ಬೆಂಗಳೂರು: ಕೃಷಿಯಲ್ಲಿ ತಾಂತ್ರಿಕತೆಯನ್ನು ಬಳಸಿಕೊಳ್ಳುವುದು, ಮೌಲ್ಯವರ್ಧನೆ ಮಾಡುವುದು, ಉದ್ಯಮಶೀಲರಾಗುವುದು ಹೇಗೆ ಎಂಬ ಬಗ್ಗೆ ‘ಫಸ್ಟ್ ಸರ್ಕಲ್ ಉದ್ಯಮಿ ಒಕ್ಕಲಿಗ ಎಕ್ಸ್ಪೊ–2025’ರ ಎರಡನೇ ದಿನವಾದ ಶನಿವಾರ ಗಂಭೀರ ಚರ್ಚೆಗಳು ನಡೆದವು.

ಕೃಷಿ ಬಗೆಗಿನ ವಿವಿಧ ಗೋಷ್ಠಿಗಳು ಮುಖ್ಯ ವೇದಿಕೆಯಲ್ಲಿ ನಡೆದರೆ, ವಿವಿಧ ವಿಷಯಗಳ ಬಗ್ಗೆ ಬಿಸಿನೆಸ್ ವೇದಿಕೆಯಲ್ಲಿ ವಿಚಾರಮಂಡನೆಗಳಾದವು.

ಕಾರ್ಯಕ್ರಮ ಉದ್ಘಾಟಿಸಿದ ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ , ‘ಸಮುದಾಯದ ಸಾಂಪ್ರದಾಯಿಕ ಶಕ್ತಿಯನ್ನು ಉಳಿಸಿಕೊಂಡು ಆಧುನಿಕ ಸವಾಲುಗಳೊಂದಿಗೆ ಕೃಷಿಯನ್ನು ಅಳವಡಿಸಿಕೊಳ್ಳುವ ಅಗತ್ಯವಿದೆ. ಕೃಷಿ ನಮ್ಮ ಅಡಿಪಾಯ. ಆದರೆ, ಜಾಗತೀಕರಣವು ಹಲವಾರು ಸವಾಲು ಮತ್ತು ಅವಕಾಶಗಳನ್ನು ಒಡ್ಡಿದೆ. ಮುಂದಿನ ಪೀಳಿಗೆಯನ್ನು ಬೆಂಬಲಿಸಲು ಸಂಪ್ರದಾಯದೊಂದಿಗೆ ಹೊಸತನವನ್ನು ಸಂಯೋಜಿಸಬೇಕು’ ಎಂದು ಸಲಹೆ ನೀಡಿದರು.

ಚಿಕ್ಕಬಳ್ಳಾಪುರ ಮತ್ತು ಕೋಲಾರದಂತಹ ಜಿಲ್ಲೆಗಳಲ್ಲಿ ನೀರಿನ ಕೊರತೆಯನ್ನು ನೀಗಿಸಲು ಮತ್ತು ವೈವಿಧ್ಯ ಬೆಳೆಗಳನ್ನು ಬೆಳೆಯಲು ರೈತರು ಸುಧಾರಿತ ತಂತ್ರಜ್ಞಾನಗಳನ್ನು ಬಳಸುತ್ತಿದ್ದಾರೆ. ಕಡಿಮೆ ನೀರಿನ ಬೆಳೆಗಳಾದ ಡ್ರ್ಯಾಗನ್, ಖರ್ಜೂರಗಳನ್ನು ಸೂಕ್ಷ್ಮ ನೀರಾವರಿ ತಂತ್ರಗಳು ಮತ್ತು ಇಸ್ರೇಲಿ ತಂತ್ರಜ್ಞಾನ ಅಳವಡಿಸಿಕೊಂಡು ಬೆಳೆಸುತ್ತಿದ್ದಾರೆ ಎಂದು ವಿವರಿಸಿದರು.

ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಮಾತನಾಡಿ, ‘ಆರ್ಥಿಕ ಸಬಲೀಕರಣವೇ ಎಲ್ಲದರ ಹಿಂದಿನ ಮೂಲತತ್ವವಾಗಿದೆ. ಹಿಂದೆ ಕೃಷಿ ಸಾಕಿತ್ತು. ಆನಂತರ ಉದ್ಯಮಗಳು ಬೇಕಾದವು. ಈಗ ಕೃಷಿ ಉದ್ಯಮಗಳು ಪ್ರಾಧಾನ್ಯ ಪಡೆಯುತ್ತಿವೆ’ ಎಂದರು.

‘ತಾಂತ್ರಿಕ ಪ್ರಗತಿ ಮತ್ತು ಜಾಗತೀಕರಣದೊಂದಿಗೆ ನಾವು ಸ್ಪರ್ಧಾತ್ಮಕವಾಗಿ ಉಳಿಯಲು ಇತರ ಕ್ಷೇತ್ರಗಳನ್ನು ಅನ್ವೇಷಿಸಬೇಕು. ನಮ್ಮ ಸಮುದಾಯದ ಯುವಕರನ್ನು ಪ್ರೇರೇಪಿಸಲು ಫಸ್ಟ್ ಸರ್ಕಲ್ ಉದ್ಯಮಿ ಒಕ್ಕಲಿಗದಂತಹ ವೇದಿಕೆಗಳು ಅಗತ್ಯ. ಎಫ್ಸಿ ನೆಕ್ಸ್ಟ್ ಆ್ಯಪ್ನಲ್ಲಿ ಎಲ್ಲ ವಿವರಗಳು ಸಮುದಾಯದ ಯುವಪೀಳಿಗೆಗೆ ಸಿಗುತ್ತಿದೆ’ ಎಂದು ಶ್ಲಾಘಿಸಿದರು.

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಕುಲಪತಿ ಎಸ್.ವಿ. ಸುರೇಶ್, ಎಫ್ಸಿ ರಾಜ್ಯಾಧ್ಯಕ್ಷ ನಂದೀಶ್ ರಾಜೇಗೌಡ, ಜೀನಿ ಪ್ರಾಡಕ್ಟ್ಸ್ ವ್ಯವಸ್ಥಾಪಕ ನಿರ್ದೇಶಕ ದಿಲೀಪ್ ಕುಮಾರ್, ಮಂಡ್ಯದ ಜಂಟಿ ಕೃಷಿ ನಿರ್ದೇಶಕ ವಿ.ಎಸ್ ಅಶೋಕ್, ಕೃಷಿ ವಿಜ್ಞಾನ ವಿಶ್ವವಿದ್ಯಾಲಯದ ಮಂಜುನಾಥ್ ಗೌಡ, ಕೆಎಸ್ಟಿಇಪಿಎಸ್ ನಿವೃತ್ತ ವ್ಯವಸ್ಥಾಪಕ ನಿರ್ದೇಶಕ ಹೊನ್ನೇಗೌಡ, ನಾಗರಾಜ್ ಗೌಡ ಉಪಸ್ಥಿತರಿದ್ದರು.

ಬೆಂಬಲಿತ ಪರಿಸರ ಅಗತ್ಯ:

ರಾಯಪುರ ‘ಉದ್ಯಮಿ ಒಕ್ಕಲಿಗ ವೇದಿಕೆಯು ಒಕ್ಕಲಿಗ ಸಮುದಾಯಕ್ಕೆ ಪರಿವರ್ತಕ ವೇದಿಕೆಯನ್ನು ರಚಿಸುತ್ತಿದೆ. ಕೃಷಿಯಲ್ಲಿ ನಮ್ಮ ಬೇರುಗಳು ಆಳವಾಗಿ ಹುದುಗಿವೆ. ಅದನ್ನು ಉಳಿಸಿಕೊಂಡೇ ಉದ್ಯಮಶೀಲರಾಗಲು ಕೈಗಾರಿಕೆ ಸೇರಿ ಇತರ ಕ್ಷೇತ್ರಗಳಲ್ಲಿ ಸಾಧನೆ ಮಾಡಲು ಇದು ಒಳ್ಳೆಯ ಸಮಯ ಎಂದು ಫಸ್ಟ್ ಸರ್ಕಲ್ನ ಮುಖ್ಯ ಮಾರ್ಗದರ್ಶಕ ಜಯರಾಮ್ ರಾಯಪುರ ತಿಳಿಸಿದರು. ಸಮುದಾಯವು ಉತ್ಪಾದಕರು ಮತ್ತು ಪೂರೈಕೆದಾರರನ್ನು ಉತ್ತೇಜಿಸುವ ಬೆಂಬಲಿಸುವ ಮೂಲಕ ಸಾಮೂಹಿಕ ಬೆಳವಣಿಗೆ ಕಾಣಬಹುದು. ಒಕ್ಕಲಿಗ ಉದ್ಯಮಿಗಳ ನಡುವೆ ಆತ್ಮವಿಶ್ವಾಸ ಮತ್ತು ಸಹಕಾರವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮವು ಮಹತ್ವದ ಹೆಜ್ಜೆಯಾಗಿದೆ. 10 ಚಿಂತನಾ ಸಭೆಗಳ ಮೂಲಕ ನೆಟ್ವರ್ಕಿಂಗ್ ಮತ್ತು ಜ್ಞಾನ-ಹಂಚಿಕೆಯನ್ನು ಸುಗಮಗೊಳಿಸಲಿದೆ. 14 ಪ್ರಮುಖ ಕ್ಷೇತ್ರಗಳಲ್ಲಿ ಒಕ್ಕಲಿಗ ಉದ್ಯಮಿಗಳನ್ನು ಸಂಘಟಿಸಲಾಗುವುದು ಎಂದರು.

ಆಕರ್ಷಣೆಯ ಕೇಂದ್ರ

ಫಸ್ಟ್ ಸರ್ಕಲ್ ಉದ್ಯಮಿ ಒಕ್ಕಲಿಗ ಎಕ್ಸ್ಪೊದಲ್ಲಿರುವ ಪ್ರದರ್ಶನಗಳು ಆಕರ್ಷಣೆಯ ಕೇಂದ್ರಗಳಾಗಿದ್ದವು. ಕೃಷಿ ಅಗ್ರಿಟೆಕ್ ಮಹಿಳಾ ಉದ್ಯಮಶೀಲತೆ ಆಹಾರ ಮತ್ತು ಆತಿಥ್ಯ ರಿಯಲ್ ಎಸ್ಟೇಟ್ ನಿರ್ಮಾಣ ಶಿಕ್ಷಣ ಮತ್ತು ಆರೋಗ್ಯ ರಕ್ಷಣೆಯಂತಹ ಪ್ರಮುಖ ಕ್ಷೇತ್ರಗಳ ವ್ಯಾಪಾರ ಅವಕಾಶಗಳು ಮತ್ತು ಚರ್ಚೆಗಳನ್ನು ಒಂದು ಕಡೆ ಪ್ರದರ್ಶಿಸುತ್ತಿದ್ದರೆ ಗ್ರಾಮೀಣ ಜನಜೀವನ ಶೈಲಿಯನ್ನು ಅನಾವರಣಗೊಳಿಸುವ ಮೂಲಕ ಸಾಕಷ್ಟು ಕಿರು ಮತ್ತು ಮಧ್ಯಮ ಉದ್ಯಮಿಗಳಿಗೆ ಉತ್ಪನ್ನಗಳನ್ನು ಪ್ರದರ್ಶಿಸಲು ಮತ್ತು ಮಾರಾಟ ಮಾಡಲು ಮಳಿಗೆ ವ್ಯವಸ್ಥೆ ರೂಪಿಸಿದೆ. ಸಾಂಪ್ರದಾಯಿಕ ಎತ್ತಿನ ಗಾಣ ಎಕ್ಸ್ಪೊದ ಪ್ರಮುಖ ಆಕರ್ಷಣೆಯಾಗಿದೆ. ಮಂಡ್ಯ ಬೆಲ್ಲ ಸಾವಯವ ತರಕಾರಿ ನೈಸರ್ಗಿಕ ಆಹಾರ ಉತ್ಪನ್ನಗಳು ವೀಕ್ಷಕರನ್ನು ಸೆಳೆಯುತ್ತಿವೆ. ಆಹಾರ ಮಳಿಗೆಗಳಲ್ಲಿ ಜನರು ಸಸ್ಯಾಹಾರ ಮತ್ತು ಮಾಂಸಾಹಾರದ ವಿವಿಧ ಸವಿಗಳನ್ನು ಸವಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.