ಮಂಗಳವಾರ, ನವೆಂಬರ್ 19, 2019
26 °C

ಕಾರಿನೊಳಗಿದ್ದ ₹ 36,500 ಕಳವು

Published:
Updated:

ಬೆಂಗಳೂರು: ಕಾರಿನ ಹಿಂಬದಿಯ ಸೀಟಿನಲ್ಲಿದ್ದ ₹ 36,500 ನಗದು, ಡೆಬಿಟ್‌ ಮತ್ತು ಕ್ರೆಡಿಟ್‌ ಕಾರ್ಡ್‌ಗಳನ್ನು ಕಳವು ಮಾಡಿದ ಘಟನೆ ಮೆಜೆಸ್ಟಿಕ್‌ನಲ್ಲಿ ನಡೆದಿದೆ.

ಇದೇ 31ರಂದು ಘಟನೆ ನಡೆದಿದ್ದು, ಈ ಬಗ್ಗೆ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ರಾಮಪ್ರಸಾದ್ ಎಂಬುವವರು ದೂರು ನೀಡಿದ್ದಾರೆ.

‘ಹೆಬ್ಬಾರ್‌ ವೈಷ್ಣವಿ ಸಭಾ ಕಚೇರಿಯಲ್ಲಿ ನಡೆಯುವ ಸಭೆಯಲ್ಲಿ ಭಾಗವಹಿಸಲು ಪತ್ನಿ ಮತ್ತು ಸಹೋದ್ಯೋಗಿಗಳ ಜೊತೆ ಬಂದಿದ್ದೆ. ಕಾರನ್ನು ಕಚೇರಿ ಬಳಿಯ ಪಾರ್ಕಿಂಗ್‌ ಸ್ಥಳದಲ್ಲಿ ನಿಲ್ಲಿಸಿದ್ದೆ. ಮರಳಿ ಬಂದಾಗ ಹಣ ಕಳವು ಆಗಿರುವುದು ಗಮನಕ್ಕೆ ಬಂತು. ಕಾರಿನ ಹಿಂಬದಿಯ ಬಲಭಾಗದ ಕಿಟಿಕಿ ಗಾಜನ್ನು ಒಡೆದು ಕಳವು ಮಾಡಲಾಗಿದೆ’ ಎಂದು ದೂರಿನಲ್ಲಿ ಅವರು ತಿಳಿಸಿದ್ದಾರೆ.

ಪ್ರತಿಕ್ರಿಯಿಸಿ (+)