ಭಾನುವಾರ, ಮಾರ್ಚ್ 29, 2020
19 °C

‘ಕೋತಿಗಳ ಸ್ಥಳಾಂತರ ವ್ಯರ್ಥ ಪ್ರಯತ್ನ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ನಗರದಲ್ಲಿ ಮಂಗಗಳನ್ನು ಹಿಡಿದು ಸ್ಥಳಾಂತರ ಮಾಡಲು ನೀಡಿರುವ ಅನುಮತಿಯನ್ನು ಅರಣ್ಯ ಇಲಾಖೆ ಹಿಂಪಡೆಯಬೇಕು’ ಎಂದು ಸಂಸದೆ ಮೇನಕಾ ಗಾಂಧಿ ಒತ್ತಾಯಿಸಿದರು.

ಪಿಎಫ್‌ಎ ವೈಲ್ಡ್‌ಲೈಫ್‌ ಆಸ್ಪತ್ರೆಯು ಬೆಂಗಳೂರು ಇಂಟರ್‌ನ್ಯಾಷನಲ್‌ ಸೆಂಟರ್‌ನಲ್ಲಿ ಶನಿವಾರ ಆಯೋಜಿಸಿದ್ದ ‘ಲಿವಿಂಗ್‌ ವಿತ್‌ ವೈಲ್ಡ್‌’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಕಾಡು ಪ್ರಾಣಿಗಳನ್ನು ನಗರದಿಂದ ಹೊರದೂಡಿದರೆ, ಹೂವು ಮತ್ತು ಪರಿಶುದ್ಧ ಗಾಳಿಯನ್ನು ಹೊರದೂಡಿದಂತೆ. ಕೋತಿಗಳನ್ನು ಹಿಡಿದು ಸ್ಥಳಾಂತರ ಮಾಡಲು ಕೋಟಿಗಟ್ಟಲೆ ಖರ್ಚು ಮಾಡಲಾಗಿದೆ. ಆದರೆ, ನೀವು ಎಷ್ಟೇ ದೂರ ಕೊಂಡೊಯ್ದು ಬಿಟ್ಟರೂ ಅವು ಮತ್ತೆ ಹಿಂದಿರುಗುತ್ತಿವೆ. ಹೀಗಾಗಿ ಅವುಗಳನ್ನು ಸ್ಥಳಾಂತರ ಮಾಡುವ ವ್ಯರ್ಥ ಪ್ರಯತ್ನಕ್ಕೆ ಕೈ ಹಾಕಬಾರದು’ ಎಂದರು.

‘ಬೆಂಗಳೂರಿನಲ್ಲಿ ಮಂಗಗಳು, ಜಿಂಕೆಗಳು, ವಿವಿಧ ಜಾತಿಯ ಪಕ್ಷಿಗಳು, ಹಲ್ಲಿಗಳಿವೆ. ಇಲಿಗಳಿಗೂ ಆಶ್ರಯ ನೀಡಿರುವ ಬೆಂಗಳೂರಿನ ಜನರಿಗೆ ಧನ್ಯವಾದಗಳು’ ಎಂದರು.

ಪರಿಸರ ವಾದಿ ಲಿಯೊ ಸಲ್ಡಾನ ಮಾತನಾಡಿ, ‘ಪಶ್ಚಿಮ ಬಂಗಾಳದಲ್ಲಿ ಆನೆಗಳು ರೈಲಿಗೆ ಸಿಲುಕಿ ಸಾಯುತ್ತಿವೆ. ಮನುಷ್ಯ ಮಾಡಿಕೊಂಡಿರುವ ನಿಯಮಗಳನ್ನು ಪ್ರಾಣಿಗಳು ಪಾಲಿಸಬೇಕೆ? ಈ ರೀತಿಯ ಸೂಕ್ಷ್ಮತೆಗಳನ್ನು
ಅರಣ್ಯ ಇಲಾಖೆ ಗಮನಿಸಬೇಕು’ ಎಂದರು.

‌ಚರ್ಚೆಯಲ್ಲಿ ಭಾಗವಹಿಸಿದ್ದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಂಜಯ್ ಮೋಹನ್, ‘ಅರಣ್ಯ ಇಲಾಖೆಯು ವನ್ಯಜೀವಿಗಳ ವಿಷಯದಲ್ಲಿ ಸೂಕ್ಷ್ಮತೆಗಳನ್ನು ಗಮನಿಸಿಕೊಂಡೇ ಕೆಲಸ ಮಾಡುತ್ತಿದೆ’ ಎಂದು ಸಮರ್ಥಿಸಿಕೊಂಡರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು