ.ಕೆ ಮೀನಾ

7

ಬಿಬಿಎಂಪಿ ವಿಶೇಷ ಆಯುಕ್ತ ಎಂ.ಕೆ ಮೀನಾ

Published:
Updated:

ಬೆಂಗಳೂರು: ಐಎಎಸ್‌ ಅಧಿಕಾರಿ ಮನೋಜ್‌ಕುಮಾರ್‌ ಮೀನಾ ಅವರನ್ನು ಬಿಬಿಎಂಪಿ ವಿಶೇಷ ಆಯುಕ್ತರು(ಯೋಜನೆಗಳು) ಹುದ್ದೆಗೆ ಹೆಚ್ಚುವರಿ ಪ್ರಭಾರದಲ್ಲಿ ನೇಮಿಸಲಾಗಿದೆ.

ಜಿ.ಸತ್ಯವತಿ ಅವರನ್ನು ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನದ ನಿರ್ದೇಶಕ ಮತ್ತು ಉದ್ಯಮಶೀಲತೆ ಮತ್ತು ಜೀವನೋಪಾಯ ಆಯುಕ್ತರ ಹುದ್ದೆಗೆ ಹೆಚ್ಚುವರಿ ಪ್ರಭಾರದಲ್ಲಿ ನೇಮಿಸಲಾಗಿದೆ.

ಡಿ.ರಣದೀಪ್‌ ಅವರನ್ನು ಬಿಬಿಎಂಪಿ ವಿಶೇಷ ಆಯುಕ್ತರು(ಘನ ತ್ಯಾಜ್ಯ ನಿರ್ವಹಣೆ) ಹುದ್ದೆಗೆ ಹೆಚ್ಚುವರಿ ಪ್ರಭಾರದಲ್ಲಿ ನೇಮಿಸಲಾಗಿದೆ.

ವರ್ಗಾವಣೆ: ವಿ.ನಾಗೇಶ್ವರ ರಾವ್‌– ಕಂದಾಯ ಇಲಾಖೆ ಅಧೀನ ಕಾರ್ಯದರ್ಶಿ, ವಿಜಯಕುಮಾರ್‌– ಶಿಕ್ಷಣ ಇಲಾಖೆ ಅಧೀನ ಕಾರ್ಯದರ್ಶಿ, ಟಿ.ನಾರಾಯಣಪ್ಪ– ಆರ್ಥಿಕ ಇಲಾಖೆ ಅಧೀನ ಕಾರ್ಯದರ್ಶಿ, ಮನೋರಮ–ಉನ್ನತ ಶಿಕ್ಷಣ ಇಲಾಖೆ(ತಾಂತ್ರಿಕ ಶಿಕ್ಷಣ) ಅಧೀನ ಕಾರ್ಯದರ್ಶಿ, ವೆಂಕಟೇಶ್‌ ಎಸ್‌– ವಸತಿ ಇಲಾಖೆ ಅಧೀನ ಕಾರ್ಯದರ್ಶಿ, ರಾಜಣ್ಣ ಎಂ– ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿ, ಶಿವಶಂಕರ್‌ ನಾಯಕ್‌ ಎಲ್‌– ಕೆಯುಐಡಿಎಫ್‌ಸಿ, ಯೋಜನಾ ನಿರ್ದೇಶಕರು ದಾವಣಗೆರೆ, ಶಿವಕುಮಾರಸ್ವಾಮಿ– ಸಚಿವಾಲಯ ತರಬೇತಿ ಸಂಸ್ಥೆ ಉಪ ನಿರ್ದೇಶಕರು, ಜಯಲಕ್ಷ್ಮೀ– ಯೋಜನಾ ಇಲಾಖೆ ಅಧೀನ ಕಾರ್ಯದರ್ಶಿ, ಕೆ.ಎಸ್‌.ಲೀಲಾವತಿ ಅವರನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಮರಳಿ ವರ್ಗಾವಣೆ ಮಾಡಲಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !