ಸೋಮವಾರ, ಮಾರ್ಚ್ 27, 2023
31 °C

ವಿಚಾರಣಾಧೀನ ಕೈದಿಗಾಗಿ ನೀಡಲು ತಂದಿದ್ದ ಮೊಬೈಲ್ ಜಪ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾಧೀನ ಮಹಿಳಾ ಕೈದಿಯೊಬ್ಬರಿಗೆ ನೀಡಲು ತಂದಿದ್ದ ಮೊಬೈಲ್ ಜಪ್ತಿ ಮಾಡಲಾಗಿದ್ದು, ಎಫ್‌ಐಆರ್ ದಾಖಲಾಗಿದೆ.

‘ವಿಚಾರಣಾಧೀನ ಕೈದಿ ಜಯಮ್ಮ ಎಂಬುವವರನ್ನು ಭೇಟಿಯಾಗಲು ಬಂದಿದ್ದ ರಾಮನಗರದ ಗುರು ಲಕ್ಷ್ಮಮ್ಮ ಎಂಬುವವರ ಬ್ಯಾಗ್‌ನಲ್ಲಿ ಮೊಬೈಲ್ ಪತ್ತೆಯಾಗಿದೆ. ಈ ಬಗ್ಗೆ ಜೈಲಿನ ಸಿಬ್ಬಂದಿ ದೂರು ನೀಡಿದ್ದಾರೆ. ಜಯಮ್ಮ ಹಾಗೂ ಗುರು ಲಕ್ಷ್ಮಮ್ಮ ಇಬ್ಬರ ವಿರುದ್ಧವೂ ಪ್ರಕರಣ ದಾಖಲಿಸಿಕೊಳ್ಳಲಾ ಗಿದೆ’ ಎಂದು ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಹೇಳಿದರು.

‘ಜ. 23ರಂದು ಮಧ್ಯಾಹ್ನ ಗುರು ಲಕ್ಷ್ಮಮ್ಮ ಜೈಲಿಗೆ ಬಂದಿದ್ದರು. ಬ್ಯಾಗ್‌ನಲ್ಲಿ ನೋಕಿಯಾ ಮೊಬೈಲ್, ಚಾರ್ಜರ್ ಹಾಗೂ ಇಯರ್ ಫೋನ್ ಇಟ್ಟುಕೊಂಡಿದ್ದರು. ಅದನ್ನು ಜಯಮ್ಮ ಅವರಿಗೆ ನೀಡುವುದು ಉದ್ದೇಶವಾಗಿತ್ತು. ಅನುಮಾನಗೊಂಡ ಸಿಬ್ಬಂದಿ, ಬ್ಯಾಗ್ ಪರಿಶೀಲಿಸಿದಾಗ ಮೊಬೈಲ್ ಪತ್ತೆಯಾಗಿದೆ’ ಎಂದು ಅವರು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು