ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೈಂಗಿಕ ಕಿರುಕುಳ; ಆರೋಪಿಯ ಬೆನ್ನಟ್ಟಿ ಹಿಡಿದ ಯುವತಿ

Last Updated 27 ಏಪ್ರಿಲ್ 2020, 20:00 IST
ಅಕ್ಷರ ಗಾತ್ರ

ಬೆಂಗಳೂರು: ತನಗೆ ಲೈಂಗಿಕ ಕಿರುಕುಳ ನೀಡಿ ಪರಾರಿಯಾಗಲು ಯತ್ನಿಸಿದ್ದ ಆರೋಪಿಯನ್ನು ಸಂತ್ರಸ್ತ ಯುವತಿಯೇ ಸ್ಥಳೀಯರ ಜೊತೆ ಬೆನ್ನಟ್ಟಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ತರಕಾರಿ ತರಲು ಹೊರಟಿದ್ದ ಯುವತಿ ಗುಪ್ತಾಂಗವನ್ನು ಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದ ಆರೋಪದಡಿ ಮೊಹಮ್ಮದ್ ಫಯಾಜ್ (21) ಎಂಬಾತನನ್ನು ಕಾಟನ್‌ಪೇಟೆ ಪೊಲೀಸರು ಬಂಧಿಸಿದ್ದಾರೆ.

‘ಇದೇ 25ರಂದು ಈ ಘಟನೆ ನಡೆದಿದೆ. ಸ್ಥಳೀಯರೇ ಆರೋಪಿಯನ್ನು ಥಳಿಸಿ ಠಾಣೆಗೆ ಒಪ್ಪಿಸಿದ್ದಾರೆ’ ಎಂದು ಪೊಲೀಸರು ತಿಳಿಸಿದರು.

‘20 ವರ್ಷದ ಯುವತಿ, ತರಕಾರಿ ತರಲೆಂದು ಮನೆಯಿಂದ ಹೊರಗೆ ಬಂದು ರಸ್ತೆಯಲ್ಲಿ ನಡೆದುಕೊಂಡು ಹೊರಟಿದ್ದರು. ಲಾಕ್‌ಡೌನ್‌ ಇದ್ದಿದ್ದರಿಂದ ರಸ್ತೆಯಲ್ಲಿ ಯಾರೂ ಇರಲಿಲ್ಲ. ಕಾಟನ್‌ಪೇಟೆಯ ಸಿದ್ಧಾರ್ಥ ನಗರದ ನಿವಾಸಿಯಾದ ಆರೋಪಿ ಮೊಹಮ್ಮದ್ ಫಯಾಜ್, ಯುವತಿಯ ಗುಪ್ತಾಂಗ ಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದ.’

‘ರಕ್ಷಣೆಗಾಗಿ ಕೂಗಾಡಿದ್ದ ಯುವತಿ, ತಾನೇ ಆರೋಪಿಯನ್ನು ಹಿಡಿದುಕೊಂಡು ಮುಖ್ಯರಸ್ತೆಗೆ ಎಳೆದು ತಂದಿದ್ದರು. ಅಷ್ಟರಲ್ಲೇ ಸ್ಥಳೀಯರು ರಕ್ಷಣೆಗೆ ಬಂದಿದ್ದರು. ಅದೇ ವೇಳೆ ಆರೋಪಿ, ಯುವತಿಯ ಎಡಗೈ ಕಚ್ಚಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಯುವತಿಯೇ ಸ್ಥಳೀಯರ ಜೊತೆ ಸೇರಿ ಬೆನ್ನಟ್ಟಿ ಆರೋಪಿಯನ್ನು ಹಿಡಿದಿದ್ದರು. ನಂತರ, ಸ್ಥಳೀಯರೇ ಆತನನ್ನು ಥಳಿಸಿದ್ದರು’ ಎಂದು ಪೊಲೀಸರು ತಿಳಿಸಿದರು.

‘ಪ್ಲಂಬರ್ ಕೆಲಸ ಮಾಡುತ್ತಿದ್ದ ಆರೋಪಿ ಮೊಹಮ್ಮದ್ ಫಯಾಜ್, ಸರ ಕಳವು ಪ್ರಕರಣದಲ್ಲೂ ಭಾಗಿಯಾಗಿದ್ದ. ಈತನ ವಿರುದ್ಧ ಕೆಂಗೇರಿ ಸೇರಿ ಹಲವು ಠಾಣೆಗಳಲ್ಲಿ ಪ್ರಕರಣಗಳೂ ದಾಖಲಾಗಿದ್ದವು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT