ಅಭಿಷೇಕ್‌ಗೆ ಗೆಲುವು

7
ಬೆಂಗಳೂರು ರೌಂಡ್‌ನ ಅಲ್ಟಿಮೇಟ್ ಬಾರ್ ಟೆಂಡರ್ ಚಾಂಪಿಯನ್‌ಷಿಪ್‌

ಅಭಿಷೇಕ್‌ಗೆ ಗೆಲುವು

Published:
Updated:

ಬೆಂಗಳೂರು: ಸರ್ಜಾಪುರ ರಸ್ತೆಯ ಬಿಗ್ ಬ್ರೂಸ್ಕಿಯಲ್ಲಿ ನಡೆದ ಮಂಕಿ ಶೋಲ್ಡರ್‌ನ ಬೆಂಗಳೂರು ರೌಂಡ್‌ನ ಅಲ್ಟಿಮೇಟ್ ಬಾರ್ ಟೆಂಡರ್ ಚಾಂಪಿಯನ್‌ಷಿಪ್‌ನಲ್ಲಿ ಅಭಿಷೇಕ್ ಶೇವಾದೆ ವಿಜೇತರಾಗಿದ್ದಾರೆ. ಈ ಸ್ಪರ್ಧೆಯು ಬೆಂಗಳೂರಿನ ಬಾರ್ ಟೆಂಡರ್‌ಗಳ ಸಾಮರ್ಥ್ಯ ಮತ್ತು ಕಲೆಯನ್ನು ಒರೆಗೆ ಹಚ್ಚಿದೆ.

ತಮ್ಮ ಗೆಲುವಿನ ಕುರಿತಾಗಿ ಮಾತನಾಡಿದ ಅಭಿಷೇಕ್, ‘ಮುಂದೆ ನವದೆಹಲಿಯಲ್ಲಿ ನಡೆಯುವ ಇಂಡಿಯಾ ಗ್ರ್ಯಾಂಡ್‌ ಫಿನಾಲೆಯಲ್ಲಿ ಭಾಗವಹಿಸಲು ನಾನು ಉತ್ಸುಕನಾಗಿದ್ದೇನೆ. ಇದು ನಾನು ಭಾಗವಹಿಸಿದ ಅತ್ಯುತ್ತಮ ಸ್ಪರ್ಧೆಗಳಲ್ಲಿ ಇದು ಒಂದಾಗಿತ್ತು’ ಎಂದರು.

ಅಭಿಷೇಕ್ ನವದೆಹಲಿಯಲ್ಲಿ ಜೂನ್ 28ರಂದು ನಡೆಯುವ ಇಂಡಿಯಾ ಗ್ರಾಂಡ್ ಫಿನಾಲೆಯಲ್ಲಿ ಭಾಗವಹಿಸಲಿದ್ದಾರೆ. ರಾಷ್ಟ್ರೀಯ ಸ್ಪರ್ಧೆಯ ವಿಜೇತರು, ಪಾನೀಯ ಉದ್ಯಮದ ಪ್ರತಿಷ್ಠಿತ ಉತ್ಸವವಾದ ಅಥೆನ್ಸ್ ಬಾರ್ ಶೋದಲ್ಲಿ ಭಾಗವಹಿಸುವ ಅವಕಾಶ ಹೊಂದಿದ್ದಾರೆ. ಈ ಸಂದರ್ಭದಲ್ಲಿ ಮಂಕಿ ಶೋಲ್ಡರ್‌ನ ಪಂಕಜ್, ಪ್ರಚಾರ ರಾಯಭಾರಿ ಬಾಲಚಂದ್ರನ್‌ ಇದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry