ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನ ರಸ್ತೆಗಳ ಸ್ಥಿತಿ: ತೇಜಸ್ವಿ ಸೂರ್ಯ ವಿರುದ್ಧ ಮೋಹನ್ ದಾಸ್ ಪೈ ಕಿಡಿ

Last Updated 11 ನವೆಂಬರ್ 2022, 10:48 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರಿನ ರಸ್ತೆಗಳ ಪರಿಸ್ಥಿತಿ ಉಲ್ಲೇಖಿಸಿ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಉದ್ಯಮಿ ಟಿ.ವಿ.ಮೋಹನ್‌ದಾಸ್‌ ಪೈ ಕಿಡಿಕಾರಿದ್ದಾರೆ.

‘ದಯವಿಟ್ಟು ಬೆಂಗಳೂರಿನಲ್ಲಿ ಹೆಚ್ಚಿನ ಸಮಯ ಕಳೆಯಿರಿ. ನಮಗೆ ಉತ್ತಮ ರಸ್ತೆಗಳು ದೊರೆಯಲಿ. ಗುಂಡಿಗಳ ಮುಕ್ತ ರಸ್ತೆಗಳು ಬೇಕು. ಉತ್ತಮ ಸಂಚಾರ ವ್ಯವಸ್ಥೆ, ಕಸ ಇಲ್ಲದ ಸ್ವಚ್ಛ ರಸ್ತೆಗಳು ದೊರೆಯುವಂತಾಗಲಿ. ನೀವು ನಮ್ಮ ಸಂಸದರು. ನಿಮ್ಮ ಅಗತ್ಯತೆ ನಮಗೆ ಇಲ್ಲಿ ಬಹಳ ಇದೆ. ಇಲ್ಲಿಯೂ ಅದೇ ಡಬಲ್‌ ಎಂಜಿನ್‌ ಇದೆ. ಆದರೆ, ಅದು ಇಲ್ಲಿ ಕಾರ್ಯನಿರ್ವಹಿಸುತ್ತಿಲ್ಲ’ ಎಂದು ಟ್ವೀಟ್‌ ಮಾಡಿದ್ದಾರೆ.

ತೇಜಸ್ವಿ ಸೂರ್ಯ ಅವರು ಸಾಬರಮತಿ ನದಿಗೆ ನಿರ್ಮಿಸಲಾದ ಸೇತುವೆಗೆ ಭೇಟಿ ನೀಡಿದ್ದನ್ನು ಚಿತ್ರಗಳ ಸಮೇತ ಟ್ವೀಟ್‌ ಮಾಡಿದ್ದರು. ಬಿಜೆಪಿ ಸರ್ಕಾರಗಳ ಡಬಲ್‌ ಎಂಜಿನ್‌ನಿಂದಾಗಿ ಗುಜರಾತ್‌ ಜಾಗತಿಕ ಪ್ರವಾಸೋದ್ಯಮ ಕೇಂದ್ರವಾಗುತ್ತಿದೆ ಎಂದು ತೇಜಸ್ವಿ ಸೂರ್ಯ ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದರು.

ಇದಕ್ಕೆ ಪ್ರತಿಕ್ರಿಯಿಸಿ ಮೋಹನ್‌ದಾಸ್‌ ಪೈ ಟ್ವೀಟ್‌ ಮಾಡಿದ್ದಾರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT