ಮಂಗಳವಾರ, ನವೆಂಬರ್ 12, 2019
28 °C
ಚುನಾವಣೆಗೆ ಐಎಂಎ, ಇಂಜಾಜ್‌ ಹಣ ಬಳಸಿಲ್ಲವೇ?

ಐಎಂಎ ಪ್ರಕರಣ: ಅರ್ಷದ್‌ಗೆ ರುಮಾನ್‌ ಬೇಗ್‌ ತಿರುಗೇಟು

Published:
Updated:

ಬೆಂಗಳೂರು: ಐಎಂಎ ಪ್ರಕರಣದ ಆರೋಪಿ ರೋಷನ್‌ ಬೇಗ್‌ ಅವರಿಗೆ ರಕ್ಷಣೆ ನೀಡುವಂತೆ ಎಸ್‌ಐಟಿ ಮುಖ್ಯಸ್ಥರಿಗೆ ಪತ್ರ ಬರೆದು ಸಂವಿಧಾನದ ಘನತೆಗೆ ಧಕ್ಕೆ ಮಾಡಿರುವ ರಾಜ್ಯಪಾಲ ವಜುಭಾಯಿ ವಾಲಾ ರಾಜೀನಾಮೆ ನೀಡಬೇಕೆಂದು ಟ್ವೀಟ್‌ ಮಾಡಿರುವ ವಿಧಾನ ಪರಿಷತ್‌ ಸದಸ್ಯ ರಿಜ್ವಾನ್‌ ಅರ್ಷದ್‌ ಅವರಿಗೆ ಬೇಗ್‌ ಅವರ ಪುತ್ರ ರುಮಾನ್‌ ಬೇಗ್‌ ಟ್ವೀಟ್‌ ಮೂಲಕವೇ ತಿರುಗೇಟು ನೀಡಿದ್ದಾರೆ.

‘ಕೆಲವು ಚುನಾವಣೆಗಳಲ್ಲಿ ಸೋತ ಬಳಿಕ ಈ ವಿಧಾನಪರಿಷತ್‌ ಸದಸ್ಯ ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ. ಇದಕ್ಕಾಗಿ ಐಎಂಎಯಿಂದ ವಂಚನೆಗೊಳಗಾದ ಜನರ ಭಾವನೆಗಳನ್ನು ಬಳಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ’ ಎಂದು ರುಮಾನ್‌ ಬೇಗ್‌ ದೂರಿದ್ದಾರೆ.

‘ಈ ವ್ಯಕ್ತಿ ಚುನಾವಣೆ ಪ್ರಚಾರಕ್ಕೆ ಐಎಂಎ ಹಣ ಬಳಸಿಲ್ಲವೇ’ ಎಂದು ಪ್ರಶ್ನಿಸಿರುವ ಅವರು, ‘ಇಂಜಾಜ್‌ ಇಂಟರ್‌ನ್ಯಾಷನಲ್‌ ಕಂಪನಿ ಹಣವನ್ನೂ ಉಪಯೋಗಿಸಿದ್ದಾರೆ’ ಎಂದು ಆರೋಪಿಸಿದ್ದಾರೆ.

‘ಐಎಂಎ ಪ್ರಕರಣ
ದಲ್ಲಿ ಜುಲೈ 19ರಂದು ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿ ತಮ್ಮ ತಂದೆಗೆ ನೋಟಿಸ್‌ ನೀಡಿತ್ತು. ಆದರೆ, 16ರಂದೇ ಅವರನ್ನು ವಶಕ್ಕೆ ಪಡೆಯಿತು. ಮೈತ್ರಿ ಸರ್ಕಾರದ ಬೆಂಬಲಕ್ಕೆ ನಿಲ್ಲಲಿಲ್ಲ ಎಂಬ ಕಾರಣಕ್ಕೆ ಈ ರೀತಿ ಮಾಡಲಾಯಿತು. ಹೀಗಾಗಿ, ರಾಜ್ಯ
ಪಾಲರನ್ನು ಭೇಟಿ ಮಾಡಿ ರಕ್ಷಣೆಗೆ ಮನವಿ ಮಾಡಿದ್ದೆವು. ಇದರಿಂದ ಎಸ್‌ಐಟಿ ಮುಖ್ಯಸ್ಥರಿಗೆ ಅವರು ಪತ್ರ ಬರೆದಿದ್ದರು ಎಂದು ರುಮಾನ್‌ ಬೇಗ್‌ ಅವರು ಸಮರ್ಥಿಸಿಕೊಂಡಿದ್ದಾರೆ.

ಪ್ರತಿಕ್ರಿಯಿಸಿ (+)