ಬುಧವಾರ, ಸೆಪ್ಟೆಂಬರ್ 30, 2020
21 °C

ಮೊಬೈಲ್ ಹ್ಯಾಕ್: ಸ್ನೇಹಿತರಿಗೆ ಅಶ್ಲೀಲ ಫೋಟೊ ರವಾನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮಹಿಳೆಯೊಬ್ಬರ ಮೊಬೈಲ್ ಹ್ಯಾಕ್ ಮಾಡಿ, ಸ್ನೇಹಿತರಿಗೆ ಮಹಿಳೆಯ ನಂಬರ್‌ನಿಂದ ಅಶ್ಲೀಲ ಫೋಟೊ ರವಾನೆ ಮಾಡಿರುವ ಸಂಬಂಧ ಬೆಂಗಳೂರು ದಕ್ಷಿಣ ವಿಭಾಗದ ಸೆನ್‌ (ಸೈಬರ್‌ ಅಪರಾಧ) ಠಾಣೆಯಲ್ಲಿ ದೂರು ದಾಖಲಾಗಿದೆ.

ಬಸವನಗುಡಿ ನಿವಾಸಿ ಯಾಗಿರುವ 36 ವರ್ಷದ ಮಹಿಳೆ ತನ್ನ ಸ್ನೇಹಿತರೊಂದಿಗೆ ವಾಟ್ಸ್ಆ್ಯಪ್ ಗ್ರೂಪ್ ಮಾಡಿಕೊಂಡಿದ್ದರು. ಅದರಲ್ಲಿ ಈ ಮಹಿಳೆ ಅಡ್ಮಿನ್ ಆಗಿದ್ದರು. ಇತ್ತೀಚೆಗೆ ಅಪರಿಚಿತರೊಬ್ಬರು ಮಹಿಳೆಗೆ ಕರೆ ಮಾಡಿದ್ದರು. ಒಂದು ಲಿಂಕ್ ಕಳಿಸಿದ್ದು, ಅದನ್ನು ತೆರೆಯುವಂತೆ ಹೇಳಿದ್ದರು. ಲಿಂಕ್ ತೆರೆದ ಕೂಡಲೇ ಮಹಿಳೆಯ ನಂಬರ್ ಹ್ಯಾಕ್ ಆಗಿದೆ.

ಇದಾದ ಬಳಿಕ ಗ್ರೂಪ್‍ನಲ್ಲಿದ್ದ ಎಲ್ಲರಿಗೂ ಮಹಿಳೆಯ ನಂಬರ್‌ನಿಂದ ಅಶ್ಲೀಲ ಚಿತ್ರಗಳು ಹಾಗೂ ವಿಡಿಯೊಗಳನ್ನು ರವಾನಿ ಸಿದ್ದಾರೆ. ಅದೇ ನಂಬರ್‌ನಿಂದ ಸ್ನೇಹಿತರಿಗೆ 'ನಿಮ್ಮ ಹಾಟ್ ಪೋಟೊಗಳನ್ನು ಕಳಿಸಿ. ಪ್ರತಿ ಚಿತ್ರಕ್ಕೆ ಹಣ ನೀಡುತ್ತೇವೆ' ಎಂಬ ವೈಯಕ್ತಿಕ ಸಂದೇಶಗಳನ್ನೂ ಕಳಿಸಿದ್ದಾರೆ.ಇದರಿಂದ ಬೇಸತ್ತ ಮಹಿಳೆಯು ಪೊಲೀಸರಿಗೆ ದೂರು ನೀಡಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು